ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಪಾಂಡ್ಯ ಸೇರಿದಂತೆ 4 ವೇಗಿಗಳೊಂದಿಗೆ ಟೀಂ ಇಂಡಿಯಾ ಕಣಕ್ಕೆ ಇಳಿದಿತ್ತು. ಭಾರತದ ವೇಗಿಗಳು ಕೂಡ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಆಸ್ಟ್ರೇಲಿಯಾವನ್ನು 188 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಇದರಲ್ಲಿ ಪಾಂಡ್ಯ, ಶಮಿ ಮತ್ತು ಸಿರಾಜ್ ಒಟ್ಟಾಗಿ 10 ವಿಕೆಟ್‌ಗಳಲ್ಲಿ 7 ವಿಕೆಟ್ ಪಡೆದರು.