ಟಿ20 ವಿಶ್ವಕಪ್​ನಲ್ಲಿ 32 ತಂಡಗಳನ್ನು ಕಣಕ್ಕಿಳಿಸಲು ಭರ್ಜರಿ ಪ್ಲ್ಯಾನ್

Updated on: Jul 20, 2025 | 10:08 AM

T20 World Cup: ಸಿಂಗಾಪುರದಲ್ಲಿ ನಡೆಯುತ್ತಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಟಿ20 ವಿಶ್ವಕಪ್ ಅನ್ನು 32 ರಾಷ್ಟ್ರಗಳಿಗೆ ವಿಸ್ತರಿಸುವ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಚರ್ಚಿಸಿದೆ. ಈ ಪ್ರಸ್ತಾವನೆಯನ್ನು ಪರಿಶೀಲಿಸಲು ಐಸಿಸಿ ನ್ಯೂಝಿಲೆಂಡ್‌ನ ರೋಜರ್ ಟ್ವೋಸ್ ನೇತೃತ್ವದಲ್ಲಿ ಭಾರತ ಸೇರಿದಂತೆ ಪ್ರಮುಖ ಕ್ರಿಕೆಟ್ ಮಂಡಳಿಗಳ ಉನ್ನತ ಅಧಿಕಾರಿಗಳನ್ನು ಒಳಗೊಂಡ ಆರು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ.

1 / 5
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ 20 ತಂಡಗಳು ಕಣಕ್ಕಿಳಿಯುವುದು ಖಚಿತವಾಗಿದೆ. ಈಗಾಗಲೇ ಟೂರ್ನಿಗೆ 15 ತಂಡಗಳು ಅರ್ಹತೆ ಪಡೆದುಕೊಂಡಿದ್ದು, ಇನ್ನುಳಿದ 5 ತಂಡಗಳು ಅರ್ಹತಾ ಸುತ್ತಿನ ಮೂಲಕ ವಿಶ್ವಕಪ್​ಗೆ ಎಂಟ್ರಿ ಕೊಡಲಿದೆ. ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಈ ವಿಶ್ವಕಪ್ ಬೆನ್ನಲ್ಲೇ 2028ರ ಟಿ20 ವಿಶ್ವಕಪ್​ಗಾಗಿ ಐಸಿಸಿ ಪೂರ್ವ ತಯಾರಿಗಳನ್ನು ಆರಂಭಿಸಲು ನಿರ್ಧರಿಸಿದೆ.

ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ 20 ತಂಡಗಳು ಕಣಕ್ಕಿಳಿಯುವುದು ಖಚಿತವಾಗಿದೆ. ಈಗಾಗಲೇ ಟೂರ್ನಿಗೆ 15 ತಂಡಗಳು ಅರ್ಹತೆ ಪಡೆದುಕೊಂಡಿದ್ದು, ಇನ್ನುಳಿದ 5 ತಂಡಗಳು ಅರ್ಹತಾ ಸುತ್ತಿನ ಮೂಲಕ ವಿಶ್ವಕಪ್​ಗೆ ಎಂಟ್ರಿ ಕೊಡಲಿದೆ. ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಈ ವಿಶ್ವಕಪ್ ಬೆನ್ನಲ್ಲೇ 2028ರ ಟಿ20 ವಿಶ್ವಕಪ್​ಗಾಗಿ ಐಸಿಸಿ ಪೂರ್ವ ತಯಾರಿಗಳನ್ನು ಆರಂಭಿಸಲು ನಿರ್ಧರಿಸಿದೆ.

2 / 5

ಅದರ ಮೊದಲ ಭಾಗವಾಗಿ ಇದೀಗ 2028 ರಲ್ಲಿ ಬರೋಬ್ಬರಿ 32 ತಂಡಗಳನ್ನು ಕಣಕ್ಕಿಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಚಿಂತಿಸಿದೆ. ಅಂದರೆ 2028 ರಲ್ಲಿ ಆಸ್ಟ್ರೇಲಿಯಾ-ನ್ಯೂಝಿಲೆಂಡ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಒಟ್ಟು 32 ತಂಡಗಳಿಗೆ ಅವಕಾಶ ನೀಡಲು ಐಸಿಸಿ ಬಯಸಿದೆ. ಅಲ್ಲದೆ ಈ ಪ್ರಸ್ತಾವನೆಯನ್ನು ಪರಿಶೀಲಿಸಲು ಐಸಿಸಿ ನ್ಯೂಝಿಲೆಂಡ್‌ನ ರೋಜರ್ ಟ್ವೋಸ್ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳನ್ನು ಒಳಗೊಂಡ ಆರು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ.

3 / 5

ಈಗಾಗಲೇ ಯುಎಸ್​ಎ, ಕೆನಡಾ, ಇಟಲಿ ಸೇರಿದಂತೆ ಪ್ರಮುಖ ದೇಶಗಳಲ್ಲಿ ಕ್ರಿಕೆಟ್ ಕ್ರೇಝ್ ಶುರುವಾಗಿದ್ದು, ಇದನ್ನು ಪರಿಗಣಿಸಿ ಅಸೋಸಿಯೇಟ್ ನೇಷನ್ಸ್ ತಂಡಗಳಿಗೆ ಮೆಗಾ ಈವೆಂಟ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವ ಬಗ್ಗೆ ಚರ್ಚಿಸಲಾಗಿದೆ. ಈ ಮೂಲಕ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ತಂಡಗಳ ಸಂಖ್ಯೆಯನ್ನು 32 ಕ್ಕೆ ಹೆಚ್ಚಿಸಲು ಐಸಿಸಿ ಆಸಕ್ತಿ ತೋರಿದೆ. ಹೀಗಾಗಿ 2026ರ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ 2028ರ ಟಿ20 ವಿಶ್ವಕಪ್​ನಲ್ಲಿ ಎಷ್ಟು ತಂಡಗಳು ಕಣಕ್ಕಿಳಿಯಲಿವೆ ಎಂಬುದರ ಸ್ಪಷ್ಟ ಚಿತ್ರಣ ದೊರೆಯಲಿದೆ.

4 / 5

2026 ರ ಟಿ20 ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಇತ್ತ ತಂಡಗಳ ಹೆಚ್ಚುವರಿಯೊಂದಿಗೆ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಒಟ್ಟು 55 ಪಂದ್ಯಗಳನ್ನು ಆಡಲಾಗುತ್ತದೆ. ಇಲ್ಲಿ 20 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿ ಮೊದಲ ಸುತ್ತಿನ ಮ್ಯಾಚ್​ಗಳನ್ನು ಆಯೋಜಿಸಲಾಗುತ್ತದೆ. ಆ ಬಳಿಕ ಸೂಪರ್-8, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

5 / 5

2026ರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ತಂಡಗಳು: ಭಾರತ,  ಶ್ರೀಲಂಕಾ, ಪಾಕಿಸ್ತಾನ್, ಬಾಂಗ್ಲಾದೇಶ್, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ, ಯುಎಸ್​ಎ, ಕೆನಡಾ, ನೆದರ್​ಲೆಂಡ್ಸ್, ಇಟಲಿ. ಇನ್ನೂ 5 ತಂಡಗಳಿಗೆ ಅವಕಾಶವಿದ್ದು, ಇದಕ್ಕಾಗಿ ಆಫ್ರಿಕಾ ಪ್ರಾದೇಶಿಕ, ಏಷ್ಯಾ/ಪೂರ್ವ ಏಷ್ಯಾ-ಪೆಸಿಫಿಕ್ ಪ್ರಾದೇಶಿ ತಂಡಗಳ ನಡುವೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದೆ.

Published On - 10:03 am, Sun, 20 July 25

Loading...
Unable to load recommendations.
Follow Us