AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Harbhajan Singh: ಮಂಕಿಗೇಟ್, ಶ್ರೀಶಾಂತ್ ಕಪಾಳಮೋಕ್ಷ; ಹರ್ಭಜನ್ ಸಿಂಗ್ ವಿವಾದಗಳ ಪಟ್ಟಿ ಬಲು ದೊಡ್ಡದು

Harbhajan Singh: ಹರ್ಭಜನ್ ತಪ್ಪಿತಸ್ಥರೆಂದು ಸಾಬೀತಾಯಿತು ಮತ್ತು ಮೂರು ಪಂದ್ಯಗಳ ನಿಷೇಧಕ್ಕೊಳಗಾದರು. ಈ ನಿರ್ಧಾರದ ವಿರುದ್ಧ ಭಾರತೀಯ ಆಟಗಾರರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿದರು.

TV9 Web
| Updated By: ಪೃಥ್ವಿಶಂಕರ|

Updated on: Dec 24, 2021 | 5:03 PM

Share
ಹರ್ಭಜನ್ ಸಿಂಗ್ ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದಾರೆ. ಭಜ್ಜಿ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳನ್ನು ತ್ಯಜಿಸಿದ್ದಾರೆ. ಅಂದರೆ, ನಾವು ದೇಶೀಯ ಕ್ರಿಕೆಟ್ ಅಥವಾ ಅಂತರರಾಷ್ಟ್ರೀಯ ಅಥವಾ ಯಾವುದೇ ಲೀಗ್​ನಲ್ಲಿ ಆಡುವುದಿಲ್ಲ. ಅವರ ಅಂತರರಾಷ್ಟ್ರೀಯ ವೃತ್ತಿಜೀವನವು 23 ವರ್ಷಗಳವರೆಗೆ ವ್ಯಾಪಿಸಿದೆ. ಈ ಪಯಣದಲ್ಲಿ ಹರ್ಭಜನ್ ಅನೇಕ ಯಶಸ್ಸಿನ ಕಥೆಗಳನ್ನು ರಚಿಸಿದರು. ಜೊತೆಗೆ ಎರಡು ದಶಕಗಳಿಗೂ ಹೆಚ್ಚು ಕಾಲ ಹರ್ಭಜನ್ ಅವರ ವೃತ್ತಿಜೀವನದಲ್ಲಿ ಹಲವು ವಿವಾದಗಳನ್ನು ಸೃಷ್ಟಿಸಿದ್ದಾರೆ.

1 / 7
ಮಂಕಿಗೇಟ್ ವಿವಾದ: ಭಜ್ಜಿ ವಿವಾದಗಳಲ್ಲಿ ಮೊದಲು ಕೇಳಿಬರುವುದು ಮಂಕಿಗೇಟ್ ವಿವಾದ. ಸಿಡ್ನಿ ಟೆಸ್ಟ್‌ನ ಮೂರನೇ ದಿನದ ಪಂದ್ಯದಲ್ಲಿ ಹರ್ಭಜನ್ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು, ಮುಳ್ಳಿನಂತೆ ಅಂಟಿಕೊಂಡಿದ್ದರು. ಈ ವೇಳೆ ಆಂಡ್ರ್ಯೂ ಸೈಮಂಡ್ಸ್ ನಿರಂತರವಾಗಿ ಭಜ್ಜಿ ದೊಡ್ಡ ಹೊಡೆತಗಳನ್ನು ಆಡುವಂತೆ ಪ್ರಚೋದಿಸುತ್ತಿದ್ದರು. ಭಜ್ಜಿ ಸಹಿಷ್ಣುತೆಯ ಮಿತಿಯನ್ನು ತಲುಪಿದಾಗ, ಅವರು ಸೈಮಂಡ್ಸ್‌ಗೆ ಅವಾಚ್ಯ ಶಬ್ದದಿಂದ ನಿಂಧಿಸಿದ್ದರು. ಇದು ಆಸ್ಟ್ರೇಲಿಯಾದ ನಾಯಕ ಪಾಂಟಿಂಗ್‌ಗೆ ಅಸಹನೀಯವೆನಿಸಿತು. ಆಸ್ಟ್ರೇಲಿಯಾದ ನಾಯಕ ರೆಫರಿಗೆ ದೂರು ನೀಡಿದರು. ಭಜ್ಜಿ ಸೈಮಂಡ್ಸ್ ಅನ್ನು ಮಂಗ ಎಂದು ಕರೆದಿದ್ದಾರೆ ಎಂದು ಪಾಂಟಿಂಗ್ ಆರೋಪಿಸಿದ್ದರು. ಐಸಿಸಿ ನಿಯಮಗಳ ಪ್ರಕಾರ, ಜನಾಂಗೀಯ ಟೀಕೆಗಳನ್ನು ಹಂತ 3 ಅಪರಾಧ ಎಂದು ಪರಿಗಣಿಸಲಾಯಿತು. ಇದರಲ್ಲಿ ಹರ್ಭಜನ್ ತಪ್ಪಿತಸ್ಥರೆಂದು ಸಾಬೀತಾಯಿತು ಮತ್ತು ಮೂರು ಪಂದ್ಯಗಳ ನಿಷೇಧಕ್ಕೊಳಗಾದರು. ಈ ನಿರ್ಧಾರದ ವಿರುದ್ಧ ಭಾರತೀಯ ಆಟಗಾರರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿದರು. ಭಜ್ಜಿ ಮೇಲಿನ ಜನಾಂಗೀಯ ಹೇಳಿಕೆಗಳ ಆರೋಪವನ್ನು ಹಿಂಪಡೆಯದಿದ್ದರೆ, ಪ್ರವಾಸವನ್ನು ರದ್ದುಗೊಳಿಸುವ ಸೂಚನೆ ನೀಡಿದರು. ಈ ಇಡೀ ವಿಷಯದಲ್ಲಿ ಹೆಚ್ಚುತ್ತಿರುವ ವಿವಾದವನ್ನು ಕಂಡ ಐಸಿಸಿ ತನ್ನ ವಿಚಾರಣೆಯನ್ನು ನ್ಯೂಜಿಲೆಂಡ್ ನ್ಯಾಯಾಧೀಶ ಜಾನ್ ಹ್ಯಾನ್ಸನ್ ಅವರಿಗೆ ಹಸ್ತಾಂತರಿಸಿತು. ಪ್ರಕರಣದ ವಿಚಾರಣೆ ಪೂರ್ಣಗೊಂಡ ನಂತರ ನ್ಯಾಯಾಧೀಶ ಜಾನ್ ಹ್ಯಾನ್ಸನ್ ತೀರ್ಪು ನೀಡಿದ್ದು, ಭಜ್ಜಿ ವಿರುದ್ಧದ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ. ಹೀಗಾಗಿ ಭಜ್ಜಿ ಆರೋಪದಿಂದ ಖುಲಾಸೆಗೊಂಡಿದ್ದಾರೆ.

2 / 7
ರಾಯಲ್ ಚಾಲೆಂಜರ್ಸ್ ಜಾಹೀರಾತು ವಿವಾದ: 2006 ರಲ್ಲಿ, ಹರ್ಭಜನ್ ರಾಯಲ್ ಸ್ಟಾಗ್‌ಗಾಗಿ ಜಾಹೀರಾತನ್ನು ಮಾಡಿದಾಗ, ಅವರು ಪೇಟವಿಲ್ಲದೆ ಕಾಣಿಸಿಕೊಂಡರು. ಈ ಜಾಹೀರಾತನ್ನು ಸಿಖ್ ಸಮುದಾಯ ತೀವ್ರವಾಗಿ ಟೀಕಿಸಿತು. ಹರ್ಭಜನ್ ಸಿಂಗ್ ಅವರ ಹುಟ್ಟೂರಾದ ಜಲಂಧರ್‌ನಲ್ಲಿ ಅವರ ಪೋಸ್ಟರ್‌ಗಳನ್ನು ಸುಡಲಾಯಿತು. ಆದಾಗ್ಯೂ, ನಂತರ ಹರ್ಭಜನ್ ಸಿಂಗ್ ಕ್ಷಮೆಯಾಚಿಸಿ ಈ ಜಾಹೀರಾತನ್ನು ತೆಗೆದುಹಾಕಿದ ನಂತರ ವಿಷಯ ತಣ್ಣಗಾಯಿತು.

3 / 7
ಭಜ್ಜಿ-ಶ್ರೀಶಾಂತ್ ಕಪಾಳಮೋಕ್ಷ ವಿವಾದ: ವರ್ಷ 2008 ಅಂದರೆ ಐಪಿಎಲ್ ಮೊದಲ ಸೀಸನ್. ಮುಂಬೈ ಮತ್ತು ಪಂಜಾಬ್ ನಡುವಿನ ಪಂದ್ಯದ ವೇಳೆ ಶ್ರೀಶಾಂತ್ ಅಳುತ್ತಿರುವ ಚಿತ್ರ ವೈರಲ್ ಆಗಿತ್ತು. ಸ್ವಲ್ಪ ಸಮಯದ ನಂತರ ಹರ್ಭಜನ್ ಶ್ರೀಶಾಂತ್ ಮೇಲೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡಲು ಆರಂಭಿಸಿತು. ಇದಾದ ಬಳಿಕ ಇಬ್ಬರೂ ಆಟಗಾರರು ತಮ್ಮ ತಮ್ಮ ಸಂದರ್ಶನದಲ್ಲಿ ಇಂತಹದ್ದೇನೂ ಆಗಿಲ್ಲ ಎಂದು ಹೇಳಿದರು. ಆದರೆ, ಪಂದ್ಯದ ಮರುದಿನವೇ ಮ್ಯಾಚ್ ರೆಫರಿ ಫಾರೂಕ್ ಇಂಜಿನಿಯರ್ ಹೇಳಿಕೆಯಿಂದ ವಿವಾದ ಮತ್ತೆ ಕಾದಿತ್ತು. ಐಪಿಎಲ್ 2008 ರಲ್ಲಿ ಮ್ಯಾಚ್ ರೆಫರಿ ಸಾಕ್ಷ್ಯದ ಆಧಾರದ ಮೇಲೆ ಕಪಾಳಮೋಕ್ಷ ಮಾಡಿದ ನಂತರ ಹರ್ಭಜನ್ ಅವರನ್ನು ನಿಷೇಧಿಸಲಾಯಿತು.

4 / 7
ರಿಕಿ ಪಾಂಟಿಂಗ್ ಜೊತೆ ವಿವಾದ: ಭಜ್ಜಿ ತಮ್ಮ ಮೊದಲ ODI ಸರಣಿಯಲ್ಲಿ, ರಿಕಿ ಪಾಂಟಿಂಗ್ ಅವರನ್ನು ಔಟ್ ಮಾಡಿದರು. ಪಾಂಟಿಂಗ್ ಔಟಾದ ತಕ್ಷಣ, ಭಜ್ಜಿ ಸಂಭ್ರಮಿಸಲು ಆರಂಭಿಸಿದರು. ಇದು 1998 ರಲ್ಲಿ ಭಜ್ಜಿ ಕೇವಲ 17 ವರ್ಷ ವಯಸ್ಸಿನವನಾಗಿದ್ದಾಗ ನಡೆದ ಘಟನೆ. ಭಜ್ಜಿ ಈ ರೀತಿ ಮಾಡುವುದನ್ನು ನೋಡಿ ಪಾಂಟಿಂಗ್ ಟರ್ಬನೇಟರ್​ಗೆ ಏನನ್ನೋ ಹೇಳಿದರು. ಭಜ್ಜಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಅವರಿಗೆ ಒಂದು ಪಂದ್ಯಕ್ಕೆ ದಂಡ ಮತ್ತು ನಿಷೇಧ ಹೇರಲಾಯಿತು.

5 / 7
ರಾವಣ-ಸೀತಾ ಡ್ಯಾನ್ಸ್ ವಿವಾದ: ಹರ್ಭಜನ್ ಸಿಂಗ್ ಅವರ ಈ ವಿವಾದ ಕ್ರಿಕೆಟ್ ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲ, ಟಿವಿ ಶೋಗೆ ಸಂಬಂಧಿಸಿದ್ದು. 2008ರಲ್ಲಿ ಟಿವಿ ರಿಯಾಲಿಟಿ ಶೋ ಆದ ಏಕ್ ಕಿಲಾಡಿ ಏಕ್ ಹಸೀನಾ ಕಾರ್ಯಕ್ರಮದ ವೇಳೆ ಹರ್ಭಜನ್ ಸಿಂಗ್ ಇಂತಹ ಡ್ಯಾನ್ಸ್ ಐಟಂ ಅನ್ನು ಪ್ರಸ್ತುತಪಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಪ್ರದರ್ಶನದಲ್ಲಿ, ಭಜ್ಜಿ ನಟಿ ಮೋನಾ ಸಿಂಗ್ ಅವರೊಂದಿಗೆ 'ರಾವಣ ಮತ್ತು ಸೀತಾ' ​​ನೃತ್ಯವನ್ನು ಪ್ರದರ್ಶಿಸಿದರು ಅದರ ಮೇಲೆ ಹಿಂದೂ ಮತ್ತು ಸಿಖ್ ಸಮುದಾಯಗಳು ಹರ್ಭಜನ್ ಮೇಲೆ ಆರೋಪ ಮಾಡಿದ್ದವು.

6 / 7
ಆಪರೇಷನ್ ಬ್ಲೂ ಸ್ಟಾರ್ ವಿವಾದ: ಇತ್ತೀಚೆಗೆ, ಹರ್ಭಜನ್ ಸಿಂಗ್ ಅವರು ಆಪರೇಷನ್ ಬ್ಲೂ ಸ್ಟಾರ್‌ನ ವಾರ್ಷಿಕೋತ್ಸವದಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಬಿಡುಗಡೆ ಮಾಡಿದ ವಿವಾದಾತ್ಮಕ ಪೋಸ್ಟರ್ ಅನ್ನು ನವೀಕರಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ, ಕ್ಷಮೆಯಾಚಿಸಿ ಪೋಸ್ಟರ್ ಅನ್ನು ಸ್ಟೇಟಸ್‌ನಿಂದ ತೆಗೆದ ನಂತರ ವಿಷಯ ಇತ್ಯರ್ಥವಾಯಿತು.

7 / 7
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!