AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಛೇ ಇದೆಂತಾ ನೀಚತನ… ವಿರಾಟ್ ಕೊಹ್ಲಿ ತಂದೆ ವಿಷಯದಲ್ಲಿ ಕ್ಷುದ್ರತೆ ಮೆರೆದ ಆಸ್ಟ್ರೇಲಿಯಾ ಪತ್ರಿಕೆ..!

India vs Australia: ಮೆಲ್ಬೋರ್ನ್​ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ವಿರಾಟ್ ಕೊಹ್ಲಿ ಹಾಗೂ ಸ್ಯಾಮ್ ಕೊನ್​ಸ್ಟಾಸ್ ಪರಸ್ಪರ ಕಿತ್ತಾಡಿಕೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಕೊಹ್ಲಿ ಆಸ್ಟ್ರೇಲಿಯಾ ಆಟಗಾರನ ಮೇಲೆ ಭುಜಬಲ ಪ್ರಯೋಗಿಸಿರುವುದು. ಈ ಘಟನೆಯ ಬಳಿಕ ಕೊನ್​ಸ್ಟಾಸ್ ಇಂತಹ ಘಟನೆಗಳು ಮೈದಾನದಲ್ಲಿ ಸಹಜ ಎಂದಿದ್ದರು.

ಝಾಹಿರ್ ಯೂಸುಫ್
|

Updated on: Dec 29, 2024 | 10:32 AM

Share
ಮೆಲ್ಬೋರ್ನ್​ ಟೆಸ್ಟ್ ಪಂದ್ಯದ ಮೊದಲ ದಿನ... ಚೊಚ್ಚಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾ ದಾಂಡಿಗ ಸ್ಯಾಮ್ ಕೊನ್​ಸ್ಟಾಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಬ್ಯಾಟಿಂಗ್​ನೊಂದಿಗೆ ಟೀಮ್ ಇಂಡಿಯಾ ಬೌಲರ್​​ಗಳ ಬೆಂಡೆತ್ತಿದ್ದರು. ಇದರ ನಡುವೆ ವಿರಾಟ್ ಕೊಹ್ಲಿ, ಸ್ಯಾಮ್ ಕೊನ್​ಸ್ಟಾಸ್ ಅವರನ್ನು ಕೆಣಕುವ ಪ್ರಯತ್ನಕ್ಕೆ ಕೈ ಹಾಕಿದರು.

1 / 5
ಆದರೆ ಅದು ತುಸು ಎಲ್ಲೆ ಮೀರಿ ಹೋಯಿತು... ಕೆಣಕುವ ಪ್ರಯತ್ನದಲ್ಲಿ ವಿರಾಟ್ ಕೊಹ್ಲಿ, ಕೊನ್​ಸ್ಟಾಸ್ ಅವರನ್ನು ಭುಜದಿಂದ ಗುದ್ದಿದರು. ಮೊದಲ ದಿನದಾಟದಲ್ಲಿ ಇದುವೇ ದೊಡ್ಡ ಸುದ್ದಿಯಾಯಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ ವಿರಾಟ್ ಕೊಹ್ಲಿಗೆ ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ವಿಧಿಸಿದರು. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಯಿತು. ಅಲ್ಲಿಗೆ ಇದು ಮುಗಿಯಿತು.

2 / 5
ಆದರೆ ಆಸ್ಟ್ರೇಲಿಯಾ ಮಾಧ್ಯಮಗಳು ಮಾತ್ರ ಇದನ್ನು ಅಲ್ಲಿಗೆ ಮುಗಿಸಿರಲಿಲ್ಲ. 'ದಿ ವೆಸ್ಟ್ ಆಸ್ಟ್ರೇಲಿಯನ್' ಪತ್ರಿಕೆಯು ಕೊಹ್ಲಿಯನ್ನು ಕೋಡಂಗಿ (ಜೋಕರ್) ಎಂಬ ಶೀರ್ಷಿಕೆಯೊಂದಿಗೆ ಟೀಕಿಸಿತು. ಅಲ್ಲದೆ ತನ್ನ ಸ್ಪೋರ್ಟ್ಸ್ ಎಡಿಷನ್​ನಲ್ಲಿ ಕೊಹ್ಲಿಯನ್ನು ಜೋಕರ್ ರೀತಿಯಲ್ಲಿ ಚಿತ್ರಿಸಿದರು.

3 / 5
ಇಷ್ಟಕ್ಕೆ ನಿಲ್ಲಿಸಲಿಲ್ಲ. ಭಾನುವಾರದ ಎಡಿಷನ್​ಗಾಗಿ ದಿ ವೆಸ್ಟ್ ಆಸ್ಟ್ರೇಲಿಯನ್ ಪತ್ರಿಕೆಯು ನೀಡಿದ ಶೀರ್ಷಿಕೆಯು ಎಲ್ಲಾ ಎಲ್ಲೆಯನ್ನು ಮೀರಿದಂತಿದೆ. ಸ್ಪೋರ್ಟ್ ಮುಖಪುಟದಲ್ಲಿ ಸ್ಯಾಮ್ ಕೊನ್​ಸ್ಟಾಸ್ ಅವರ ಚಿತ್ರ ಹಂಚಿಕೊಂಡಿರುವ ದಿ ವೆಸ್ಟ್ ಆಸ್ಟ್ರೇಲಿಯನ್' ಪತ್ರಿಕೆಯು ಆ ಫೋಟೋಗೆ ವಿರಾಟ್, ನಾನು ನಿಮ್ಮ ತಂದೆ ಎಂಬ ಶೀರ್ಷಿಕೆ ನೀಡಿದೆ.

4 / 5
ಇದೀಗ ಆಸ್ಟ್ರೇಲಿಯಾ ಪತ್ರಿಕೆಯ ಈ ಹದ್ದು ಮೀರಿದ ವರ್ತನೆ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ದಿವಂಗತರಾಗಿರುವ ವಿರಾಟ್ ಕೊಹ್ಲಿಯ ತಂದೆಯನ್ನು ಈ ವಿಚಾರದಲ್ಲಿ ಎಳೆದು ತರುವ ಮೂಲಕ ತನ್ನ ನೀಚಬುದ್ದಿಯನ್ನು ತೋರಿಸಿದೆ. ಈ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ದಿ ವೆಸ್ಟ್ ಆಸ್ಟ್ರೇಲಿಯನ್ ಏನು ಸ್ಪಷ್ಟನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

5 / 5