AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: 3ನೇ ಸೋಲು, ಸೆಮೀಸ್ ಕನಸು ಕ್ಷೀಣ! 277 ರನ್ ಗಳಿಸಿದರೂ ಭಾರತ ಸೋತಿದ್ಯಾಕೆ? ಇಲ್ಲಿದೆ ವಿವರ

ICC women's world cup: ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ಮೂರನೇ ಸೋಲಾಗಿದ್ದು, ಈ ಸೋಲಿನ ನಂತರ ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಕಷ್ಟಕರವಾಗಿದೆ.

ಪೃಥ್ವಿಶಂಕರ
|

Updated on:Mar 19, 2022 | 3:09 PM

Share
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಶನಿವಾರ ಭಾರತ ಮತ್ತೊಂದು ಸೋಲು ಕಂಡಿದೆ. ಆಸ್ಟ್ರೇಲಿಯಾ ಆರು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ಮೂರನೇ ಸೋಲು ಮತ್ತು ಇದರೊಂದಿಗೆ ಸೆಮಿಫೈನಲ್‌ ಹಾದಿ ಮತ್ತಷ್ಟು ಕಷ್ಟಕರವಾಗಿದೆ. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್​ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಉತ್ತರವಾಗಿ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ ಗುರಿ ತಲುಪಿತು. ಬೃಹತ್ ಸ್ಕೋರ್ ಗಳಿಸಿದರು ಭಾರತ ಸೋತಿದ್ಯಾಕೆ? ಇಲ್ಲಿದೆ ವಿವರ

1 / 5
ಭಾರತೀಯ ಬೌಲರ್‌ಗಳು ಆರಂಭದಲ್ಲಿ ತಂಡಕ್ಕೆ ಯಶಸ್ಸು ನೀಡುವಲ್ಲಿ ವಿಫಲರಾದರು. ಆಸ್ಟ್ರೇಲಿಯದ ರಾಚೆಲ್ ಹೇನ್ಸ್ ಮತ್ತು ಅಲಿಸ್ಸಾ ಹೀಲಿ ತಂಡಕ್ಕೆ ಬಲಿಷ್ಠ ಆರಂಭ ನೀಡಿ ಮೊದಲ ವಿಕೆಟ್‌ಗೆ 121 ರನ್‌ಗಳ ಜತೆಯಾಟ ನಡೆಸಿ ತಂಡದ ಗೆಲುವಿಗೆ ಅಡಿಪಾಯ ಹಾಕಿದರು.

2 / 5
IND vs AUS: 3ನೇ ಸೋಲು, ಸೆಮೀಸ್ ಕನಸು ಕ್ಷೀಣ! 277 ರನ್ ಗಳಿಸಿದರೂ ಭಾರತ ಸೋತಿದ್ಯಾಕೆ? ಇಲ್ಲಿದೆ ವಿವರ

ಭಾರತ ಸತತ ಎರಡು ವಿಕೆಟ್ ಉರುಳಿಸಿತು. ಹೀಲಿ ಒಟ್ಟು 121 ರನ್ ಗಳಿಸಿ ಔಟಾದರು ಮತ್ತು ರಾಚೆಲ್ 123 ರನ್ ಗಳಿಸಿ ಔಟಾದರು. ಇಲ್ಲಿ ಭಾರತಕ್ಕೆ ಮರಳುವ ಅವಕಾಶವಿತ್ತು, ಆದರೆ ಮೆಗ್ ಲೆನ್ನಿಂಗ್ ಮತ್ತು ಅಲಿಸ್ಸಾ ಪೆರ್ರಿ ಜೋಡಿಯು ಮತ್ತೊಂದು ಬಲವಾದ ಜೊತೆಯಾಟವನ್ನು ಮಾಡುವ ಮೂಲಕ ಭಾರತದ ಮರಳುವಿಕೆಯನ್ನು ಕಷ್ಟಕರವಾಗಿಸಿತು. ಇಬ್ಬರೂ ಮೂರನೇ ವಿಕೆಟ್‌ಗೆ 103 ರನ್ ಸೇರಿಸಿದರು.

3 / 5
IND vs AUS: 3ನೇ ಸೋಲು, ಸೆಮೀಸ್ ಕನಸು ಕ್ಷೀಣ! 277 ರನ್ ಗಳಿಸಿದರೂ ಭಾರತ ಸೋತಿದ್ಯಾಕೆ? ಇಲ್ಲಿದೆ ವಿವರ

ಆಸ್ಟ್ರೇಲಿಯದ ಬ್ಯಾಟಿಂಗ್ ಅತ್ಯಂತ ಬಲಿಷ್ಠವಾಗಿದ್ದು, ಆ ದೃಷ್ಟಿಯಿಂದ ಭಾರತ ಕಡಿಮೆ ಸ್ಕೋರ್ ಗಳಿಸಿತು. ಇದಕ್ಕೆ ಕಾರಣ ಮತ್ತೊಮ್ಮೆ ತಂಡದ ನಿಧಾನಗತಿಯ ಬ್ಯಾಟಿಂಗ್. ಯಾಸ್ತಿಕಾ ಭಾಟಿಯಾ 59 ರನ್ ಗಳಿಸಲು 83 ಎಸೆತಗಳನ್ನು ತೆಗೆದುಕೊಂಡರು. ನಾಯಕಿ ಮಿಥಾಲಿ ರಾಜ್ 68 ರನ್ ಗಳಿಸಲು 68 ಎಸೆತಗಳನ್ನು ಎದುರಿಸಿದರು.

4 / 5
IND vs AUS: 3ನೇ ಸೋಲು, ಸೆಮೀಸ್ ಕನಸು ಕ್ಷೀಣ! 277 ರನ್ ಗಳಿಸಿದರೂ ಭಾರತ ಸೋತಿದ್ಯಾಕೆ? ಇಲ್ಲಿದೆ ವಿವರ

ಟಾಸ್ ಸೋತಿದ್ದು ಭಾರತದ ಸೋಲಿಗೆ ಕಾರಣವಾಗಿತ್ತು. ಪಂದ್ಯದ ಟಾಸ್ ಸಮಯದಲ್ಲಿ ನಾಯಕಿ ಮಿಥಾಲಿ ಅವರು ಮೊದಲು ಬೌಲಿಂಗ್ ಮಾಡಲು ಬಯಸಿದ್ದರು ಆದರೆ ಆಸ್ಟ್ರೇಲಿಯಾ ಟಾಸ್ ಗೆದ್ದು ಭಾರತಕ್ಕೆ ಮೊದಲು ಬ್ಯಾಟಿಂಗ್ ನೀಡಿತು. ಜೊತೆಗೆ ಭಾರತಕ್ಕೆ ಉತ್ತಮ ಆರಂಭವೂ ಸಿಗಲಿಲ್ಲ. ಒಟ್ಟು ಸ್ಕೋರ್ 11 ರಲ್ಲಿ ಸ್ಮೃತಿ ಮಂಧಾನ ಮತ್ತು ಒಟ್ಟು ಸ್ಕೋರ್ 28 ರಲ್ಲಿ ಶೆಫಾಲಿ ವರ್ಮಾ ಔಟಾದರು.

5 / 5

Published On - 2:38 pm, Sat, 19 March 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ