ಈ ಲೆಕ್ಕಾಚಾರದ ಪ್ರಕಾರ ಭಾರತ ಗೆಲ್ಲೋದು ಗ್ಯಾರೆಂಟಿ: ಆ ಲೆಕ್ಕಾಚಾರದ ಪ್ರಕಾರ ಇಂಗ್ಲೆಂಡ್ಗೆ ಗೆಲುವು ಖಚಿತ
India vs England: ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯವು ಐದನೇ ದಿನಕ್ಕೆ ಕಾಲಿಟ್ಟಿದೆ. ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ತಂಡವು 350 ರನ್ಗಳಿಸಿದರೆ ಆಂಗ್ಲರು ಪಂದ್ಯ ಗೆಲ್ಲಲಿದ್ದಾರೆ. ಅದರೊಳಗೆ ಟೀಮ್ ಇಂಡಿಯಾ 10 ವಿಕೆಟ್ ಕಬಳಿಸಿದರೆ ಗೆಲುವನ್ನು ತನ್ನದಾಗಿಸಿಕೊಳ್ಳಬಹುದು. ಇವರೆಡರ ಹೊರತಾಗಿ ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಲಿದೆಯಾ?
ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಕುತೂಹಲಘಟ್ಟದತ್ತ ಬಂದು ನಿಂತಿದೆ. ಅದರಂತೆ ಇಂದು (ಜೂ.24) ನಡೆಯಲಿರುವ ಕೊನೆಯ ದಿನದಾಟದಲ್ಲಿ ಫಲಿತಾಂಶ ನಿರ್ಧಾರವಾಗಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 471 ರನ್ ಕಲೆಹಾಕಿದರೆ, ಇಂಗ್ಲೆಂಡ್ 465 ರನ್ಗಳಿಸಿತು.
1 / 5
ಇನ್ನು 6 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 364 ರನ್ಗಳಿಸಿ ಆಲೌಟ್ ಆಗಿದೆ. ಅದರಂತೆ ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲ 21 ರನ್ಗಳಿಸಿದೆ. ಇನ್ನು ಪಂದ್ಯ ಗೆಲ್ಲಬೇಕಿದ್ದರೆ ಕೊನೆಯ ದಿನದಾಟದಲ್ಲಿ ಬರೋಬ್ಬರಿ 350 ರನ್ಗಳಿಸಬೇಕು.
2 / 5
ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ತಂಡವು 350 ರನ್ಗಳನ್ನು ಚೇಸ್ ಮಾಡಲಿದೆಯಾ ಎಂದು ಕೇಳಿದ್ರೆ ಉತ್ತರ ಇಲ್ಲದಿಲ್ಲ. ಏಕೆಂದರೆ ಇದಕ್ಕೂ ಮುನ್ನ ಬೆನ್ ಸ್ಟೋಕ್ಸ್ ಮುಂದಾಳತ್ವದ ಆಂಗ್ಲ ಪಡೆ ನಾಲ್ಕನೇ ಇನಿಂಗ್ಸ್ನಲ್ಲಿ 378 ರನ್ಗಳನ್ನು ಚೇಸ್ ಮಾಡಿ ಗೆದ್ದಿದೆ. ಅದು ಕೂಡ ಟೀಮ್ ಇಂಡಿಯಾ ವಿರುದ್ಧ ಎಂಬುದು ವಿಶೇಷ. 2022 ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ 378 ರನ್ಗಳನ್ನು ಇಂಗ್ಲೆಂಡ್ 76.4 ಓವರ್ಗಳಲ್ಲಿ ಚೇಸ್ ಮಾಡಿ ಐತಿಹಾಸಿಕ ಗೆಲುವು ದಾಖಲಿಸಿತ್ತು. ಇದೇ ಲೆಕ್ಕಾಚಾರದೊಂದಿಗೆ ಇಂಗ್ಲೆಂಡ್ ಮತ್ತೆ ಕಣಕ್ಕಿಳಿದರೆ ಗೆಲ್ಲೋದು ಖಚಿತ.
3 / 5
ಆದರೆ ಇತ್ತ ಟೀಮ್ ಇಂಡಿಯಾ 350+ ರನ್ಗಳ ಗುರಿ ನೀಡಿ ಸೋತಿರುವುದು ಒಮ್ಮೆ ಮಾತ್ರ ಎಂಬುದು ಸಹ ಇಲ್ಲಿ ಉಲ್ಲೇಖಾರ್ಹ. ಭಾರತ ತಂಡವು ಈವರೆಗೆ 59 ಟೆಸ್ಟ್ ಪಂದ್ಯಗಳಲ್ಲಿ ಕೊನೆಯ ಇನಿಂಗ್ಸ್ನಲ್ಲಿ 350+ ರನ್ಗಳ ಟಾರ್ಗೆಟ್ ನೀಡಿದೆ. ಈ ವೇಳೆ 42 ಬಾರಿ ಟೀಮ್ ಇಂಡಿಯಾ ಗೆದ್ದಿದೆ. ಇನ್ನು 16 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ. ಇನ್ನು ಸೋತಿರುವುದು ಕೇವಲ ಒಂದು ಬಾರಿ ಮಾತ್ರ. ಅಂದರೆ ಭಾರತ ತಂಡವು ಕೊನೆಯ ಇನಿಂಗ್ಸ್ನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಇತಿಹಾಸ ಹೊಂದಿದೆ. ಇದೇ ಲೆಕ್ಕಾಚಾರದೊಂದಿಗೆ ಲೀಡ್ಸ್ನಲ್ಲಿ ಕಣಕ್ಕಿಳಿದರೆ ಟೀಮ್ ಇಂಡಿಯಾ ಗೆಲ್ಲೋದು ಗ್ಯಾರೆಂಟಿ.
4 / 5
ಆದರೆ ಈ ಎರಡು ಲೆಕ್ಕಾಚಾರಗಳ ನಡುವಿರುವ ಟ್ವಿಸ್ಟ್ ಎಂದರೆ, ಭಾರತ ತಂಡವು 350+ ಸ್ಕೋರ್ಗಳ ಟಾರ್ಗೆಟ್ ನೀಡಿ ಸೋತಿರುವುದು ಇಂಗ್ಲೆಂಡ್ ವಿರುದ್ಧ ಮಾತ್ರ ಎಂಬುದು. ಅಂದರೆ 2022 ರಲ್ಲಿ ಇಂಗ್ಲೆಂಡ್ 378 ರನ್ಗಳನ್ನು ಚೇಸ್ ಮಾಡಿರುವುದು ಭಾರತದ ವಿರುದ್ಧ. ಇದಾಗ್ಯೂ ಲೀಡ್ಸ್ನ ಹೆಡಿಂಗ್ಲೆಯಲ್ಲಿ ಮೈದಾನದಲ್ಲಿ ಇಂಗ್ಲೆಂಡ್ ತಂಡವು ಒಮ್ಮೆಯೂ 370+ ರನ್ಗಳನ್ನು ಚೇಸ್ ಮಾಡಿಲ್ಲ. ಹೀಗಾಗಿ ಇಂದು ನಡೆಯಲಿರುವ ಕೊನೆಯ ದಿನದಾಟದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದ. ಈ ಪೈಪೋಟಿಯಲ್ಲಿ ಗೆದ್ದು ಬೀಗುವವರು ಯಾರು ಎಂಬುದನ್ನು ಕಾದು ನೋಡೋಣ.