5 ವರ್ಷಗಳಲ್ಲಿ 9 ಐಸಿಸಿ ಟೂರ್ನಿ: 3 ಪಂದ್ಯಾವಳಿಗಳಿಗೆ ಭಾರತ ಆತಿಥ್ಯ..!

Updated on: Jul 21, 2025 | 8:56 AM

ICC Tournaments 2026 To 2031: ಐಸಿಸಿ 2026 ರಿಂದ 2031ರ ನಡುವೆ ಒಟ್ಟು 9 ಟೂರ್ನಿಗಳನ್ನು ಆಯೋಜಿಸಲಿದೆ. ಈ ಟೂರ್ನಿಗಳಲ್ಲಿ ಚಾಂಪಿಯನ್ಸ್​ ಟ್ರೋಫಿಯನ್ನು ಹೊರತುಪಡಿಸಿ ಮಿಕ್ಕೆಲ್ಲಾ ಪಂದ್ಯಾವಳಿಗಳು ಜಂಟಿಯಾಗಿ ಆಯೋಜನೆಗೊಳ್ಳಲಿರುವುದು ವಿಶೇಷ. ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಪಂದ್ಯಗಳು ಇಂಗ್ಲೆಂಡ್​ನಲ್ಲಿ ಜರುಗಲಿದೆ.

1 / 5
ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂಬರುವ 5 ವರ್ಷಗಳಲ್ಲಿ ಒಟ್ಟು 9 ಟೂರ್ನಿಗಳನ್ನು ಆಯೋಜಿಸಲಿದೆ. ಈ ಟೂರ್ನಿಗಳ ಆತಿಥ್ಯ ರಾಷ್ಟ್ರಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಭಾರತಕ್ಕೆ ಮೂರು ಪಂದ್ಯಾವಳಿಗಳ ಆತಿಥ್ಯವನ್ನು ನೀಡಲಾಗಿದೆ. ಆದರೆ ಇದರಲ್ಲಿ  2 ಟೂರ್ನಿಗಳನ್ನು ಭಾರತ ಜಂಟಿಯಾಗಿ ಆಯೋಜಿಸಬೇಕಿದೆ. ಐಸಿಸಿಯ ಮುಂದಿನ 9 ಟೂರ್ನಿಗಳಾವು, ಅವುಗಳು ನಡೆಯುವುದೆಲ್ಲಿ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

2 / 5
ಟಿ20 ವಿಶ್ವಕಪ್ 2026: ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿದೆ. |  ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2027 ಫೈನಲ್: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯ ಫೈನಲ್ ಪಂದ್ಯವನ್ನು ಇಂಗ್ಲೆಂಡ್​ನಲ್ಲಿ ಆಯೋಜಿಸಲಾಗುತ್ತದೆ. |  ಏಕದಿನ ವಿಶ್ವಕಪ್ 2027: ಮುಂದಿನ ಏಕದಿನ ವಿಶ್ವಕಪ್​ ಅನ್ನು ಸೌತ್ ಆಫ್ರಿಕಾ, ಝಿಂಬಾಬ್ವೆ, ನಮೀಬಿಯಾ ಜಂಟಿಯಾಗಿ ಆಯೋಜಿಸಲಿದೆ.

3 / 5
ಟಿ20 ವಿಶ್ವಕಪ್ 2028: ಆಸ್ಟ್ರೇಲಿಯಾ ಹಾಗೂ ನ್ಯೂಝಿಲೆಂಡ್ 2028ರ ಟಿ20 ವಿಶ್ವಕಪ್​ಗೆ ಆತಿಥ್ಯವಹಿಸಲಿದೆ. |  ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2029 ಫೈನಲ್: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ 5ನೇ ಫೈನಲ್ ಪಂದ್ಯ ಕೂಡ ಇಂಗ್ಲೆಂಡ್​ನಲ್ಲೇ ನಡೆಯಲಿದೆ. |   ಚಾಂಪಿಯನ್ಸ್ ಟ್ರೋಫಿ 2029: ಭಾರತದಲ್ಲಿ 2029 ರಲ್ಲಿ ಚಾಂಪಿಯನ್ಸ್ ಟ್ರೋಫಿ ಜರುಗಲಿದೆ.

4 / 5
ಟಿ20 ವಿಶ್ವಕಪ್ 2030: ಇಂಗ್ಲೆಂಡ್, ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್ ಜಂಟಿಯಾಗಿ 2030 ಟಿ20 ವಿಶ್ವಕಪ್ ಅನ್ನು ಆಯೋಜಿಸಲಿದೆ. |  ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2031 ಫೈನಲ್: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ 2031ರ ಫೈನಲ್ ಪಂದ್ಯಕ್ಕೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆತಿಥ್ಯವಹಿಸಲಿದೆ. |  ಏಕದಿನ ವಿಶ್ವಕಪ್ 2031: ಭಾರತ ಮತ್ತು ಬಾಂಗ್ಲಾದೇಶ್ 2031 ರಲ್ಲಿ ಜಂಟಿಯಾಗಿ ಏಕದಿನ ವಿಶ್ವಕಪ್​ ಅನ್ನು ಆಯೋಜಿಸಲಿದೆ.

5 / 5
ಅಂದರೆ ಮುಂದಿನ ಮೂರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯವು ಇಂಗ್ಲೆಂಡ್​ನಲ್ಲೇ ಜರುಗಲಿದೆ. ಈ ಹಿಂದಿನ ಮೂರು ಆವೃತ್ತಿಗಳ ಫೈನಲ್​ ಪಂದ್ಯಕ್ಕೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆತಿಥ್ಯವಹಿಸಿತ್ತು. ಇದೀಗ ಮುಂದಿನ ಮೂರು ಆವೃತ್ತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಇಸಿಬಿ ಯಶಸ್ವಿಯಾಗಿದೆ. ಇತ್ತ ಬಿಸಿಸಿಐ, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಏಕದಿನ ವಿಶ್ವಕಪ್​ನ ಆತಿಥ್ಯದ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ.

Published On - 8:55 am, Mon, 21 July 25