Team India: ಭಾರತದ ಪರ ಇದುವರೆಗೆ ಎಷ್ಟು ಮಂದಿ ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ ಗೊತ್ತಾ?

Edited By:

Updated on: Feb 15, 2024 | 12:23 PM

Sarfaraz Khan-Dhruv Jurel: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಸರ್ಫರಾಝ್ ಖಾನ್ ಹಾಗೂ ಧ್ರುವ್ ಜುರೇಲ್ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. ಇದರೊಂದಿಗೆ ಇದರೊಂದಿಗೆ ಭಾರತದ ಪರ ಟೆಸ್ಟ್ ಪಂದ್ಯಗಳನ್ನಾಡಿದ ವಿಶೇಷ ಸಾಧಕರ ಪಟ್ಟಿಗೆ ಇಬ್ಬರು ಯುವ ದಾಂಡಿಗರು ಸೇರ್ಪಡೆಯಾಗಿದ್ದಾರೆ.

1 / 7
ರಾಜ್​ಕೋಟ್​ನಲ್ಲಿನ ನಿರಂಜನ್ ಶಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಪರ ಸರ್ಫರಾಝ್ ಖಾನ್ (Sarfaraz Khan) ಹಾಗೂ ಧ್ರುವ್ ಜುರೇಲ್ (Dhruv Jurel) ಪಾದಾರ್ಪಣೆ ಮಾಡಿದ್ದಾರೆ. ಇದರೊಂದಿಗೆ ಭಾರತದ ಪರ ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರರ ಸಂಖ್ಯೆ 312 ಕ್ಕೇರಿದೆ.

2 / 7
ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದ ಪರ ಮೊದಲ ಕ್ಯಾಪ್ ಪಡೆದ ಆಟಗಾರನೆಂದರೆ ಅಮರ್ ಸಿಂಗ್. 1932 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ಪರ ಅಮರ್ ಸಿಂಗ್ ಮೊದಲ ಕ್ಯಾಪ್ ಪಡೆದಿದ್ದರು.

3 / 7
ಟೀಮ್ ಇಂಡಿಯಾ ಪರ ನೂರನೇ ಟೆಸ್ಟ್ ಕ್ಯಾಪ್​ ಪಡೆದ ಆಟಗಾರ ಬಾಲಕೃಷ್ಣ ಪಂಢರಿನಾಥ ಗುಪ್ತೆ. 1961 ರಲ್ಲಿ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಬಾರಿ ಕಣಕ್ಕಿಳಿಯುವ ಮೂಲಕ ಬಿಪಿ ಗುಪ್ತೆ ಭಾರತ ಪರ ಟೆಸ್ಟ್ ಆಡಿದ 100ನೇ ಆಟಗಾರ ಎನಿಸಿಕೊಂಡಿದ್ದರು.

4 / 7
ಇನ್ನು 200ನೇ ಟೆಸ್ಟ್ ಕ್ಯಾಪ್ ಒಲಿದದ್ದು ವಿಕೆಟ್ ಕೀಪರ್ ಬ್ಯಾಟರ್ ನಯನ್ ಮೊಂಗಿಯಾ ಅವರಿಗೆ. 1994 ರಲ್ಲಿ ಲಕ್ನೋನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಮೊಂಗಿಯಾ ಪಾದಾರ್ಪಣೆ ಮಾಡಿದ್ದರು.

5 / 7
ಭಾರತದ 300ನೇ ಟೆಸ್ಟ್ ಆಟಗಾರ ಎಡಗೈ ವೇಗಿ ಟಿ ನಟರಾಜನ್. 2021 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ನಟರಾಜನ್ ಟೆಸ್ಟ್ ಕ್ಯಾಪ್ ಪಡೆದಿದ್ದರು. ಈ ಮೂಲಕ ಟೀಮ್ ಇಂಡಿಯಾ ಪರ ಟೆಸ್ಟ್ ಆಡಿದ 300ನೇ ಆಟಗಾರ ಎನಿಸಿಕೊಂಡಿದ್ದರು.

6 / 7
ಇದೀಗ ಸರ್ಫರಾಝ್ ಖಾನ್ 311ನೇ ಹಾಗೂ ಧ್ರುವ್ ಜುರೇಲ್ 312ನೇ ಆಟಗಾರರಾಗಿ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಮೂಲಕ ಭಾರತದ ಪರ ಟೆಸ್ಟ್ ಆಡಿದ 312 ಆಟಗಾರರಲ್ಲಿ ಯುವ ದಾಂಡಿಗರಿಬ್ಬರು ಸ್ಥಾನ ಪಡೆದಿದ್ದಾರೆ.

7 / 7
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್​ಗೆ ಭಾರತದ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೇಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ.