IND vs ENG: ಟೀಮ್ ಇಂಡಿಯಾ ಸೋಲಿಗೆ ಇದುವೇ ಕಾರಣ

Updated on: Jun 25, 2025 | 8:26 AM

India vs England: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ ನಲ್ಲಿ 471 ರನ್ ಕಲೆಹಾಕಿದರೆ, ಇಂಗ್ಲೆಂಡ್ 465 ರನ್ ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ ತಂಡವು 364 ರನ್ ಗಳಿಸಿ ಆಲೌಟ್ ಆಯಿತು. ಅದರಂತೆ 371 ರನ್ ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 82 ಓವರ್‌ಗಳಲ್ಲಿ 373 ರನ್ ಬಾರಿಸಿ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

1 / 6
India vs England 1st Test: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಅಗ್ರ ಕ್ರಮಾಂಕದ ಬ್ಯಾಟರ್​ಗಳ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಹೊರತಾಗಿಯೂ ಈ ಪಂದ್ಯದಲ್ಲಿ ಗೆಲುವು ಟೀಮ್ ಇಂಡಿಯಾಗೆ ದಕ್ಕಲಿಲ್ಲ. ಇದಕ್ಕೆ ಒಂದು ಕಾರಣ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯ.

2 / 6
ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್​ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇಲ್ಲಿ ಟೀಮ್ ಇಂಡಿಯಾದ ಟಾಪ್-5 ಬ್ಯಾಟರ್ ಗಳು ಎರಡು ಇನಿಂಗ್ಸ್​ಗಳ ಮೂಲಕ ಕಲೆಹಾಕಿದ ಒಟ್ಟು ಮೊತ್ತ  721 ರನ್​ಗಳು.

3 / 6
ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದವರು ಎರಡು ಇನಿಂಗ್ಸ್ ಗಳಿಂದ ಪೇರಿಸಿದ ಒಟ್ಟು ಮೊತ್ತ ಕೇವಲ 65 ರನ್ ಗಳು ಎಂದರೆ ನಂಬಲೇಬೇಕು. ಇಲ್ಲಿ ಬೌಲರ್‌ಗಳನ್ನು ಹೊರತುಪಡಿಸಿ ಕರುಣ್ ನಾಯರ್, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಸಂಪೂರ್ಣ ವಿಫಲರಾಗಿದ್ದು, ಟೀಮ್ ಇಂಡಿಯಾ ಪಾಲಿಗೆ ಮುಳುವಾಯಿತು.

4 / 6
ಇನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗಳ ವೈಫಲ್ಯದ ನಡುವೆಯೂ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 471 ರನ್ ಕಲೆಹಾಕಿತ್ತು. ಆದರೆ ಫೀಲ್ಡಿಂಗ್ ನಲ್ಲಿ 5 ಕ್ಯಾಚ್ ಗಳನ್ನು ಕೈಚೆಲ್ಲಿದ್ದರು. ಈ ಕಳಪೆ ಫೀಲ್ಡಿಂಗ್​ನ ಲಾಭ ಪಡೆದ ಇಂಗ್ಲೆಂಡ್ ಬ್ಯಾಟರ್​ಗಳು ಪ್ರಥಮ ಇನಿಂಗ್ಸ್ ನಲ್ಲಿ 465 ರನ್ ಪೇರಿಸಿದ್ದರು.

5 / 6
ಅದರಂತೆ ಮೊದಲ ಇನಿಂಗ್ಸ್​ನಲ್ಲಿ ಕೇವಲ 6 ರನ್ ಗಳ ಮುನ್ನಡೆ ಪಡೆದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ಕನಿಷ್ಠ 400+ ರನ್ ಕಲೆಹಾಕುವ ವಿಶ್ವಾಸದಲ್ಲಿತ್ತು. ಆದರೆ ಮತ್ತೆ ಕೈ ಕೊಟ್ಟ ಮಿಡಲ್ ಆರ್ಡರ್ ಬ್ಯಾಟರ್ ಗಳು ಟೀಮ್ ಇಂಡಿಯಾದ ಇನಿಂಗ್ಸ್ ಅನ್ನು 364 ರನ್ ಗಳಿಗೆ ಅಂತ್ಯಗೊಳಿಸಿದರು.

6 / 6
ಇತ್ತ ದ್ವಿತೀಯ ಇನಿಂಗ್ಸ್ ನಲ್ಲಿ 371 ರನ್​ಗಳ ಗುರಿ ಪಡೆದ ಇಂಗ್ಲೆಂಡ್ ಪರ ಬೆನ್ ಡಕೆಟ್ ಭರ್ಜರಿ 149 ರನ್ ಬಾರಿಸಿದರು. ಯಶಸ್ವಿ ಜೈಸ್ವಾಲ್ ಕೈ ಚೆಲ್ಲಿದ ಕ್ಯಾಚ್ ನ ಸಂಪೂರ್ಣ ಲಾಭ ಪಡೆದ ಡಕೆಟ್ ಬೃಹತ್ ಮೊತ್ತ ಪೇರಿಸಿದ್ದರು. ಅಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಫೀಲ್ಡರ್​ಗಳು ಒಟ್ಟು 6 ಕ್ಯಾಚ್ ಬಿಟ್ಟಿದ್ದು ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ಕೇವಲ 65 ರನ್ ಗಳಿಸಿದ್ದು ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು.

Published On - 8:25 am, Wed, 25 June 25