ಒಂದೆಡೆ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಕದನವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದರೆ, ಮತ್ತೊಂದೆಡೆ ಉಭಯ ತಂಡಗಳ ಆಟಗಾರರು ನಾನಾ ಕಾರಣ ಸುದ್ದಿಯಲ್ಲಿದ್ದಾರೆ.
ಕೆಲ ದಿನಗಳ ಹಿಂದೆ ವಿರಾಟ್ ಕೊಹ್ಲಿ ಜೊತೆ ಪಾಕ್ ಆಟಗಾರರು ನೆಟ್ನಲ್ಲಿ ಅಭ್ಯಾಸ ನಡೆಸಿ ಸುದ್ದಿಯಾದರೆ, ಇದೀಗ ಪಾಕಿಸ್ತಾನ್ ತಂಡದಲ್ಲಿರುವ ರೋಹಿತ್ ಶರ್ಮಾ ತದ್ರೂಪಿ ಸಖತ್ ಸುದ್ದಿಯಾಗುತ್ತಿದ್ದಾರೆ.
ಹೀಗೆ ರೋಹಿತ್ ಶರ್ಮಾ ಅವರನ್ನು ಹೋಲುತ್ತಿರುವ ವ್ಯಕ್ತಿಯ ಹೆಸರು ಇಬ್ರಾಹಿಂ ಬಡೀಸ್. ಇವರು ಪಾಕಿಸ್ತಾನ್ ತಂಡದ ಮ್ಯಾನೇಜರ್. ಇದೀಗ ಇಬ್ರಾಹಿಂ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದಕ್ಕೆ ಮುಖ್ಯ ಕಾರಣ ಇಬ್ರಾಹಿಂ ತುಸು ರೋಹಿತ್ ಶರ್ಮಾ ಅವರನ್ನು ಹೋಲುತ್ತಿರುವುದು. ಇದೇ ಕಾರಣದಿಂದಾಗಿ ಇದೀಗ ಪಾಕ್ ಅಭಿಮಾನಿಗಳು ನಮ್ಮಲ್ಲೂ ರೋಹಿತ್ ಶರ್ಮಾ ಇದ್ದಾರೆ ಎಂದು ಫೋಟೋವನ್ನು ಶೇರ್ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಪಾಕಿಸ್ತಾನ್ ಜೆರ್ಸಿಯಲ್ಲಿರುವ ರೋಹಿತ್ ಶರ್ಮಾ ಎಂದು ಅನೇಕರು ಇಬ್ರಾಹಿಂ ಬಡೀಸ್ ಅವರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.
ಒಟ್ಟಿನಲ್ಲಿ ಮುಖಭಾವದಲ್ಲಿ ತುಸು ರೋಹಿತ್ ಶರ್ಮಾ ಅವರಂತೆ ಕಾಣಿಸುವ ಇಬ್ರಾಹಿಂ ಬಡೀಸ್ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿರುವುದಂತು ನಿಜ.
ಇನ್ನು ಭಾರತ-ಪಾಕಿಸ್ತಾನ್ ಅಕ್ಟೋಬರ್ 23 ರಂದು ಮೆಲ್ಬೋರ್ನ್ನ ಎಂಸಿಜಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯದ ಮೂಲಕ ಉಭಯ ತಂಡಗಳು ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿರುವುದು ವಿಶೇಷ.
Published On - 10:58 pm, Thu, 20 October 22