ಅಂದರೆ 1955 ರಿಂದ 2023 ರವರೆಗೆ ಕೇವಲ 2 ಪಂದ್ಯಗಳನ್ನು ಗೆದ್ದಿದ್ದ ನ್ಯೂಝಿಲೆಂಡ್ ತಂಡವು, ಕೇವಲ 18 ದಿನಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಟೀಮ್ ಇಂಡಿಯಾ ವಿರುದ್ಧ ಭಾರತದಲ್ಲಿ ಪಾರುಪತ್ಯ ಮೆರೆದಿದೆ. ಈ ಮೂಲಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕೆಂಬ 68 ವರ್ಷಗಳ ಹಳೆಯ ಕನಸನ್ನು ಸಹ ಈಡೇರಿಸಿಕೊಂಡಿದೆ. ಅದು ಕೂಡ ಕ್ಲೀನ್ ಸ್ವೀಪ್ ಸರಣಿ ಜಯದೊಂದಿಗೆ ಎಂಬುದು ವಿಶೇಷ.