AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಗುಜರಾತ್ ಟೈಟಾನ್ಸ್ ಮಾರಾಟಕ್ಕಿದೆ: ಐಪಿಎಲ್ ಮೇಲೆ ಕಣ್ಣಿಟ್ಟಿ ಅದಾನಿ ಗ್ರೂಪ್

IPL 2025: ಮೂರು ವರ್ಷಗಳ ಹಿಂದೆ ಅದಾನಿ ಗ್ರೂಪ್ ಐಪಿಎಲ್​ನಲ್ಲಿ ಗುಜರಾತ್ ಫ್ರಾಂಚೈಸಿಯ ತಂಡವನ್ನು ಖರೀದಿಸಲು ಮುಂದಾಗಿದ್ದರು. ಇದಕ್ಕಾಗಿ ಅದಾನಿ ಗ್ರೂಪ್ 5,100 ಕೋಟಿ ರೂ. ಬಿಡ್ಡಿಂಗ್ ಮಾಡಿದ್ದರು. ಆದರೆ CVC ಕ್ಯಾಪಿಟಲ್ ಪಾರ್ಟ್ನರ್ಸ್ 5625 ಕೋಟಿ ರೂ. ನೀಡುವ ಮೂಲಕ ಗುಜರಾತ್ ಫ್ರಾಂಚೈಸಿ ತಂಡವನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದರು.

ಝಾಹಿರ್ ಯೂಸುಫ್
|

Updated on: Jul 20, 2024 | 10:04 AM

Share
CVC ಕ್ಯಾಪಿಟಲ್ ಪಾರ್ಟ್ನರ್ಸ್ ಮಾಲೀಕತ್ವದ ಗುಜರಾತ್ ಟೈಟಾನ್ಸ್​ ಫ್ರಾಂಚೈಸಿಯು ತನ್ನ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಐಪಿಎಲ್​ನಲ್ಲಿ ಮೂರು ಸೀಸನ್​ನಲ್ಲಿ ಆಡಿರುವ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ತನ್ನ ಷೇರಿನ ಬಹುಪಾಲನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಈ ಷೇರುಗಳ ಖರೀದಿಗೆ ಅದಾನಿ ಗ್ರೂಪ್ ಹಾಗೂ ಟೊರೆಂಟ್ ಗ್ರೂಪ್ ಆಸಕ್ತಿ ಹೊಂದಿದೆ ಎಂದು ವರದಿಯಾಗಿದೆ.

1 / 5
ಅದಾನಿ ಗ್ರೂಪ್ ಈಗಾಗಲೇ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಹೊಂದಿದೆ. ಅಲ್ಲದೆ ಈ ಹಿಂದೆ ಐಪಿಎಲ್​ ತಂಡಗಳ ಖರೀದಿಗೆ ಮುಂದಾದರೂ, ಬಿಡ್ಡಿಂಗ್​ನಲ್ಲಿ ವಿಫಲವಾಗಿತ್ತು. ಇದೀಗ ಗುಜರಾತ್ ಟೈಟಾನ್ಸ್ ತಂಡವು ತನ್ನ ಷೇರುಗಳನ್ನು ಮಾರಾಟಕ್ಕಿರುವ ಕಾರಣ ಅದಾನಿ ಗ್ರೂಪ್ ಐಪಿಎಲ್​ಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ.

2 / 5
2021 ರಲ್ಲಿ CVC ಕ್ಯಾಪಿಟಲ್ ಪಾರ್ಟ್ನರ್ಸ್ ಕಂಪೆನಿಯು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯನ್ನು ಬರೋಬ್ಬರಿ​ 5625 ಕೋಟಿ ರೂ. ನೀಡಿ ಖರೀದಿಸಿತ್ತು. ಇದೀಗ ಮೂರು ವರ್ಷಗಳ ಬಳಿಕ ತಂಡದ ಮಾಲೀಕತ್ವದ ಬಹುಪಾಲನ್ನು ಮಾರಾಟ ಮಾಡಲು ಮುಂದಾಗಿರುವುದು ವಿಶೇಷ.

3 / 5
ಅದರಂತೆ ಮೂರು ವರ್ಷಗಳಷ್ಟು ಹಳೆಯದಾದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ಮೌಲ್ಯ ಸುಮಾರು 1.5 ಶತಕೋಟಿ ಎನ್ನಲಾಗುತ್ತಿದೆ. ಹೀಗಾಗಿ ಗುಜರಾತ್ ಟೈಟಾನ್ಸ್​ನ ಷೇರನ್ನು ಯಾರು ಖರೀದಿಸಲಿದ್ದಾರೆ ಎಂಬುದೇ ಕುತೂಹಲ. ಏಕೆಂದರೆ ಹೊಸ ತಂಡಗಳು ಪಾಲನ್ನು ಮಾರಾಟ ಮಾಡಲು 2025ರ ಫೆಬ್ರವರಿವರೆಗೆ ಮಾತ್ರ ಅವಕಾಶವಿದೆ. ಅದಕ್ಕೂ ಮುನ್ನ ಡೀಲ್ ಕುದುರಿಸಿಕೊಳ್ಳಲು ಅದಾನಿ ಗ್ರೂಪ್ ಹಾಗೂ ಟೊರೆಂಟ್ ಗ್ರೂಪ್ CVC ಕ್ಯಾಪಿಟಲ್ ಪಾರ್ಟ್ನರ್ಸ್ ಜೊತೆಗೆ ಮಾತುಕತೆ ನಡೆಸಿದೆ.

4 / 5
ಒಂದು ವೇಳೆ ಅದಾನಿ ಗ್ರೂಪ್ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ಬಹುಪಾಲನ್ನು ಖರೀದಿಸಿದರೆ, ತಂಡದ ಹೆಸರು ಬದಲಾವಣೆಯಾಗುವ ಸಾಧ್ಯತೆಯಿದೆ. ಏಕೆಂದರೆ ಅದಾನಿ ಗ್ರೂಪ್​ ಮಾಲೀಕತ್ವದಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್, ಲೆಜೆಂಡ್ಸ್ ಕ್ರಿಕೆಟ್ ಲೀಗ್, ಪ್ರೋ ಕಬಡ್ಡಿ ಲೀಗ್ ಮತ್ತು ಅಲ್ಟಿಮೇಟ್ ಖೋ ಖೋ ಲೀಗ್​ಗಳಲ್ಲಿ ಗುಜರಾತ್ ಜೈಂಟ್ಸ್ ಹೆಸರಿನ ತಂಡಗಳಿವೆ. ಹೀಗಾಗಿ ಗುಜರಾತ್ ಟೈಟಾನ್ಸ್ ಅದಾನಿ ಪಾಲಾದರೆ, ತಂಡದ ಹೆಸರು ಗುಜರಾತ್ ಜೈಂಟ್ಸ್ ಆಗಿ ಬದಲಾದರೂ ಅಚ್ಚರಿಪಡಬೇಕಿಲ್ಲ.

5 / 5
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ

ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು

ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?

ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!

ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!

ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು

ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ

ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ