- Kannada News Photo gallery Cricket photos IND vs NZ Ravindra Jadeja became fifth highest wicket taker bowler of India
IND vs NZ: 5 ವಿಕೆಟ್ಗಳ ಗೊಂಚಲು ಪಡೆದ ಜಡೇಜಾ; ಮೂವರು ದಿಗ್ಗಜರ ದಾಖಲೆ ಉಡೀಸ್
Ravindra Jadeja: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳ ಗೊಂಚಲು ಪಡೆದ ರವೀಂದ್ರ ಜಡೇಜಾ, ಟೀಂ ಇಂಡಿಯಾದ ಮೂವರು ದಿಗ್ಗಜ ಬೌಲರ್ಗಳ ದಾಖಲೆ ಮುರಿದಿದ್ದಾರೆ. ಇದೀಗ ಜಡೇಜಾ ಟೆಸ್ಟ್ನಲ್ಲಿ ಅಧಿಕ ವಿಕೆಟ್ ಪಡೆದಿರುವ ಭಾರತದ ಐದನೇ ಬೌಲರ್ ಎನಿಸಿಕೊಂಡಿದ್ದಾರೆ.
Updated on:Nov 01, 2024 | 4:08 PM

ಭಾರತ ಹಾಗೂ ನ್ಯೂಜಿಲೆಂಡ್ ನಡವೆ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ 235 ರನ್ಗಳಿಗೆ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಕಿವೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ಟೀಂ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜಾ 5 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.

ರವೀಂದ್ರ ಜಡೇಜಾ ಖಾತೆಗೆ ಜಾರಿದ ಬಿದ್ದ ವಿಕೆಟ್ಗಳ ಪೈಕಿ, ವಿಲ್ ಯಂಗ್, ಟಾಮ್ ಬ್ಲಂಡೆಲ್, ಗ್ಲೆನ್ ಫಿಲಿಪ್ಸ್, ಇಶ್ ಸೋಧಿ ಹಾಗೂ ಮ್ಯಾಟ್ ಹೆನ್ರಿ ಸೇರಿದ್ದಾರೆ. ದಿನದಾಟದ ಮೊದಲೆರಡು ಸೆಷನ್ಗಳಲ್ಲಿ ಮೂರು ವಿಕೆಟ್ ಉರುಳಿಸಿದ್ದ ಜಡೇಜಾ, ಚಹಾ ವಿರಾಮದ ಮೊದಲು ಗ್ಲೆನ್ ಫಿಲಿಪ್ಸ್ ಅವರ ವಿಕೆಟ್ ಉರುಳಿಸಿದರು. ಈ ಮೂಲಕ ಜಡೇಜಾ ವಿಶಿಷ್ಟ ದಾಖಲೆಯನ್ನು ಮಾಡಿದರು.

ಗ್ಲೆನ್ ಫಿಲಿಪ್ಸ್ ಅವರ ವಿಕೆಟ್ ಉರುಳಿಸುವ ಮೂಲಕ ರವೀಂದ್ರ ಜಡೇಜಾ, ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್ಗಳ ಪೈಕಿಯಲ್ಲಿ ಇದೀಗ ಐದನೇ ಸ್ಥಾನಕ್ಕೆ ಬಂದಿದ್ದಾರೆ. ಈ ಮೂಲಕ ಜಡೇಜಾ, ಜಹೀರ್ ಖಾನ್ ಮತ್ತು ಇಶಾಂತ್ ಶರ್ಮಾ ಅವರನ್ನೂ ಸಹ ಹಿಂದಿಕ್ಕಿದ್ದಾರೆ.

ರವೀಂದ್ರ ಜಡೇಜಾ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ 312 ವಿಕೆಟ್‌ಗಳನ್ನು ಉರುಳಿಸಿದ್ದು, ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ಗಳ ಪಟ್ಟಿಯಲ್ಲಿ ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮಾರನ್ನು ಹಿಂದಿಕ್ಕಿದ್ದಾರೆ. ಜಹೀರ್ ಮತ್ತು ಇಶಾಂತ್ ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ ತಲಾ 311 ವಿಕೆಟ್‌ಗಳನ್ನು ಪಡೆದಿದ್ದಾರೆ.

ಹಾಗೆಯೇ ವಾಂಖೆಡೆ ಮೈದಾನದಲ್ಲಿ 5 ವಿಕೆಟ್ಗಳ ಗೊಂಚಲು ಪಡೆದ ರವೀಂದ್ರ ಜಡೇಜಾ ಈ ಮೂಲಕ ಭಾರತದಲ್ಲಿ ಆಡಿದ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಬಾರಿ ಐದು ವಿಕೆಟ್‌ಗಳನ್ನು ಪಡೆದ ಬೌಲರ್ಗಳ ಪಟ್ಟಿಯಲ್ಲಿ ಕಪಿಲ್ ದೇವ್‌ರನ್ನು ಹಿಂದಿಕ್ಕಿದ್ದಾರೆ. ಕಪಿಲ್ ಭಾರತದಲ್ಲಿ 11 ಬಾರಿ ಐದು ವಿಕೆಟ್ ಪಡೆದಿದ್ದರೆ, ಜಡೇಜಾ 12 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
Published On - 4:08 pm, Fri, 1 November 24




