ಮಂಕಿಗೇಟ್ ವಿವಾದ: ಭಜ್ಜಿ ವಿವಾದಗಳಲ್ಲಿ ಮೊದಲು ಕೇಳಿಬರುವುದು ಮಂಕಿಗೇಟ್ ವಿವಾದ. ಸಿಡ್ನಿ ಟೆಸ್ಟ್‌ನ ಮೂರನೇ ದಿನದ ಪಂದ್ಯದಲ್ಲಿ ಹರ್ಭಜನ್ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು, ಮುಳ್ಳಿನಂತೆ ಅಂಟಿಕೊಂಡಿದ್ದರು. ಈ ವೇಳೆ ಆಂಡ್ರ್ಯೂ ಸೈಮಂಡ್ಸ್ ನಿರಂತರವಾಗಿ ಭಜ್ಜಿ ದೊಡ್ಡ ಹೊಡೆತಗಳನ್ನು ಆಡುವಂತೆ ಪ್ರಚೋದಿಸುತ್ತಿದ್ದರು. ಭಜ್ಜಿ ಸಹಿಷ್ಣುತೆಯ ಮಿತಿಯನ್ನು ತಲುಪಿದಾಗ, ಅವರು ಸೈಮಂಡ್ಸ್‌ಗೆ ಅವಾಚ್ಯ ಶಬ್ದದಿಂದ ನಿಂಧಿಸಿದ್ದರು. ಇದು ಆಸ್ಟ್ರೇಲಿಯಾದ ನಾಯಕ ಪಾಂಟಿಂಗ್‌ಗೆ ಅಸಹನೀಯವೆನಿಸಿತು. ಆಸ್ಟ್ರೇಲಿಯಾದ ನಾಯಕ ರೆಫರಿಗೆ ದೂರು ನೀಡಿದರು. ಭಜ್ಜಿ ಸೈಮಂಡ್ಸ್ ಅನ್ನು ಮಂಗ ಎಂದು ಕರೆದಿದ್ದಾರೆ ಎಂದು ಪಾಂಟಿಂಗ್ ಆರೋಪಿಸಿದ್ದರು. ಐಸಿಸಿ ನಿಯಮಗಳ ಪ್ರಕಾರ, ಜನಾಂಗೀಯ ಟೀಕೆಗಳನ್ನು ಹಂತ 3 ಅಪರಾಧ ಎಂದು ಪರಿಗಣಿಸಲಾಯಿತು. ಇದರಲ್ಲಿ ಹರ್ಭಜನ್ ತಪ್ಪಿತಸ್ಥರೆಂದು ಸಾಬೀತಾಯಿತು ಮತ್ತು ಮೂರು ಪಂದ್ಯಗಳ ನಿಷೇಧಕ್ಕೊಳಗಾದರು. ಈ ನಿರ್ಧಾರದ ವಿರುದ್ಧ ಭಾರತೀಯ ಆಟಗಾರರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿದರು. ಭಜ್ಜಿ ಮೇಲಿನ ಜನಾಂಗೀಯ ಹೇಳಿಕೆಗಳ ಆರೋಪವನ್ನು ಹಿಂಪಡೆಯದಿದ್ದರೆ, ಪ್ರವಾಸವನ್ನು ರದ್ದುಗೊಳಿಸುವ ಸೂಚನೆ ನೀಡಿದರು. ಈ ಇಡೀ ವಿಷಯದಲ್ಲಿ ಹೆಚ್ಚುತ್ತಿರುವ ವಿವಾದವನ್ನು ಕಂಡ ಐಸಿಸಿ ತನ್ನ ವಿಚಾರಣೆಯನ್ನು ನ್ಯೂಜಿಲೆಂಡ್ ನ್ಯಾಯಾಧೀಶ ಜಾನ್ ಹ್ಯಾನ್ಸನ್ ಅವರಿಗೆ ಹಸ್ತಾಂತರಿಸಿತು. ಪ್ರಕರಣದ ವಿಚಾರಣೆ ಪೂರ್ಣಗೊಂಡ ನಂತರ ನ್ಯಾಯಾಧೀಶ ಜಾನ್ ಹ್ಯಾನ್ಸನ್ ತೀರ್ಪು ನೀಡಿದ್ದು, ಭಜ್ಜಿ ವಿರುದ್ಧದ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ. ಹೀಗಾಗಿ ಭಜ್ಜಿ ಆರೋಪದಿಂದ ಖುಲಾಸೆಗೊಂಡಿದ್ದಾರೆ.