AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs New Zealand: ಭಾರತದ ಗೆಲುವು ಕಸಿದ ಭಾರತೀಯ ಮೂಲದವರು..!

Ajaz Patel - Rachin Ravindra: ಅಂತಿಮವಾಗಿ 91 ಎಸೆತಗಳನ್ನು ಎದುರಿಸಿದ ರಚಿನ್ ರವೀಂದ್ರ ಅಜೇಯ 18 ರನ್​ಗಳಿಸಿದರೆ, ಏಜಾಝ್ ಪಟೇಲ್ 23 ಎಸೆತಗಳಲ್ಲಿ ಕೇವಲ 2 ರನ್​ಗಳಿಸಿ ಅಜೇಯರಾಗಿ ಉಳಿದರು.

TV9 Web
| Edited By: |

Updated on: Nov 29, 2021 | 5:28 PM

Share
 ಭಾರತ-ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸುವಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಗಿದೆ.  ಟೀಮ್ ಇಂಡಿಯಾ ನೀಡಿದ 284 ರನ್​ಗಳ ಟಾರ್ಗೆಟ್ ಬೆನ್ನತ್ತಿದ ನ್ಯೂಜಿಲೆಂಡ್ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿಕೊಂಡಿದೆ. 86ನೇ ಓವರ್​ ಮುಕ್ತಾಯದ ವೇಳೆಗೆ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 147 ರನ್​ಗಳಿಸಿತ್ತು. ಈ ವೇಳೆ ಗೆಲುವು ಭಾರತದ್ದೇ ಎಂದು ಎಲ್ಲರೂ ಭಾವಿಸಿದ್ದರು.

1 / 6
 ಆದರೆ 8ನೇ ಕ್ರಮಾಂಕದಲ್ಲಿ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತೀಯ ಮೂಲದ ನ್ಯೂಜಿಲೆಂಡ್​ ಕ್ರಿಕೆಟರ್ ಟೀಮ್ ಇಂಡಿಯಾ ಬೌಲರುಗಳ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು. ಭಾರತೀಯ ಅನುಭವಿ ಸ್ಪಿನ್ನರ್​ಗಳ ಮುಂದೆ 22 ವರ್ಷದ ರಚಿನ್ ತಡೆಗೋಡೆಯಾಗಿ ನಿಂತು ಏಕಾಂಗಿಯಾಗಿ ಹೋರಾಟ ಮುಂದುವರೆಸಿದರು. ಈ ಹಂತದಲ್ಲಿ 90ನೇ ಓವರ್​ನಲ್ಲಿ ಟಿಮ್ ಸೌಥಿಯನ್ನು ಜಡೇಜಾ ಔಟ್ ಮಾಡಿದರು. ಈ ವೇಳೆ ಮತ್ತೊಮ್ಮೆ ಭಾರತದ ಗೆಲುವಿನ ಆಸೆ ಚಿಗುರಿತು.

2 / 6
ಆದರೆ 10ನೇ ವಿಕೆಟ್​ಗೆ ರಚಿನ್ ಜೊತೆಗೂಡಿದ ಮತ್ತೋರ್ವ ಭಾರತೀಯ ಮೂಲದ ನ್ಯೂಜಿಲೆಂಡ್ ಕ್ರಿಕೆಟಿಗ ಅಜಾಝ್ ಪಟೇಲ್ ಕೂಡ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ಮಾಡಿದರು. ಅದರಂತೆ ಇಬ್ಬರೂ ಬಂಡೆಯಂತೆ ಕ್ರೀಸ್ ಕಚ್ಚಿ ನಿಂತರು. ಅಂತಿಮ 9 ಓವರ್​ಗಳನ್ನು ಜೊತೆಯಾಗಿ ಎದುರಿಸಿದ ರಚಿನ್ ಹಾಗೂ ಏಜಾಝ್ ಕಲೆಹಾಕಿದ್ದು ಕೇವಲ 10 ರನ್​ ಮಾತ್ರ. ಅಂದರೆ ಇಬ್ಬರೂ ಟೆಸ್ಟ್ ಕ್ರಿಕೆಟ್ ಹೇಗೆ ಆಡಬೇಕೆಂದು ಇಡೀ ವಿಶ್ವಕ್ಕೆ ತೋರಿಸಿಕೊಟ್ಟರು.

3 / 6
 ಅಂತಿಮವಾಗಿ 91 ಎಸೆತಗಳನ್ನು ಎದುರಿಸಿದ ರಚಿನ್ ರವೀಂದ್ರ ಅಜೇಯ 18 ರನ್​ಗಳಿಸಿದರೆ, ಏಜಾಝ್ ಪಟೇಲ್ 23 ಎಸೆತಗಳಲ್ಲಿ ಕೇವಲ 2 ರನ್​ಗಳಿಸಿ ಅಜೇಯರಾಗಿ ಉಳಿದರು. ಕೊನೆಯ 8 ಓವರ್​ಗಳಲ್ಲಿ ಅತ್ಯುತ್ತಮ ರಕ್ಷಣಾತ್ಮಕ ಆಟವಾಡಿದ ಭಾರತೀಯ ಮೂಲದ ಈ ಜೋಡಿ ಅಂತಿಮವಾಗಿ 9 ವಿಕೆಟ್​ ನಷ್ಟಕ್ಕೆ 165 ರನ್​ಗಳಿಸುವ ಮೂಲಕ ಟೀಮ್ ಇಂಡಿಯಾ ಪಾಲಿನ ಗೆಲುವನ್ನು ಕಸಿದುಕೊಂಡರು.

4 / 6
ಅಂದಹಾಗೆ ರಚಿನ್ ರವೀಂದ್ರ ಬೆಂಗಳೂರು ಮೂಲದ  ರವೀಂದ್ರ ಕೃಷ್ಣಮೂರ್ತಿ ಹಾಗೂ​ ​ದೀಪಾ ಕೃಷ್ಣಮೂರ್ತಿ ಅವರ ಮಗ. ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ರವೀಂದ್ರ ಕೃಷ್ಣಮೂರ್ತಿ ಅವರು 1990ರಲ್ಲಿ ನ್ಯೂಜಿಲ್ಯಾಂಡ್​ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ಇದೀಗ ರಚಿನ್ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

5 / 6
ಇನ್ನು ಮುಂಬೈ ಮೂಲದ ಏಜಾಝ್ ಪಟೇಲ್ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದು ನ್ಯೂಜಿಲೆಂಡ್ ತಂಡದಲ್ಲಿ ಎಂಬುದು ವಿಶೇಷ. ಇದೀಗ ಇಬ್ಬರು ಭಾರತೀಯ ಮೂಲದ ಕ್ರಿಕೆಟಿಗರೇ ಕ್ರಿಕೆಟ್ ಕ್ರಿಕೆಟ್​ ರೋಚಕ ಹೋರಾಟದಲ್ಲಿ ಟೀಮ್ ಇಂಡಿಯಾದ ಗೆಲುವನ್ನು ಕಸಿದುಕೊಂಡಿರುವುದು ವಿಶೇಷ.

6 / 6
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ

ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ

ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ

ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!

ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌

ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?

ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ