ICC T20 Rankings: ಐಸಿಸಿ ನೂತನ ಟಿ20 ರ್ಯಾಂಕಿಂಗ್ನಲ್ಲಿ ದಾಖಲೆಯ ಜಿಗಿತ ಕಂಡ ಶುಭ್ಮನ್ ಗಿಲ್
ICC T20 Rankings: ಐಸಿಸಿ ಪ್ರಕಟಿಸಿರುವ ನೂತನ ಟಿ20 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿರುವ ಟಾಪ್ 10 ಆಟಗಾರರು ಈ ಕೆಳಗಿನಂತಿದೆ...
Updated on: Feb 08, 2023 | 5:58 PM

ICC T20 Rankings: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೂತನ ಟಿ20 ಬ್ಯಾಟ್ಸ್ಮನ್ಗಳ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ವಿಶೇಷ ಎಂದರೆ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ದಾಖಲೆಯ ಜಿಗಿತ ಕಂಡಿದ್ದಾರೆ. ಅಂದರೆ ಕಳೆದ ಬಾರಿ 168ನೇ ಸ್ಥಾನದಲ್ಲಿದ್ದ ಗಿಲ್ ಈ ಬಾರಿ 30ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಶುಭ್ಮನ್ ಏಕಾಏಕಿ 100 ಕ್ಕೂ ಅಧಿಕ ಸ್ಥಾನಗಳ ಜಿಗಿತ ಕಂಡಿರುವುದು ವಿಶೇಷ.

ಸೂರ್ಯಕುಮಾರ್ ಯಾದವ್ ಅವರನ್ನು ಹೊರತುಪಡಿಸಿ ಟೀಮ್ ಇಂಡಿಯಾದ ಯಾವುದೇ ಬ್ಯಾಟರ್ ಟಾಪ್-10 ನಲ್ಲಿ ಸ್ಥಾನ ಪಡೆದಿಲ್ಲ. ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ ಒಂದು ಸ್ಥಾನ ಕುಸಿದು 15ನೇ ಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ ಎರಡು ಸ್ಥಾನ ಕುಸಿತದೊಂದಿಗೆ 27ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ನಾಯಕ ರೋಹಿತ್ ಶರ್ಮಾ 29ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಐಸಿಸಿ ಪ್ರಕಟಿಸಿರುವ ನೂತನ ಟಿ20 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿರುವ ಅಗ್ರ 10 ಆಟಗಾರರು ಯಾರೆಲ್ಲಾ ಎಂದು ನೋಡೋಣ...

10- ಅಲೆಕ್ಸ್ ಹೇಲ್ (ಇಂಗ್ಲೆಂಡ್)- 655 ಅಂಕಗಳು

9- ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್)- 662 ಅಂಕಗಳು

8- ಆರೋನ್ ಫಿಂಚ್ (ಆಸ್ಟ್ರೇಲಿಯಾ) - 680 ಅಂಕಗಳು

7- ರಿಲೀ ರೊಸ್ಸೊ (ಸೌತ್ ಆಫ್ರಿಕಾ)- 693 ಅಂಕಗಳು

6- ಡೇವಿಡ್ ಮಲಾನ್ (ಇಂಗ್ಲೆಂಡ್) - 719 ಅಂಕಗಳು

5- ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ) - 748 ಅಂಕಗಳು

4- ಡೆವೊನ್ ಕಾನ್ವೇ (ನ್ಯೂಜಿಲೆಂಡ್)- 768 ಅಂಕಗಳು

3- ಬಾಬರ್ ಆಜಂ (ಪಾಕಿಸ್ತಾನ್) - 778 ಅಂಕಗಳು

2- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್) - 836 ಅಂಕಗಳು

1- ಸೂರ್ಯಕುಮಾರ್ ಯಾದವ್ (ಭಾರತ)- 906 ಅಂಕಗಳು




