AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌತ್ ಆಫ್ರಿಕಾ ವೇಗಿಯ 2 ಕೋಟಿ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ಹಾರ್ದಿಕ್ ಪಾಂಡ್ಯ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಈ ಹರಾಜಿನಲ್ಲಿ ಸೌತ್ ಆಫ್ರಿಕಾ ವೇಗಿ ಅನ್ರಿಕ್ ನೋಕಿಯ ಕೂಡ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ 2025 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದ ಅನ್ರಿಕ್ ಈ ಬಾರಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಆಕ್ಷನ್ ಪಟ್ಟಿಯಲ್ಲಿದ್ದಾರೆ.

ಝಾಹಿರ್ ಯೂಸುಫ್
|

Updated on: Dec 11, 2025 | 8:05 AM

Share
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯು ಐಪಿಎಲ್​ ಮಿನಿ ಹರಾಜಿಗಾಗಿ ಹೆಸರು ನೀಡಿರುವ ಆಟಗಾರರ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಮುಂದಾಗಲಿದೆ.

1 / 8
ಆದರೆ ಇದೇ ಸರಣಿಯು ಅನ್ರಿಕ್ ನೋಕಿಯ ಪಾಲಿಗೆ ಮುಳುವಾದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ಈ ಸರಣಿಯ ಮೊದಲ ಪಂದ್ಯದಲ್ಲೇ ಅನ್ರಿಕ್ ಅವರನ್ನು ಹಾರ್ದಿಕ್ ಪಾಂಡ್ಯ ಬೆಂಡೆತ್ತಿದ್ದಾರೆ. ಅದು ಕೂಡ ಕೇವಲ 10 ಎಸೆತಗಳಲ್ಲಿ 22 ರನ್​ ಚಚ್ಚುವ ಮೂಲಕ.

2 / 8
ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಅನ್ರಿಕ್ ನೋಕಿಯ 4 ಓವರ್​ಗಳಲ್ಲಿ ನೀಡಿರುವುದು ಬರೋಬ್ಬರಿ 41 ರನ್​ಗಳು. ಅಂದರೆ ಪ್ರತಿ ಓವರ್​ಗೆ 10.20 ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಈ ದುಬಾರಿ ಓವರ್​ಗಳೇ ಅನ್ರಿಕ್ ನೋಕಿಯ ಪಾಲಿಗೆ ಮುಳುವಾಗುವ ಸಾಧ್ಯತೆಯಿದೆ.

3 / 8
ಏಕೆಂದರೆ ಕಳೆದ ಸೀಸನ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅನ್ರಿಕ್ ನೋಕಿಯ ಫಿಟ್​ನೆಸ್ ಕಾರಣದಿಂದಾಗಿ ಆಡಿದ್ದು ಕೇವಲ 2 ಮ್ಯಾಚ್​ಗಳು ಮಾತ್ರ. ಈ ವೇಳೆ ಅವರು 42 ಎಸೆತಗಳಲ್ಲಿ 83 ರನ್ ನೀಡಿದ್ದರು. ಅಂದರೆ ಪ್ರತಿ ಓವರ್​ಗೆ 11.86 ಸರಾಸರಿಯನ್ನು ರನ್ ಬಿಟ್ಟು ಕೊಟ್ಟಿದ್ದರು.

4 / 8
ಐಪಿಎಲ್​ನಲ್ಲಿ ಅನ್ರಿಕ್ ನೋಕಿಯ ಹೀಗೆ ದುಬಾರಿಯಾಗಲು ಫಿಟ್​ನೆಸ್ ಸಮಸ್ಯೆ ಕಾರಣ ಎನ್ನಲಾಗಿತ್ತು. ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಅನ್ರಿಕ್ ಮತ್ತೆ ಮೈದಾನಕ್ಕಿಳಿದಿದ್ದಾರೆ. ಆದರೆ ಕಂಬ್ಯಾಕ್ ಪಂದ್ಯದಲ್ಲೇ ಅನ್ರಿಕ್ ನೋಕಿಯ ಅವರನ್ನು ಹಾರ್ದಿಕ್ ಪಾಂಡ್ಯ ಬೆಂಡೆತ್ತಿದ್ದಾರೆ.

5 / 8
ಈ ಬೆಂಡೆತ್ತುವಿಕೆಯ ಪರಿಣಾಮ ಐಪಿಎಲ್ 2026 ರಲ್ಲಿ ಅನ್ರಿಕ್ ನೋಕಿಯ ಹರಾಜಾಗಲಿದ್ದಾರಾ ಎಂಬುದೇ ಪ್ರಶ್ನೆ. ಏಕೆಂದರೆ ಅನ್ರಿಕ್ ತನ್ನ ಮೂಲ ಬೆಲೆ 2 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಪಿಚ್​ನಲ್ಲಿ ದುಬಾರಿಯಾಗಿ ಪರಿಣಮಿಸಿದ್ದಾರೆ. ಇದು ಅನ್ರಿಕ್ ನೋಕಿಯ ಅವರ ಬಿಡ್ಡಿಂಗ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

6 / 8
ಏಕೆಂದರೆ ಕಳೆದ ಸೀಸನ್​ನಲ್ಲಿ ದುಬಾರಿ ಬೌಲರ್​ಗಳಲ್ಲಿ ಗುರುತಿಸಿಕೊಂಡಿದ್ದ ನೋಕಿಯ ಒಂದು ವರ್ಷದ ಬಳಿಕ ಕೂಡ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಅದರಲ್ಲೂ ಭಾರತೀಯ ಪಿಚ್​ನಲ್ಲಿ ದುಬಾರಿಯಾಗಿರುವುದರಿಂದ ಅವರ ಖರೀದಿಯಿಂದ ಐಪಿಎಲ್ ಫ್ರಾಂಚೈಸಿಗಳು ವಿಮುಖರಾಗಬಹುದು.

7 / 8
ಇತ್ತ ಐಪಿಎಲ್ ಹರಾಜು ನಡೆಯಲಿರುವುದು ಡಿಸೆಂಬರ್ 16 ರಂದು. ಇದರ ನಡುವೆ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2ನೇ ಮತ್ತು 3ನೇ ಟಿ20 ಪಂದ್ಯಗಳು ಸಹ ನಡೆಯಲಿದೆ. ಈ ಮ್ಯಾಚ್​ಗಳಲ್ಲೂ ಕರಾರುವಾಕ್ ದಾಳಿ ಸಂಘಟಿಸಲು ವಿಫಲರಾದರೆ ಅನ್ರಿಕ್ ನೋಕಿಯ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದೇ ಉಳಿಯಬಹುದು. ಹೀಗಾಗಿ ನೋಕಿಯ ಪಾಲಿಗೆ ಮುಂದಿನ ಎರಡು ಮ್ಯಾಚ್​ಗಳು ತುಂಬಾ ಮಹತ್ವದ್ದಾಗಿ ಮಾರ್ಪಟ್ಟಿದೆ.

8 / 8