IND vs ENG: 23 ವರ್ಷಗಳ ನಂತರ ಇಂತಹದೊಂದು ಪಂದ್ಯವನ್ನಾಡುತ್ತಿದೆ ಟೀಂ ಇಂಡಿಯಾ

Updated on: Mar 05, 2026 | 6:00 PM

2026 T20 World Cup Semifinal: 2026 ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿಯಾಗುತ್ತಿವೆ. ಕಳೆದ 23 ವರ್ಷಗಳಲ್ಲಿ ಮೊದಲ ಬಾರಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದೆ ಭಾರತೀಯ ತಂಡ ಐಸಿಸಿ ನಾಕೌಟ್ ಪಂದ್ಯವನ್ನು ಆಡುತ್ತಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಯುವ ಪ್ರತಿಭೆಗಳು ಈ ಐತಿಹಾಸಿಕ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಇದು ಭಾರತೀಯ ಕ್ರಿಕೆಟ್‌ಗೆ ಹೊಸ ಯುಗವನ್ನು ಸೂಚಿಸುತ್ತದೆ.

1 / 5
2026 ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯವು ಭಾರತೀಯ ಕ್ರಿಕೆಟ್‌ಗೆ ಐತಿಹಾಸಿಕ ಕ್ಷಣವಾಗಲಿದೆ. ಏಕೆಂದರೆ ಕಳೆದ 23 ವರ್ಷಗಳಿಂದ ಭಾರತೀಯ ಕ್ರಿಕೆಟ್‌ನ ಆಳಿದ ಆ ಇಬ್ಬರು ದಿಗ್ಗಜರಲ್ಲಿ ಒಬ್ಬರೂ ಇಲ್ಲದೆ ಟೀಂ ಇಂಡಿಯಾ ನಾಕೌಟ್ ಪಂದ್ಯವನ್ನು ಆಡುತ್ತಿದೆ.

2 / 5
ವಾಸ್ತವವಾಗಿ, 23 ವರ್ಷಗಳಲ್ಲಿ ಮೊದಲ ಬಾರಿಗೆ, ಭಾರತೀಯ ಕ್ರಿಕೆಟ್ ತಂಡವು ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದೆ ಐಸಿಸಿ ನಾಕೌಟ್ ಪಂದ್ಯವನ್ನು ಆಡಲಿದೆ. ಕೊನೆಯ ಬಾರಿಗೆ 2003 ರ ವಿಶ್ವಕಪ್ ಫೈನಲ್​ನಲ್ಲಿ ಟೀಂ ಇಂಡಿಯಾ, ಸೌರವ್ ಗಂಗೂಲಿ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿತ್ತು.

3 / 5
ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್‌ರಂತಹ ಲೆಜೆಂಡರಿ ಆಟಗಾರರು ಪಂದ್ಯವನ್ನಾಡಿದ್ದರು. ಆದರೆ ಆ ಸಮಯದಲ್ಲಿ ಭಾರತ ಕ್ರಿಕೆಟ್​ಗೆ ಯಾರೆಂದು ಪರಿಚಯವೇ ಇಲ್ಲದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ.

4 / 5
ಆ ಫೈನಲ್ ನಂತರದ 23 ವರ್ಷಗಳಲ್ಲಿ, ಭಾರತವು ಪ್ರತಿ ಐಸಿಸಿ ನಾಕೌಟ್ ಪಂದ್ಯದಲ್ಲೂ ಈ ಇಬ್ಬರು ಆಟಗಾರರಲ್ಲಿ ಕನಿಷ್ಠ ಒಬ್ಬರನ್ನು ತನ್ನ ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿಕೊಂಡಿದೆ. ಈ ಇಬ್ಬರು ಒಟ್ಟಾಗಿ ತಂಡವನ್ನು ಅನೇಕ ಸ್ಮರಣೀಯ ಗೆಲುವಿನತ್ತ ಕೊಂಡೊಯ್ದಿದ್ದಾರೆ. ಅಲ್ಲದೆ ಏಕಪಕ್ಷೀಯವಾಗಿ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

5 / 5
2024 ರಲ್ಲಿ ಟಿ20 ಸ್ವರೂಪದಿಂದ ನಿವೃತ್ತರಾದ ನಂತರ, ಟೀಂ ಇಂಡಿಯಾ ಹೊಸ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿದೆ. ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಇತರ ಪ್ರತಿಭಾವಂತ ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಆದಾಗ್ಯೂ ಇದೇ ಮೊದಲ ಬಾರಿಗೆ ಈ ಇಬ್ಬರು ಹಿರಿಯ ಆಟಗಾರರಿಲ್ಲದೆ ಟೀಂ ಇಂಡಿಯಾ ಪ್ರಮುಖ ಪಂದ್ಯವನ್ನು ಆಡಲಿದ್ದು, ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Follow Us