IND vs AUS: ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ಬಾರಿಸಿದ ಶುಭ್​ಮನ್ ಗಿಲ್; ಭದ್ರ ಸ್ಥಿತಿಯಲ್ಲಿ ಭಾರತ

IND vs AUS: ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಆಸೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಟೀಂ ಇಂಡಿಯಾ ಓಪನರ್ ಶುಭ್​ಮನ್ ಗಿಲ್ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ಬಾರಿಸಿದ್ದಾರೆ.

ಪೃಥ್ವಿಶಂಕರ
|

Updated on:Mar 11, 2023 | 2:33 PM

ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಆಸೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಟೀಂ ಇಂಡಿಯಾ ಓಪನರ್ ಶುಭ್​ಮನ್ ಗಿಲ್ ತಮ್ಮ ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ಬಾರಿಸಿದ್ದಾರೆ.

1 / 6
ರೋಹಿತ್ ವಿಕೆಟ್ ಬಳಿಕ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಗಿಲ್, 194 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಮೂಲಕ ತಮ್ಮ ಶತಕ ಪೂರೈಸಿದರು.

2 / 6
ಅಷ್ಟೇ ಅಲ್ಲ, ಅಹಮದಾಬಾದ್‌ನ ಈ ಮೈದಾನದಲ್ಲಿ 39 ದಿನಗಳಲ್ಲಿ ಇದು ಗಿಲ್ ಅವರ ಎರಡನೇ ಶತಕವಾಗಿದೆ. ಕಳೆದ ತಿಂಗಳು ಇದೇ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20ಯಲ್ಲಿ ಗಿಲ್ ಶತಕ ಸಿಡಿಸಿದ್ದರು.

3 / 6
61ನೇ ಓವರ್‌ನಲ್ಲಿ ನಾಥನ್ ಲಿಯಾನ್ ಅವರ ತಲೆಯ ಮೇಲೆ ಬೌಂಡರಿ ಬಾರಿಸುವ ಮೂಲಕ 96 ರನ್‌ ತಲುಪಿದ ಗಿಲ್, ಆ ಬಳಿಕ 62ನೇ ಓವರ್‌ನಲ್ಲಿ, ಮರ್ಫಿ ಅವರ ಎರಡನೇ ಎಸೆತದಲ್ಲಿ ಶಾರ್ಟ್ ಫೈನ್‌ ಲೆಗ್​ ಮೇಲೆ ಬೌಂಡರಿ ಬಾರಿಸಿ ತಮ್ಮ ಶತಕ ಪೂರೈಸಿದರು.

4 / 6
ನಾಯಕ ರೋಹಿತ್ ವಿಕೆಟ್ ಬಳಿಕ ಜೊತೆಯಾದ ಗಿಲ್ ಹಾಗೂ ಪೂಜಾರ ಶತಕದ ಜೊತೆಯಾಟವನ್ನಾಡಿ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ ಅಂತಿಮವಾಗಿ 42 ರನ್ ಗಳಿಸಿದ ಪೂಜಾರ ಔಟಾಗುವುದರೊಂದಿಗೆ ಭಾರತಕ್ಕೆ ಎರಡನೇ ಹೊಡೆತ ಬಿದ್ದಿದೆ.

5 / 6
ಈ ಶತಕದೊಂದಿಗೆ ಒಂದೇ ವರ್ಷದಲ್ಲಿ ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಸಿಡಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ , ಸುರೇಶ್ ರೈನಾ ಮತ್ತು ಕೆಎಲ್ ರಾಹುಲ್ ಈ ಸಾಧನೆ ಮಾಡಿದ್ದಾರೆ.

6 / 6

Published On - 2:18 pm, Sat, 11 March 23

Follow us