Virat Kohli: ಪಂದ್ಯವಾಡದೇ ಹೀಗೊಂದು ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ

ICC Team of the Year: ಸದಾ ಬ್ಯಾಟ್ ಮೂಲಕ ದಾಖಲೆ ಬರೆಯುತ್ತಿದ್ದ ಕಿಂಗ್ ಕೊಹ್ಲಿ ಈ ಬಾರಿ ಮೈದಾನಕ್ಕಿಳಿಯದೇ ವಿಶ್ವ ದಾಖಲೆಯನ್ನು ನಿರ್ಮಿಸಿರುವುದು ವಿಶೇಷ.

TV9 Web
| Updated By: ಝಾಹಿರ್ ಯೂಸುಫ್

Updated on:Jan 23, 2023 | 9:31 PM

ವಿರಾಟ್ ಕೊಹ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಮುನ್ನುಗ್ಗುತ್ತಿರುವುದು ಗೊತ್ತೇ ಇದೆ. ಅದರಲ್ಲೂ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸುವ ಮೂಲಕ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದರು. ಆದರೆ ಈ ಬಾರಿ ಮೈದಾನಕ್ಕಿಳಿಯದೇ ದಾಖಲೆ ಬರೆದಿರುವುದು ವಿಶೇಷ.

1 / 8
ಹೌದು, ಐಸಿಸಿ ಪ್ರಕಟಿಸಿರುವ 2022ರ ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಐಸಿಸಿ ಪ್ರಕಟಿಸಿದ ಮೂರು ಸ್ವರೂಪಗಳ ತಂಡಗಳಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಎಂಬ ವಿಶ್ವ ದಾಖಲೆ ಕಿಂಗ್ ಕೊಹ್ಲಿ ಪಾಲಾಯಿತು.

2 / 8
ಇದಕ್ಕೂ ಮುನ್ನ, 2017, 2018 ಮತ್ತು 2019 ರಲ್ಲಿ ಐಸಿಸಿಯ ವರ್ಷದ ಟೆಸ್ಟ್ ತಂಡದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದರು.

3 / 8
ಇನ್ನು 2012, 2014, 2016, 2017, 2018, 2019 ರಲ್ಲಿ ಐಸಿಸಿ ಪ್ರಕಟಿಸಿದ ವರ್ಷದ ಏಕದಿನ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದರು.

4 / 8
ಇದೀಗ 2022 ರ ಐಸಿಸಿ ಟಿ20 ತಂಡದಲ್ಲಿ ಕಿಂಗ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಐಸಿಸಿ ಪ್ರಕಟಿಸಿದ ಮೂರು ಸ್ವರೂಪಗಳ ತಂಡಗಳಲ್ಲಿ ಸ್ಥಾನ ಪಡೆದ ವಿಶ್ವದ ಏಕೈಕ ಕ್ರಿಕೆಟಿಗನಾಗಿ ಕಿಂಗ್ ಕೊಹ್ಲಿ ಹೊರಹೊಮ್ಮಿದ್ದಾರೆ.

5 / 8
ಅಷ್ಟೇ ಅಲ್ಲದೆ ಐಸಿಸಿ ಪ್ರಕಟಿಸಿದ ತಂಡಗಳಲ್ಲಿ ಒಟ್ಟು 10 ಬಾರಿ ಸ್ಥಾನ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

6 / 8
ಒಟ್ಟಿನಲ್ಲಿ ಸದಾ ಬ್ಯಾಟ್ ಮೂಲಕ ದಾಖಲೆ ಬರೆಯುತ್ತಿದ್ದ ಕಿಂಗ್ ಕೊಹ್ಲಿ ಈ ಬಾರಿ ಮೈದಾನಕ್ಕಿಳಿಯದೇ ವಿಶ್ವ ದಾಖಲೆಯನ್ನು ನಿರ್ಮಿಸಿರುವುದು ವಿಶೇಷ.

7 / 8
2022ರ ಐಸಿಸಿ ಪುರುಷರ ಟಿ20 ತಂಡ ಹೀಗಿದೆ: ಜೋಸ್ ಬಟ್ಲರ್ (ನಾಯಕ- ಇಂಗ್ಲೆಂಡ್), ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್), ವಿರಾಟ್ ಕೊಹ್ಲಿ (ಭಾರತ), ಸೂರ್ಯಕುಮಾರ್ ಯಾದವ್ (ಭಾರತ), ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್), ಸಿಕಂದರ್ ರಾಝ (ಜಿಂಬಾಬ್ವೆ), ಹಾರ್ದಿಕ್ ಪಾಂಡ್ಯ (ಭಾರತ), ಸ್ಯಾಮ್ ಕರನ್ (ಇಂಗ್ಲೆಂಡ್), ವನಿಂದು ಹಸರಂಗ (ಶ್ರೀಲಂಕಾ), ಹ್ಯಾರಿಸ್ ರೌಫ್ (ಪಾಕಿಸ್ತಾನ್), ಜೋಶ್ ಲಿಟಲ್ (ಐರ್ಲೆಂಡ್).

8 / 8

Published On - 9:31 pm, Mon, 23 January 23

Follow us