IND vs ENG: ಬೆನ್​ ಸ್ಟೋಕ್ಸ್ ಶತಕದ ಸಾಧನೆಗೆ ಇನ್ನೊಂದು ಹೆಜ್ಜೆ ದೂರ

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್‌ಗಳ ಸರಣಿಯ ಮೂರನೇ ಪಂದ್ಯ ಫೆಬ್ರವರಿ 15 ರಿಂದ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್​ ಟೆಸ್ಟ್ ಕ್ರಿಕೆಟ್​ನಲ್ಲಿ 100ನೇ ಪಂದ್ಯವನ್ನಾಡಿದ ದಾಖಲೆ ಬರೆಯಲಿದ್ದಾರೆ.

ಪೃಥ್ವಿಶಂಕರ
|

Updated on: Feb 12, 2024 | 5:30 PM

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್‌ಗಳ ಸರಣಿಯ ಮೂರನೇ ಪಂದ್ಯ ಫೆಬ್ರವರಿ 15 ರಿಂದ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್​ ಟೆಸ್ಟ್ ಕ್ರಿಕೆಟ್​ನಲ್ಲಿ 100ನೇ ಪಂದ್ಯವನ್ನಾಡಿದ ದಾಖಲೆ ಬರೆಯಲಿದ್ದಾರೆ.

1 / 6
ಈ ಮೂಲಕ ಸ್ಟೋಕ್ಸ್​ ಟೆಸ್ಟ್​ ಕ್ರಿಕೆಟ್​ನಲ್ಲಿ 100 ಕ್ಕೂ ಅಧಿಕ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ವಿರಾಟ್ ಕೊಹ್ಲಿಯಂತಹ ದಿಗ್ಗಜ ಆಟಗಾರರ ಪಟ್ಟಿಗೆ ಸೇರಲಿದ್ದಾರೆ.

2 / 6
ಇದುವರೆಗೆ ಟೆಸ್ಟ್​ನಲ್ಲಿ 99 ಪಂದ್ಯಗಳನ್ನಾಡಿರುವ 32ರ ಹರೆಯದ ಸ್ಟೋಕ್ಸ್​ಗೆ ಫೆಬ್ರವರಿ 15ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಅವರ ವೃತ್ತಿಜೀವನದ 100ನೇ ಟೆಸ್ಟ್ ಆಗಲಿದೆ. ಇದು ಸಾಧ್ಯವಾದರೆ ಸ್ಟೋಕ್ಸ್​, ಕ್ರಿಕೆಟ್ ಇತಿಹಾಸದಲ್ಲಿ 100 ಟೆಸ್ಟ್ ಪಂದ್ಯಗಳನ್ನು ಆಡಿದ 74 ನೇ ಕ್ರಿಕೆಟಿಗ ಹಾಗೂ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ 16ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

3 / 6
ಇನ್ನು ಟೆಸ್ಟ್​ ಕ್ರಿಕೆಟ್​ನಲ್ಲಿ ಸ್ಟೋಕ್ಸ್ ಪ್ರದರ್ಶನವನ್ನು ನೋಡುವುದಾದರೆ.. 2013 ರಲ್ಲಿ ರೆಡ್ ಬಾಲ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಸ್ಟೋಕ್ಸ್, ಆಡಿರುವ99 ಟೆಸ್ಟ್ ಪಂದ್ಯಗಳಲ್ಲಿ 36.3 ರ ಸರಾಸರಿಯಲ್ಲಿ 6251 ರನ್ ಗಳಿಸಿದ್ದಾರೆ. ಇದರಲ್ಲಿ 13 ಶತಕ ಮತ್ತು 31 ಅರ್ಧ ಶತಕಗಳು ಸೇರಿವೆ.

4 / 6
ಬ್ಯಾಟಿಂಗ್ ಜೊತೆಗೆ ಬೌಲಿಂಗ್​ನಲ್ಲೂ ಮ್ಯಾಜಿಕ್ ಮಾಡಿರುವ ಸ್ಟೋಕ್ಸ್, 32.07 ಸರಾಸರಿಯಲ್ಲಿ 197 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಂದು ವೇಳೆ ರಾಜ್‌ಕೋಟ್‌ ಟೆಸ್ಟ್​ನಲ್ಲಿ ಸ್ಟೋಕ್ಸ್ ಬೌಲಿಂಗ್​ನಲ್ಲಿ ಮೂರು ವಿಕೆಟ್ ಪಡೆದರೆ 200 ವಿಕೆಟ್‌ಗಳನ್ನು ಪೂರೈಸಲಿದ್ದಾರೆ. ಈ ಮೂಲಕ ಇಂಗ್ಲೆಂಡ್ ಪರ 200 ಟೆಸ್ಟ್ ವಿಕೆಟ್ ಪಡೆದ 16 ನೇ ಬೌಲರ್‌ ಎನಿಸಿಕೊಳ್ಳಲಿದ್ದಾರೆ.

5 / 6
ಟೆಸ್ಟ್​ ಜೊತೆಗೆ ಉಳಿದೆರಡು ಮಾದರಿಗಳಲ್ಲೂ ಇಂಗ್ಲೆಂಡ್ ಪರ ಆಲ್‌ರೌಂಡರ್ ಪ್ರದರ್ಶನ ನೀಡಿರುವ ಸ್ಟೋಕ್ಸ್, 114 ಏಕದಿನ ಪಂದ್ಯ ಮತ್ತು 43 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ಸ್ಟೋಕ್ಸ್, ಇಂಗ್ಲೆಂಡ್ ಗೆದ್ದ 2019 ರ ಏಕದಿನ ವಿಶ್ವಕಪ್ ಮತ್ತು 2022 ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದರು.

6 / 6
Follow us