- Kannada News Photo gallery Cricket photos Ind vs aus virat kohli only player to score 500 plus runs against australia in t20i records
IND vs AUS: ಆಸೀಸ್ ವಿರುದ್ಧ ಕೊಹ್ಲಿಯೇ ಕಿಂಗ್..! 2020 ರ ದಾಖಲೆ ಮುರಿಯುವ ತವಕದಲ್ಲಿ ವಿರಾಟ್
IND vs AUS: ಆಸ್ಟ್ರೇಲಿಯಾ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ 18 ಇನ್ನಿಂಗ್ಸ್‌ಗಳನ್ನು ಆಡಿದ್ದು, ಅದರಲ್ಲಿ ಅವರು ಒಟ್ಟು 7 ಅರ್ಧಶತಕಗಳನ್ನು ಬಾರಿಸಿದ್ದಾರೆ.
Updated on: Sep 18, 2022 | 7:18 AM

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ಅವಕಾಶ ಸಿಗುವುದು ಖಚಿತ. ಒಂದು ವೇಳೆ ಕೊಹ್ಲಿ ಈ ಮೂರು ಪಂದ್ಯಗಳಿಂದ ಕೇವಲ 98 ರನ್ ಗಳಿಸಿದರೆ ಟಿ20 ಮಾದರಿಯಲ್ಲಿ 11,000 ರನ್ ಗಳಿಸಿದ ದಾಖಲೆ ಬರೆಯಲಿದ್ದಾರೆ.

ವಿರಾಟ್ ಕೊಹ್ಲಿ ಏಷ್ಯಾಕಪ್ 2022 ರಲ್ಲಿ ಭರ್ಜರಿ ಫಾರ್ಮ್ಗೆ ಮರಳಿದ್ದಾರೆ. 3 ವರ್ಷಗಳಿಂದ ಕಾಯುತ್ತಿದ್ದ ಶತಕದ ಆಸೆಯನ್ನು ಪೂರೈಸಿಕೊಂಡ ಕೊಹ್ಲಿ, ಈ ಟೂರ್ನಿಯಲ್ಲಿ 2 ಅರ್ಧ ಶತಕ ಹಾಗೂ 1 ಶತಕ ಸಿಡಿಸಿದ್ದರು. ಇದೀಗ ಆಸ್ಟ್ರೇಲಿಯ ವಿರುದ್ಧ ತನ್ನ ಶಕ್ತಿ ಪ್ರದರ್ಶನಕ್ಕೆ ಕೊಹ್ಲಿ ಸಜ್ಜಾಗಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ವಿಶೇಷ ದಾಖಲೆಯನ್ನೂ ಮಾಡುವ ಹೊಸ್ತಿನಲಿದ್ದಾರೆ.

Virat Kohli is just three sixes away from joining Rohit in the list of players with 100 T20I sixes

ಆಸ್ಟ್ರೇಲಿಯಾ ವಿರುದ್ಧದ ಟಿ20ಯಲ್ಲಿ ಕೊಹ್ಲಿ 59.83 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದರೆ, ಅವರ ಸ್ಟ್ರೈಕ್ ರೇಟ್ 146.23 ಆಗಿದೆ.

IND vs PAK The Photos of India vs Pakistan Match in Asia Cup 2022 Super 4




