ಭಾರತ vs ಇಂಗ್ಲೆಂಡ್ ಪಂದ್ಯದಲ್ಲಿ ಎಲ್ಲರ ಕಣ್ಣು RCB ಆಟಗಾರರ ಮೇಲೆ..!

India vs England: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಆರ್​ಸಿಬಿ ಟೀಮ್​ನ ಯಾವುದೇ ಆಟಗಾರ ಸ್ಥಾನ ಪಡೆದಿಲ್ಲ. ಆದರೆ ಅತ್ತ ಇಂಗ್ಲೆಂಡ್ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲೇ ಆರ್​ಸಿಬಿ ತಂಡದ ಮೂವರು ಆಟಗಾರರು ಕಾಣಿಸಿಕೊಂಡಿದ್ದಾರೆ. ಹೀಗಾಗಿ ಭಾರತದ ವಿರುದ್ಧ ಈ ಮೂವರ ಪ್ರದರ್ಶನ ಹೇಗಿರಲಿದೆ ಎಂಬುದೇ ಈಗ ಕುತೂಹಲ.

ಝಾಹಿರ್ ಯೂಸುಫ್
|

Updated on: Jan 22, 2025 | 10:54 AM

ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯು ಇಂದಿನಿಂದ (ಜ.22) ಶುರುವಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ಬಲಿಷ್ಠ ಪ್ಲೇಯಿಂಗ್ ಇಲೆವೆನ್​ ಅನ್ನು ಹೆಸರಿಸಿದೆ. ವಿಶೇಷ ಎಂದರೆ ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ಆರ್​ಸಿಬಿ ತಂಡದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಅವರೆಂದರೆ....

1 / 5
ಫಿಲ್ ಸಾಲ್ಟ್: ಟೀಮ್ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರೆ. ಹೊಡಿಬಡಿ ದಾಂಡಿಗ ಸಾಲ್ಟ್ ಅವರನ್ನು ಈ ಬಾರಿ ಆರ್​ಸಿಬಿ ಬರೋಬ್ಬರಿ 11.50 ಕೋಟಿ ರೂ. ನೀಡಿ ಖರೀದಿಸಿದೆ. ಇದೀಗ ಫಿಲ್ ಸಾಲ್ಟ್ ಇಂಗ್ಲೆಂಡ್ ಪರ ಆರಂಭಿಕನಾಗಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದೇ ಆರ್​ಸಿಬಿ ಅಭಿಮಾನಿಗಳ ಕುತೂಹಲ.

2 / 5
ಲಿಯಾಮ್ ಲಿವಿಂಗ್​ಸ್ಟೋನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಂಗ್ಲೆಂಡ್ ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್ ಅವರನ್ನು ಈ ಬಾರಿ 8.75 ಕೋಟಿ ರೂ. ನೀಡಿ ಖರೀದಿಸಿದೆ. ಬಿರುಸಿನ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿರುವ ಲಿವಿಂಗ್​ಸ್ಟೋನ್ ಭಾರತದ ವಿರುದ್ಧ ಅಬ್ಬರಿಸಲಿದ್ದಾರಾ ಕಾದು ನೋಡಬೇಕಿದೆ.

3 / 5
ಜೇಕಬ್ ಬೆಥೆಲ್: ಇಂಗ್ಲೆಂಡ್ ತಂಡದ ಯುವ ಆಲ್​ರೌಂಡರ್ ಜೇಕಬ್ ಬೆಥೆಲ್ ಅವರನ್ನು ಆರ್​ಸಿಬಿ 2.60 ಕೋಟಿ ರೂ.ಗೆ ಖರೀದಿಸಿದೆ. 21 ವರ್ಷದ ಬೆಥೆಲ್ ಕೂಡ ಇಂಗ್ಲೆಂಡ್ ತಂಡದ ಪ್ಲೇಯಿಂಗ್ ಇಲೆವೆನ್​ನ ಭಾಗವಾಗಿದ್ದಾರೆ. ಹೀಗಾಗಿಯೇ ಯುವ ಆಟಗಾರನ ಪ್ರದರ್ಶನ ಹೇಗಿರಲಿದೆ ಎಂಬುದೇ ಆರ್​ಸಿಬಿ ಫ್ಯಾನ್ಸ್​ನ ಕುತೂಹಲ.

4 / 5
ಭಾರತದ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್:  ಬೆನ್ ಡಕೆಟ್, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಕಬ್ ಬೆಥೆಲ್, ಜೇಮಿ ಓವರ್‌ಟನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.

5 / 5
Follow us