- Kannada News Photo gallery Cricket photos IND vs WI Kuldeep Yadav took three wickets in the third T20I against West Indies creates history for India
IND vs WI: ಚಾಹಲ್, ಬುಮ್ರಾ ದಾಖಲೆ ಉಡೀಸ್; 3 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ ಕುಲ್ದೀಪ್ ಯಾದವ್..!
Kuldeep Yadav: ಮಂಗಳವಾರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ ಟೀಂ ಇಂಡಿಯಾ ಇತಿಹಾಸವನ್ನು ಸೃಷ್ಟಿಸಿದ್ದಾರೆ.
Updated on: Aug 09, 2023 | 7:15 AM

ಮಂಗಳವಾರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಚೈನಾಮನ್ ಖ್ಯಾತಿಯ ಕುಲ್ದೀಪ್ ಯಾದವ್ ಟೀಂ ಇಂಡಿಯಾ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕುಲ್ದೀಪ್ ಯಾದವ್ ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಅತಿ ವೇಗವಾಗಿ 50 ಕ್ಕೂ ಅಧಿಕ ಟಿ20 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

ಈ ಪಂದ್ಯದ 15ನೇ ಓವರ್ನಲ್ಲಿ ಬ್ರ್ಯಾಂಡನ್ ಕಿಂಗ್ ವಿಕೆಟ್ ಪಡೆಯುವ ಮೂಲಕ ಕುಲ್ದೀಪ್ ಈ ಸಾಧನೆ ಮಾಡಿದರು. ಆ ಓವರ್ನಲ್ಲಿ ಎರಡು ವಿಕೆಟ್ಗಳನ್ನು ಕಬಳಿಸಿದ ಕುಲ್ದೀಪ್, ಅಪಾಯಕಾರಿ ನಿಕೋಲಸ್ ಪೂರನ್ ಅವರನ್ನು ಬಲಿ ಪಡೆದರು.

ಇದರೊಂದಿಗೆ ಇನ್ನೊಂದು ದಾಖಲೆ ಬರೆದ ಕುಲ್ದೀಪ್, ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ಗಳ ಪೈಕಿ ಇದೀಗ ಮೊದಲ ಸ್ಥಾನಕ್ಕೇರಿದ್ದಾರೆ. ಪ್ರಸ್ತುತ ಕುಲ್ದೀಪ್ 15 ವಿಕೆಟ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಕುಲ್ದೀಪ್ ತನ್ನ 30 ನೇ ಟಿ20 ಪಂದ್ಯದಲ್ಲಿ ತನ್ನ 50 ನೇ ಟಿ20 ವಿಕೆಟ್ ಪಡೆದು ಈ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡರು. ಇನ್ನು ಅತಿ ಕಡಿಮೆ ಇನ್ನಿಂಗ್ಸ್ನಲ್ಲಿ ಹೆಚ್ಚು ಟಿ20 ವಿಕೆಟ್ ಉರುಳಿಸಿದ ಭಾರತದ ಬೌಲರ್ಗಳನ್ನು ನೋಡುವುದಾದರೆ..

1 - ಕುಲ್ದೀಪ್ ಯಾದವ್: 30 ಪಂದ್ಯಗಳು

2 - ಯುಜ್ವೇಂದ್ರ ಚಹಾಲ್: 34 ಪಂದ್ಯಗಳು

3 - ಜಸ್ಪ್ರೀತ್ ಬುಮ್ರಾ - 41 ಪಂದ್ಯಗಳು

4 - ರವಿಚಂದ್ರನ್ ಅಶ್ವಿನ್ - 42 ಪಂದ್ಯಗಳು

5 - ಭುವನೇಶ್ವರ್ ಕುಮಾರ್ - 50 ಪಂದ್ಯಗಳು




