IND vs AUS: ದೆಹಲಿ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಆಟಗಾರರು ನಿರ್ಮಿಸಿದ ಪ್ರಮುಖ ದಾಖಲೆಗಳಿವು

IND vs AUS: ಭಾರತ ತಂಡ ದೆಹಲಿ ಟೆಸ್ಟ್ ಗೆದ್ದಿದ್ದಲ್ಲದೆ ಹಲವು ದಾಖಲೆಗಳನ್ನು ಮಾಡಿದೆ. ವಿರಾಟ್ ಕೊಹ್ಲಿಯಿಂದ ಹಿಡಿದು ರವಿಚಂದ್ರನ್ ಅಶ್ವಿನ್ ಮತ್ತು ಜಡೇಜಾ ಕೂಡ ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ.

|

Updated on:Feb 19, 2023 | 5:50 PM

ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಭಾರತ ನಾಲ್ಕು ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

1 / 8
ಭಾರತ ತಂಡ ದೆಹಲಿ ಟೆಸ್ಟ್ ಗೆದ್ದಿದ್ದಲ್ಲದೆ ಹಲವು ದಾಖಲೆಗಳನ್ನು ಮಾಡಿದೆ. ವಿರಾಟ್ ಕೊಹ್ಲಿಯಿಂದ ಹಿಡಿದು ರವಿಚಂದ್ರನ್ ಅಶ್ವಿನ್ ಮತ್ತು ಜಡೇಜಾ ಕೂಡ ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಈ ಪಂದ್ಯದಲ್ಲಿ ಯಾರು ಯಾವ ದಾಖಲೆ ಮಾಡಿದ್ದಾರೆ ಎಂಬುದರ ವಿವರ ಇಲ್ಲಿದೆ.

2 / 8
ಈ ಟೆಸ್ಟ್ ಸೋಲಿನೊಂದಿಗೆ ಏಷ್ಯಾದಲ್ಲಿ ಆಸ್ಟ್ರೇಲಿಯಾದ ಕಳಪೆ ಪ್ರದರ್ಶನ ಮುಂದುವರಿದಿದೆ. ಅಕ್ಟೋಬರ್ 2008 ರಿಂದ, ಆಸ್ಟ್ರೇಲಿಯಾವು ಏಷ್ಯಾದಲ್ಲಿ 33 ಟೆಸ್ಟ್ ಪಂದ್ಯಗಳನ್ನು ಆಡಿದೆ, ಅದರಲ್ಲಿ ಕೇವಲ ಐದು ಪಂದ್ಯಗಳನ್ನು ಮಾತ್ರ ಗೆದ್ದಿದೆ.

3 / 8
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಓಟ ಮುಂದುವರಿಸಿದ್ದು, 1993 ರಿಂದ ಸತತ 13 ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಈ ಮೈದಾನದಲ್ಲಿ ಅಜೇಯವಾಗಿದೆ.

4 / 8
ಈ ಪಂದ್ಯದಲ್ಲಿ ಒಟ್ಟು ಆರು ವಿಕೆಟ್ ಪಡೆದ ಅಶ್ವಿನ್, ಹರ್ಭಜನ್ ಸಿಂಗ್ ಅವರನ್ನು ಸರಿಗಟ್ಟಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಎಲ್ಲಾ ಸ್ವರೂಪಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಹರ್ಭಜನ್‌ ಅವರೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಇಬ್ಬರ ಹೆಸರಲ್ಲಿ 129 ವಿಕೆಟ್‌ಗಳಿದ್ದು, ಆಸ್ಟ್ರೇಲಿಯ ವಿರುದ್ಧ ಎಲ್ಲಾ ಫಾರ್ಮೆಟ್‌ಗಳಲ್ಲಿ ಒಟ್ಟು 142 ವಿಕೆಟ್‌ಗಳನ್ನು ಪಡೆದಿರುವ ಅನಿಲ್ ಕುಂಬ್ಳೆ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

5 / 8
ಈ ಪಂದ್ಯದಲ್ಲಿ ಕೊಹ್ಲಿ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗದಿದ್ದರೂ, ಎಲ್ಲಾ ಮೂರು ಮಾದರಿಗಳಲ್ಲಿ ಒಟ್ಟು 25,000 ರನ್ ಪೂರೈಸಿದ ದಾಖಲೆ ಮಾಡಿದರು. ಇದರೊಂದಿಗೆ ಅತ್ಯಂತ ವೇಗವಾಗಿ ಈ ಮೈಲಿಗಲ್ಲು ಸಾಧಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

6 / 8
ಈ ಪಂದ್ಯದಲ್ಲಿ ಒಟ್ಟು 10 ವಿಕೆಟ್ ಪಡೆದ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠರಾಗಿ ಆಯ್ಕೆಯಾದರು. ಇದು ಆಸ್ಟ್ರೇಲಿಯಾ ವಿರುದ್ಧ ಅವರ ನಾಲ್ಕನೇ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿದ್ದು, ಆಸ್ಟ್ರೇಲಿಯ ವಿರುದ್ಧ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿರುವ ವಿಚಾರದಲ್ಲಿ ಅವರು ಚೇತೇಶ್ವರ ಪೂಜಾರ ಅವರನ್ನು ಸರಿಗಟ್ಟಿದ್ದಾರೆ.

7 / 8
ಆಸೀಸ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡುವುದರೊಂದಿಗೆ ಅಶ್ವಿನ್, ಟೆಸ್ಟ್ ಕ್ರಿಕೆಟ್‌ನಲ್ಲಿ ಎಂಟನೇ ಬಾರಿಗೆ ಅವರನ್ನು ಔಟ್ ಮಾಡಿದ ದಾಖಲೆ ಬರೆದರು. ಇದರೊಂದಿಗೆ ಟೆಸ್ಟ್‌ನಲ್ಲಿ ಸ್ಮಿತ್‌ರನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ವಿಚಾರದಲ್ಲಿ ಇದೀಗ ಅಶ್ವಿನ್, ಜೇಮ್ಸ್ ಆಂಡರ್ಸನ್ ಅವರೊಂದಿಗೆ ಜಂಟಿ ಎರಡನೇ ಸ್ಥಾನ ಪಡೆುಕೊಂಡಿದ್ದಾರೆ.

8 / 8

Published On - 5:50 pm, Sun, 19 February 23

Follow us