AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಕೆಎಲ್ ರಾಹುಲ್ ಔಟ್, ದೇವದತ್ ಪಡಿಕ್ಕಲ್ ಇನ್..! ಬಿಸಿಸಿಐ ಆಧಿಕೃತ ಮಾಹಿತಿ

IND vs ENG: ಹೈದರಾಬಾದ್‌ ಟೆಸ್ಟ್​ನಲ್ಲಿ ಇಂಜುರಿಗೊಂಡು ಟೀಂ ಇಂಡಿಯಾದಿಂದ ಹೊರಗುಳಿದಿರುವ ಕನ್ನಡಿಗ ಕೆಎಲ್ ರಾಹುಲ್, ಇದೀಗ ಮೂರನೇ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಅಲ್ಲದೆ ಅವರ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್​ರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಖಚಿತಪಡಿಸಿದೆ.

ಪೃಥ್ವಿಶಂಕರ
|

Updated on:Feb 12, 2024 | 9:00 PM

Share
ಭಾರತ ಹಾಗೂ ಇಂಗ್ಲೆಂಡ್ ನಡುವೆ ರಾಜ್​ಕೋಟ್​ನಲ್ಲಿ ನಡೆಯಲ್ಲಿರುವ ಮೂರನೇ ಟೆಸ್ಟ್​ ಪಂದ್ಯದಿಂದ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ರಾಹುಲ್ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಧೃಡಪಡಿಸಿದೆ.

1 / 8
ರಾಹುಲ್ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಇಂಜುರಿಯಿಂದಾಗಿ ರಾಹುಲ್ ಮೂರನೇ ಟೆಸ್ಟ್​ ಪಂದ್ಯದಿಂದ ಹೊರಗುಳಿಯುತ್ತಿದ್ದು, ಅವರ ಬದಲಿಯಾಗಿ ದೇವದತ್ ಪಡಿಕ್ಕಲ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದಿದೆ.

2 / 8
ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದ ವೇಳೆ ಇಂಜುರಿಗೊಳಗಾಗಿದ್ದ ಕೆಎಲ್​ ರಾಹುಲ್, ರಿಹ್ಯಾಬ್​ಗಾಗಿ ಬೆಂಗಳೂರಿನ ಎನ್​ಸಿಎ ಸೇರಿಕೊಂಡಿದ್ದರು. ಇಷ್ಟು ದಿನ ಎನ್​ಸಿಎನಲ್ಲಿ ಚೇತರಿಸಿಕೊಳ್ಳುತ್ತಿದ್ದ ರಾಹುಲ್, ನಿನ್ನೆಯಿಂದ ಅಭ್ಯಾಸವನ್ನೂ ಆರಂಭಿಸಿದ್ದರು.

3 / 8
ಈ ಹಿಂದೆ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಪ್ರಕಟ ಮಾಡಿದ್ದ ಬಿಸಿಸಿಐ, ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾರನ್ನು ತಂಡಕ್ಕೆ ಆಯ್ಕೆ ಮಾಡಿತ್ತು. ಆದರೆ ವೈದ್ಯಕೀಯ ತಂಡದಿಂದ ರಾಹುಲ್ ಫಿಟ್ ಎಂಬ ವರದಿ ಬಂದರೆ ಮಾತ್ರ ಅವರನ್ನು ತಂಡದಲ್ಲಿ ಆಡಿಸಲಾಗುವುದು ಎಂದಿತ್ತು.

4 / 8
ಇದೀಗ ರಾಹುಲ್ ಮೂರನೇ ಟೆಸ್ಟ್​ನಿಂದ ಹೊರಗುಳಿದಿದ್ದಾರೆ. ಅಂದರೆ ರಾಹುಲ್ ಇನ್ನು ಸಂಪೂರ್ಣ ಚೇತರಿಸಿಕೊಂಡಿಲ್ಲ ಎಂಬರ್ಥವಾಗಿದೆ. ಹೀಗಾಗಿ ರಾಹುಲ್​ ಎನ್​ಸಿಎನಲ್ಲೇ ಉಳಿಯುವ ಸಾಧ್ಯತೆಗಳಿವೆ. 4ನೇ ಟೆಸ್ಟ್​ ವೇಳೆಗೆ ರಾಹುಲ್ ಫಿಟ್ ಆದರೆ ಆಗ ತಂಡವನ್ನು ಕೂಡಿಕೊಳ್ಳಬಹುದಾಗಿದೆ.

5 / 8
ಇನ್ನು ರಾಹುಲ್ ಬದಲಿಯಾಗಿ ಟೀಂ ಇಂಡಿಯಾವನ್ನು ಸೇರಿಕೊಂಡಿರುವ ದೇವದತ್ ಪಡಿಕಲ್ ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಸೀಸನ್​ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾದ ಕರೆ ಸ್ವೀಕರಿಸಿರುವ ಪಡಿಕ್ಕಲ್ ಕರ್ನಾಟಕ ತಂಡವನ್ನು ಇಷ್ಟರಲ್ಲೇ ತೊರೆಯಲ್ಲಿದ್ದಾರೆ.

6 / 8
ಕೆಎಲ್ ರಾಹುಲ್ ಟೀಂ ಇಂಡಿಯಾದಿಂದ ಹೊರಗುಳಿಯವುದರೊಂದಿಗೆ ರವೀಂದ್ರ ಜಡೇಜಾ ತಂಡದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ವಾಸ್ತವವಾಗಿ ಜಡೇಜಾ ಕೂಡ ರಾಹುಲ್​ರಂತೆ ಇಂಜುರಿಗೆ ತುತ್ತಾಗಿದ್ದರು. ಆದರೀಗ ಚೇತರಿಸಿಕೊಂಡಿರುವ ಜಡೇಜಾ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುವುದನ್ನು ಕಾಣಬಹುದಾಗಿದೆ.

7 / 8
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

8 / 8

Published On - 8:44 pm, Mon, 12 February 24

ದರ್ಶನ್ ಈ ಸ್ಥಿತಿಗೆ ಅವರ ಅಭಿಮಾನಿಗಳೇ ಕಾರಣ: ನಿರ್ಮಾಪಕ ಮಹದೇವ್

ಬ್ಯಾಟ್ ಬೀಸಾಡಿ ಸಹ ಆಟಗಾರನೊಂದಿಗೆ ಜಗಳಕ್ಕಿಳಿದ ಪಾಕ್ ಕ್ರಿಕೆಟಿಗ

ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ

ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು

ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್

ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ

ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು

ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ

ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!

ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ