AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sarfaraz Khan: ಸರ್ಫರಾಝ್ ಖಾನ್​ಗೆ ಅನ್ಯಾಯ: ಇದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ..!

India Test Squad: ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ.

TV9 Web
| Updated By: ಝಾಹಿರ್ ಯೂಸುಫ್

Updated on:Feb 21, 2023 | 10:09 PM

ಆಸ್ಟ್ರೇಲಿಯಾ ವಿರುದ್ಧದ ಕೊನೆಯ 2 ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಆದರೆ 17 ಸದಸ್ಯರ ಈ ತಂಡದಲ್ಲಿ ಈ ಬಾರಿ ಕೂಡ ಸರ್ಫರಾಝ್ ಖಾನ್​ಗೆ ಸ್ಥಾನ ನೀಡಿಲ್ಲ ಎಂಬುದೇ ಅಚ್ಚರಿ. ಅದರಲ್ಲೂ ಕೆಎಸ್​ ಭರತ್, ಸೂರ್ಯಕುಮಾರ್ ಯಾದವ್​, ಇಶಾನ್ ಕಿಶನ್ ಅವರಂತಹ ಆಟಗಾರರು ಸ್ಥಾನ ಪಡೆದಿದ್ದಾರೆ ಎಂಬುದೇ ಇಲ್ಲಿ ಸೋಜಿಗ.

1 / 11
ಹೌದು, ಟೆಸ್ಟ್ ತಂಡದ ಆಯ್ಕೆಗೆ ಮುಖ್ಯ ಮಾನದಂಡ ರಣಜಿ ಟೂರ್ನಿಯಲ್ಲಿನ ಪ್ರದರ್ಶನ. ಇಲ್ಲಿನ ಪ್ರಸ್ತುತ ಕಿಂಗ್ ಅಂದರೆ ಅದು ಸರ್ಫರಾಝ್ ಖಾನ್. ಇದಕ್ಕೆ ಸಾಕ್ಷಿಯೇ ಯುವ ಆಟಗಾರ ಪೇರಿಸಿಟ್ಟಿರುವ ರನ್​ಗಳು.

2 / 11
2019 ರಿಂದ ರಣಜಿ ಕ್ರಿಕೆಟ್​ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸುತ್ತಾ ಬಂದಿರುವ ಸರ್ಫರಾಝ್ ಖಾನ್ 2019-20 ರ ಸೀಸನ್​ನ​ಲ್ಲಿ 9 ಇನಿಂಗ್ಸ್​ ಮೂಲಕ ಕಲೆಹಾಕಿದ್ದು ಬರೋಬ್ಬರಿ 928 ರನ್​ಗಳು. ಅಂದರೆ ಪ್ರತಿ ಪಂದ್ಯದಲ್ಲಿ ಸರಾಸರಿ 154.66 ರನ್​ಗಳು.

3 / 11
ಇನ್ನು ರಣಜಿ ಟ್ರೋಫಿ 2021-22 ರ ಸೀಸನ್​ನಲ್ಲೂ 9 ಇನಿಂಗ್ಸ್​ನಲ್ಲಿ 122.75 ರ ಸರಾಸರಿಯಲ್ಲಿ ಒಟ್ಟು 982 ರನ್ ಪೇರಿಸಿದ್ದಾರೆ. ಹಾಗೆಯೇ 2022-23ರ ಸೀಸನ್​ನಲ್ಲಿನ 9 ಇನಿಂಗ್ಸ್​ಗಳಿಂದ 92.66ರ ಸರಾಸರಿಯಲ್ಲಿ 556 ರನ್​ ಕಲೆಹಾಕಿದ್ದಾರೆ. ಅಂದರೆ ಮೂರು ವರ್ಷಗಳಿಂದ ಯುವ ದಾಂಡಿಗ ದೇಶೀಯ ಅಂಗಳದಲ್ಲಿ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.

4 / 11
ಇಲ್ಲಿ ಒಟ್ಟಾರೆ ಅಂಕಿ ಅಂಶಗಳನ್ನು ನೋಡುವುದಾದರೆ, ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಒಟ್ಟು 54 ಇನಿಂಗ್ಸ್ ಆಡಿರುವ ಸರ್ಫರಾಝ್ ಖಾನ್ 79.65 ರ ಸರಾಸರಿಯಲ್ಲಿ ಒಟ್ಟು 3505 ರನ್​ ಕಲೆಹಾಕಿದ್ದಾರೆ. ಈ ವೇಳೆ 13 ಶತಕ ಹಾಗೂ 9 ಅರ್ಧಶತಕಗಳನ್ನೂ ಕೂಡ ಬಾರಿಸಿದ್ದಾರೆ. ಅಂದರೆ 79 ರ ಸರಾಸರಿಯಲ್ಲಿ ರನ್​ ಕಲೆಹಾಕಿದರೂ ಯುವ ಬ್ಯಾಟ್ಸ್​ಮನ್​ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಲಾಗಿಲ್ಲ ಎಂಬುದೇ ಆಶ್ಚರ್ಯ.

5 / 11
ಇಲ್ಲಿ ಅಚ್ಚರಿ ಎಂದರೆ ಕೆಎಸ್ ಭರತ್ ಅವರ ಆಯ್ಕೆ. ಏಕೆಂದರೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ (ರಣಜಿ ಟೂರ್ನಿ) 138 ಇನಿಂಗ್ಸ್​ ಆಡಿರುವ ಭರತ್, ಕಲೆಹಾಕಿರುವುದು 4744 ರನ್​ಗಳು​ ಮಾತ್ರ. ಅದು ಕೂಡ 37.65 ಸರಾಸರಿಯಲ್ಲಿ. ಅಂದರೆ ಇಲ್ಲಿ ದೇಶೀಯ ಅಂಗಳದಲ್ಲಿ ಭರತ್ ಅವರ ಅವರೇಜ್ ಸ್ಕೋರ್​ಗಿಂತ ಸರ್ಫರಾಝ್ ಖಾನ್ ಡಬಲ್ ರನ್​ಗಳಿಸಿದ್ದಾರೆ.

6 / 11
ಇನ್ನು ಸೂರ್ಯಕುಮಾರ್ ಯಾದವ್ ಅವರ ಅಂಕಿ ಅಂಶಗಳನ್ನು ನೋಡುವುದಾದರೆ, 133 ರಣಜಿ ಇನಿಂಗ್ಸ್​ ಆಡಿರುವ ಸೂರ್ಯ 44.45 ರ ಸರಾಸರಿಯಲ್ಲಿ 5557 ರನ್​ ಮಾತ್ರ ಕಲೆಹಾಕಿದ್ದಾರೆ.

7 / 11
ಹಾಗೆಯೇ ರಣಜಿ ಟೂರ್ನಿಯಲ್ಲಿ 82 ಇನಿಂಗ್ಸ್ ಆಡಿರುವ ಇಶಾನ್ ಕಿಶನ್ ಕೇವಲ 2985 ರನ್​ ಮಾತ್ರ ಗಳಿಸಿದ್ದಾರೆ. ಅದು ಕೂಡ 38.76 ರನ್​ ಸರಾಸರಿಯಲ್ಲಿ ಎಂಬುದು ಇಲ್ಲಿ ಗಮನಾರ್ಹ.

8 / 11
ಅಂದರೆ ಇಲ್ಲಿ ಭಾರತ ಟೆಸ್ಟ್ ತಂಡದಲ್ಲಿರುವ ಈ ಮೂವರಿಗಿಂತ ಸರ್ಫರಾಝ್ ಖಾನ್ ಆಯ್ಕೆಗೆ ಅರ್ಹರು. ಅದರಲ್ಲೂ ಕಳೆದ ಮೂರು ವರ್ಷಗಳ ರಣಜಿ ಟೂರ್ನಿಯ ಅಂಕಿ ಅಂಶಗಳನ್ನು ಮಾತ್ರ ತೆಗೆದುಕೊಂಡರೆ ಟೀಮ್ ಇಂಡಿಯಾಗೆ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಯುವ ದಾಂಡಿಗ ಈಗಾಗಲೇ ಆಯ್ಕೆಯಾಗಬೇಕಿತ್ತು.

9 / 11
ಆದರೆ ಇಲ್ಲಿ ಅಚ್ಚರಿ ಎಂದರೆ ದೇಶೀಯ ಅಂಗಳದಲ್ಲಿ 80 ಸರಾಸರಿಯಲ್ಲಿ ರನ್​ಗಳಿಸಿದ ಆಟಗಾರ ತಂಡದಿಂದ ಹೊರಗಿದ್ದಾನೆ. ಇನ್ನು 38 ರ ಸರಾಸರಿಯಲ್ಲಿ ರನ್​ ಕಲೆಹಾಕಿದ ಆಟಗಾರ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿದ್ದಾನೆ. ಹೌದು, ಸರ್ಫರಾಝ್ ಖಾನ್​ಗೆ ಪಾಲಿಗೆ ಇದು ಅನ್ಯಾಯ...ಇದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ..!

10 / 11
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.

11 / 11

Published On - 9:23 pm, Tue, 21 February 23

Follow us
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?

ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ

ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ

ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?

ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್

ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ

ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?

ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ

ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ