ಓವರ್ ಪ್ರಕಾರ ಅಲ್ಲ, ಚೆಂಡಿನ ಪ್ರಕಾರ..; ಟಿ20 ಪವರ್‌ಪ್ಲೇ ನಿಯಮದಲ್ಲಿ ಬದಲಾವಣೆ ತಂದ ಐಸಿಸಿ

Updated on: Jun 27, 2025 | 2:52 PM

ICC Changes T20 Powerplay Rules: ಐಸಿಸಿ ಪುರುಷರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪವರ್‌ಪ್ಲೇ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮಳೆ ಅಥವಾ ಇತರ ಕಾರಣಗಳಿಂದ ಓವರ್‌ಗಳು ಕಡಿಮೆಯಾದರೆ ಪವರ್‌ಪ್ಲೇ, ಓವರ್‌ಗಳ ಬದಲಿಗೆ ಚೆಂಡುಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, 5 ಓವರ್‌ಗಳ ಪಂದ್ಯದಲ್ಲಿ 1.3 ಓವರ್‌ಗಳು ಪವರ್‌ಪ್ಲೇ ಆಗಿರುತ್ತದೆ. ಈ ನಿಯಮ ಜುಲೈ 2 ರಿಂದ ಜಾರಿಗೆ ಬರುತ್ತದೆ.

1 / 6
ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಮತ್ತಷ್ಟು ರೋಚಕಗೊಳಿಸುವ ಸಲುವಾಗಿ ಐಸಿಸಿ ತನ್ನ ಹಳೆಯ ನಿಯಮಗಳಲ್ಲಿ ಬದಲಾವಣೆಗಳನ್ನು ತರುವುದರೊಂದಿಗೆ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಆ ಪ್ರಕಾರ, ಟೆಸ್ಟ್ ಕ್ರಿಕೆಟ್​ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿ ಜಾರಿಗೆ ತಂದಿದ್ದ ಐಸಿಸಿ, ಇದೀಗ ಟಿ20 ಕ್ರಿಕೆಟ್​ನ ನಿಯಮದಲ್ಲೂ ಒಂದು ಬದಲಾವಣೆ ಮಾಡಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಮತ್ತಷ್ಟು ರೋಚಕಗೊಳಿಸುವ ಸಲುವಾಗಿ ಐಸಿಸಿ ತನ್ನ ಹಳೆಯ ನಿಯಮಗಳಲ್ಲಿ ಬದಲಾವಣೆಗಳನ್ನು ತರುವುದರೊಂದಿಗೆ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಆ ಪ್ರಕಾರ, ಟೆಸ್ಟ್ ಕ್ರಿಕೆಟ್​ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿ ಜಾರಿಗೆ ತಂದಿದ್ದ ಐಸಿಸಿ, ಇದೀಗ ಟಿ20 ಕ್ರಿಕೆಟ್​ನ ನಿಯಮದಲ್ಲೂ ಒಂದು ಬದಲಾವಣೆ ಮಾಡಿದೆ.

2 / 6

ಇತ್ತೀಚಿನ ದಿನಗಳಲ್ಲಿ ಟಿ20 ಕ್ರಿಕೆಟ್ ಸಾಕಷ್ಟು ಮನ್ನಣೆಗಳಿಸುತ್ತಿದೆ. ಪ್ರತಿ ದೇಶಗಳು ಸಹ ಟಿ20 ಲೀಗ್​ಗಳನ್ನು ಆಯೋಜಿಸುವ ಮೂಲಕ ಜನರನ್ನು ಕ್ರಿಕೆಟ್​ನತ್ತ ಸೆಳೆಯುತ್ತಿವೆ. ಇದನ್ನು ಅರಿತುಕೊಂಡಿರುವ ಐಸಿಸಿ ಇದೀಗ ಪುರುಷರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ ಪಂದ್ಯಗಳ ಪವರ್‌ಪ್ಲೇ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಿದೆ.

3 / 6

ಐಸಿಸಿ ತಂದಿರುವ ಹೊಸ ಬದಲಾವಣೆಯ ಪ್ರಕಾರ, ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ಇನ್ನಿಂಗ್ಸ್‌ನ ಓವರ್‌ಗಳನ್ನು ಕಡಿಮೆ ಮಾಡಿದರೆ, ಪವರ್‌ಪ್ಲೇ ಓವರ್‌ಗಳನ್ನು ಓವರ್‌ಗಳ ಬದಲಿಗೆ ಚೆಂಡುಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

4 / 6

ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ, 20 ಓವರ್‌ಗಳ ಇನ್ನಿಂಗ್ಸ್‌ನಲ್ಲಿ ಮೊದಲ 6 ಓವರ್‌ಗಳು ಪವರ್‌ಪ್ಲೇ ಆಗಿದ್ದವು. ಈ 6 ಓವರ್​ಗಳಲ್ಲಿ ಫೀಲ್ಡಿಂಗ್ ಮಾಡುತ್ತಿರುವ ತಂಡವು 30 ಯಾರ್ಡ್ ವೃತ್ತದ ಹೊರಗೆ ಇಬ್ಬರಿಗಿಂತ ಹೆಚ್ಚು ಫೀಲ್ಡರ್‌ಗಳನ್ನು ಇರಿಸುವಂತಿಲ್ಲ. ಆ ಬಳಿಕ ಅಂದರೆ 6 ಓವರ್ ಮುಗಿದ ನಂತರ ಉಳಿದ ಓವರ್‌ಗಳಲ್ಲಿ, 30 ಯಾರ್ಡ್ ವೃತ್ತದ ಹೊರಗೆ ಐದು ಫೀಲ್ಡರ್‌ಗಳನ್ನು ನಿಲ್ಲಿಸಬಹುದು.

5 / 6

ಆದರೆ ಇದೀಗ ಐಸಿಸಿ ತಂದಿರುವ ಹೊಸ ನಿಯಮದ ಪ್ರಕಾರ, ಒಂದು ಇನ್ನಿಂಗ್ಸ್ 5 ಓವರ್‌ಗಳಾಗಿದ್ದರೆ, ಅಂದರೆ ಮಳೆ ಅಥವಾ ಇನ್ನಿತ್ತರ ಕಾರಣದಿಂದ ಉಭಯ ತಂಡಗಳಿಗೆ ಕೇವಲ 5 ಓವರ್​ಗಳನ್ನು ನಿಗದಿಪಡಿಸಿದರೆ, ಆಗ ಪವರ್‌ಪ್ಲೇ 1.3 ಓವರ್‌ಗಳಾಗಿರುತ್ತದೆ. ಅಂದರೆ ಈ 9 ಎಸೆತಗಳಲ್ಲಿ ಕೇವಲ ಇಬ್ಬರು ಫೀಲ್ಡರ್​ಗಳು ಮಾತ್ರ 30 ಯಾರ್ಡ್​ ಸರ್ಕಲ್​ನಿಂದ ಹೊರಗೆ ನಿಲ್ಲಬೇಕು.

6 / 6

ಹಾಗೆಯೇ ಪಂದ್ಯ 6 ಓವರ್‌ಗಳ ಇನ್ನಿಂಗ್ಸ್‌ನದ್ದಾಗಿದ್ದರೆ, ಪವರ್‌ಪ್ಲೇ 1.5 ಓವರ್‌ಗಳಾಗಿರುತ್ತದೆ. 10 ಓವರ್‌ಗಳದ್ದಾಗಿದ್ದರೆ, ಪವರ್‌ಪ್ಲೇ 3 ಓವರ್‌ಗಳಾಗಿರುತ್ತದೆ. ಒಂದು ವೇಳೆ ಪಂದ್ಯವು 19 ಓವರ್‌ಗಳಾಗಿದ್ದರೆ, ಪವರ್‌ಪ್ಲೇ 5.4 ಓವರ್‌ಗಳಾಗಿರುತ್ತದೆ. ಈಗಾಗಲೇ ಟಿ20 ಬ್ಲಾಸ್ಟ್ ಪಂದ್ಯಾವಳಿಯಲ್ಲಿ ಈ ನಿಯಮವನ್ನು ಜಾರಿಗೆ ತಂದಿದ್ದು. ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ನಿಯಮವನ್ನು ಜುಲೈ 2 ರಿಂದ ಜಾರಿಗೆ ತರಲಾಗುವುದು.

Loading...
Unable to load recommendations.
Follow Us