- Kannada News Photo gallery Cricket photos IND vs AUS 4th test Shubman Gill has hit the second century of his Test career vs australia
IND vs AUS: ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ಬಾರಿಸಿದ ಶುಭ್ಮನ್ ಗಿಲ್; ಭದ್ರ ಸ್ಥಿತಿಯಲ್ಲಿ ಭಾರತ
IND vs AUS: ಅಹಮದಾಬಾದ್ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಟೀಂ ಇಂಡಿಯಾ ಓಪನರ್ ಶುಭ್ಮನ್ ಗಿಲ್ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ಬಾರಿಸಿದ್ದಾರೆ.
Updated on:Mar 11, 2023 | 2:33 PM

ಅಹಮದಾಬಾದ್ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಟೀಂ ಇಂಡಿಯಾ ಓಪನರ್ ಶುಭ್ಮನ್ ಗಿಲ್ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ಬಾರಿಸಿದ್ದಾರೆ.

ರೋಹಿತ್ ವಿಕೆಟ್ ಬಳಿಕ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಗಿಲ್, 194 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಮೂಲಕ ತಮ್ಮ ಶತಕ ಪೂರೈಸಿದರು.

ಅಷ್ಟೇ ಅಲ್ಲ, ಅಹಮದಾಬಾದ್‌ನ ಈ ಮೈದಾನದಲ್ಲಿ 39 ದಿನಗಳಲ್ಲಿ ಇದು ಗಿಲ್ ಅವರ ಎರಡನೇ ಶತಕವಾಗಿದೆ. ಕಳೆದ ತಿಂಗಳು ಇದೇ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20ಯಲ್ಲಿ ಗಿಲ್ ಶತಕ ಸಿಡಿಸಿದ್ದರು.

61ನೇ ಓವರ್‌ನಲ್ಲಿ ನಾಥನ್ ಲಿಯಾನ್ ಅವರ ತಲೆಯ ಮೇಲೆ ಬೌಂಡರಿ ಬಾರಿಸುವ ಮೂಲಕ 96 ರನ್ ತಲುಪಿದ ಗಿಲ್, ಆ ಬಳಿಕ 62ನೇ ಓವರ್‌ನಲ್ಲಿ, ಮರ್ಫಿ ಅವರ ಎರಡನೇ ಎಸೆತದಲ್ಲಿ ಶಾರ್ಟ್ ಫೈನ್ ಲೆಗ್ ಮೇಲೆ ಬೌಂಡರಿ ಬಾರಿಸಿ ತಮ್ಮ ಶತಕ ಪೂರೈಸಿದರು.

ನಾಯಕ ರೋಹಿತ್ ವಿಕೆಟ್ ಬಳಿಕ ಜೊತೆಯಾದ ಗಿಲ್ ಹಾಗೂ ಪೂಜಾರ ಶತಕದ ಜೊತೆಯಾಟವನ್ನಾಡಿ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ ಅಂತಿಮವಾಗಿ 42 ರನ್ ಗಳಿಸಿದ ಪೂಜಾರ ಔಟಾಗುವುದರೊಂದಿಗೆ ಭಾರತಕ್ಕೆ ಎರಡನೇ ಹೊಡೆತ ಬಿದ್ದಿದೆ.

ಈ ಶತಕದೊಂದಿಗೆ ಒಂದೇ ವರ್ಷದಲ್ಲಿ ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಸಿಡಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ , ಸುರೇಶ್ ರೈನಾ ಮತ್ತು ಕೆಎಲ್ ರಾಹುಲ್ ಈ ಸಾಧನೆ ಮಾಡಿದ್ದಾರೆ.
Published On - 2:18 pm, Sat, 11 March 23




