ಈ ವರ್ಷ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಇಶಾಂತ್, 2021ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಸದ್ಯ ಸಿರಾಜ್, ಅರ್ಷದೀಪ್, ನವದೀಪ್, ಉಮ್ರಾನ್ ಸೇರಿದಂತೆ ಹಲವು ವೇಗದ ಬೌಲರ್‌ಗಳು ತಂಡದಲ್ಲಿ ಸ್ಥಾನ ಪಡೆಯುವ ರೇಸ್‌ನಲ್ಲಿದ್ದಾರೆ. ಹೀಗಾಗಿ ಇಶಾಂತ್ ತಂಡ ಸೇರುವ ಸಾಧ್ಯತೆ ತೀರಾ ಕಡಿಮೆ.