- Kannada News Photo gallery Cricket photos ICC womens world cup ind vs aus indian team beaten by Australia know the reason
IND vs AUS: 3ನೇ ಸೋಲು, ಸೆಮೀಸ್ ಕನಸು ಕ್ಷೀಣ! 277 ರನ್ ಗಳಿಸಿದರೂ ಭಾರತ ಸೋತಿದ್ಯಾಕೆ? ಇಲ್ಲಿದೆ ವಿವರ
ICC women's world cup: ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ಮೂರನೇ ಸೋಲಾಗಿದ್ದು, ಈ ಸೋಲಿನ ನಂತರ ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಕಷ್ಟಕರವಾಗಿದೆ.
Updated on:Mar 19, 2022 | 3:09 PM



ಭಾರತ ಸತತ ಎರಡು ವಿಕೆಟ್ ಉರುಳಿಸಿತು. ಹೀಲಿ ಒಟ್ಟು 121 ರನ್ ಗಳಿಸಿ ಔಟಾದರು ಮತ್ತು ರಾಚೆಲ್ 123 ರನ್ ಗಳಿಸಿ ಔಟಾದರು. ಇಲ್ಲಿ ಭಾರತಕ್ಕೆ ಮರಳುವ ಅವಕಾಶವಿತ್ತು, ಆದರೆ ಮೆಗ್ ಲೆನ್ನಿಂಗ್ ಮತ್ತು ಅಲಿಸ್ಸಾ ಪೆರ್ರಿ ಜೋಡಿಯು ಮತ್ತೊಂದು ಬಲವಾದ ಜೊತೆಯಾಟವನ್ನು ಮಾಡುವ ಮೂಲಕ ಭಾರತದ ಮರಳುವಿಕೆಯನ್ನು ಕಷ್ಟಕರವಾಗಿಸಿತು. ಇಬ್ಬರೂ ಮೂರನೇ ವಿಕೆಟ್‌ಗೆ 103 ರನ್ ಸೇರಿಸಿದರು.

ಆಸ್ಟ್ರೇಲಿಯದ ಬ್ಯಾಟಿಂಗ್ ಅತ್ಯಂತ ಬಲಿಷ್ಠವಾಗಿದ್ದು, ಆ ದೃಷ್ಟಿಯಿಂದ ಭಾರತ ಕಡಿಮೆ ಸ್ಕೋರ್ ಗಳಿಸಿತು. ಇದಕ್ಕೆ ಕಾರಣ ಮತ್ತೊಮ್ಮೆ ತಂಡದ ನಿಧಾನಗತಿಯ ಬ್ಯಾಟಿಂಗ್. ಯಾಸ್ತಿಕಾ ಭಾಟಿಯಾ 59 ರನ್ ಗಳಿಸಲು 83 ಎಸೆತಗಳನ್ನು ತೆಗೆದುಕೊಂಡರು. ನಾಯಕಿ ಮಿಥಾಲಿ ರಾಜ್ 68 ರನ್ ಗಳಿಸಲು 68 ಎಸೆತಗಳನ್ನು ಎದುರಿಸಿದರು.

ಟಾಸ್ ಸೋತಿದ್ದು ಭಾರತದ ಸೋಲಿಗೆ ಕಾರಣವಾಗಿತ್ತು. ಪಂದ್ಯದ ಟಾಸ್ ಸಮಯದಲ್ಲಿ ನಾಯಕಿ ಮಿಥಾಲಿ ಅವರು ಮೊದಲು ಬೌಲಿಂಗ್ ಮಾಡಲು ಬಯಸಿದ್ದರು ಆದರೆ ಆಸ್ಟ್ರೇಲಿಯಾ ಟಾಸ್ ಗೆದ್ದು ಭಾರತಕ್ಕೆ ಮೊದಲು ಬ್ಯಾಟಿಂಗ್ ನೀಡಿತು. ಜೊತೆಗೆ ಭಾರತಕ್ಕೆ ಉತ್ತಮ ಆರಂಭವೂ ಸಿಗಲಿಲ್ಲ. ಒಟ್ಟು ಸ್ಕೋರ್ 11 ರಲ್ಲಿ ಸ್ಮೃತಿ ಮಂಧಾನ ಮತ್ತು ಒಟ್ಟು ಸ್ಕೋರ್ 28 ರಲ್ಲಿ ಶೆಫಾಲಿ ವರ್ಮಾ ಔಟಾದರು.
Published On - 2:38 pm, Sat, 19 March 22




