Virat Kohli Century: ಐತಿಹಾಸಿಕ ಟೆಸ್ಟ್​ನಲ್ಲಿ ಶತಕ ಸಿಡಿಸಿ ಮೂವರು ಕ್ರಿಕೆಟ್ ದಿಗ್ಗಜರ ದಾಖಲೆ ಮುರಿದ ವಿರಾಟ್..!

|

Updated on: Jul 22, 2023 | 6:39 AM

Virat Kohli Century: 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ, ಐತಿಹಾಸಿಕ ಪಂದ್ಯದಲ್ಲಿ 29ನೇ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದಾರೆ. ಇದರೊಂದಿಗೆ ಕ್ರಿಕೆಟ್ ಲೋಕದ ಹಲವು ದಿಗ್ಗಜರ ದಾಖಲೆಯನ್ನು ಮುರಿದಿದ್ದಾರೆ.

1 / 7
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ, ಐತಿಹಾಸಿಕ ಪಂದ್ಯದಲ್ಲಿ 29ನೇ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದಾರೆ. ಇದರೊಂದಿಗೆ ಕ್ರಿಕೆಟ್ ಲೋಕದ ಹಲವು ದಿಗ್ಗಜರ ದಾಖಲೆಯನ್ನು ಮುರಿದಿದ್ದಾರೆ.

2 / 7
ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ನ ಎರಡನೇ ದಿನದಾಟದಲ್ಲಿ 180 ಎಸೆತಗಳನ್ನು ಎದುರಿಸಿ ತಮ್ಮ ಶತಕ ಪೂರ್ಣಗೊಳಿಸಿದ ಕೊಹ್ಲಿ, ಜಡೇಜಾ ಅವರೊಂದಿಗೆ ಶತಕದ ಜೊತೆಯಾಟವನ್ನು ಹಂಚಿಕೊಂಡರು. ಹೀಗಾಗಿ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 438 ರನ್ ಕಲೆಹಾಕಿತು.

3 / 7
ಇನ್ನು ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ 76ನೇ ಟೆಸ್ಟ್ ಶತಕ ಸಿಡಿಸಿದ ವಿರಾಟ್, 500 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 75 ಶತಕ ಸಿಡಿಸಿದ್ದ ಭಾರತದ ಸಚಿನ್ ತೆಂಡೂಲ್ಕರ್ ಅವರನ್ನು ಶತಕಗಳ ವಿಚಾರದಲ್ಲಿ ಹಿಂದಿಕ್ಕಿದ್ದಾರೆ.

4 / 7
ವೆಸ್ಟ್ ಇಂಡೀಸ್ ವಿರುದ್ಧ 12ನೇ ಶತಕ ಸಿಡಿಸಿದ ಕೊಹ್ಲಿ, ಕೆರಿಬಿಯನ್ನರ ವಿರುದ್ಧ ಅತಿ ಹೆಚ್ಚು ಆತಕ ಸಿಡಿಸಿದವರ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

5 / 7
ಹಾಗೆಯೇ ತಮ್ಮ 12ನೇ ಶತಕದ ಮೂಲಕ ವಿಂಡೀಸ್ ವಿರುದ್ಧ 11 ಶತಕ ಸಿಡಿಸಿದ್ದ ಆರ್​ಸಿಬಿ ತಂಡದ ಮಾಜಿ ಆಟಗಾರ ಹಾಗೂ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್​ರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

6 / 7
ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಅಂದರೆ 13 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿರುವ ಸುನಿಲ್ ಗವಾಸ್ಕರ್ ಅವರನ್ನು ಹಿಂದಿಕ್ಕಲು ಕೊಹ್ಲಿಗೆ ಇನ್ನೊಂದು ಶತಕದ ಅವಶ್ಯಕತೆ ಇದೆ. ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಎರಡನೇ ಇನ್ನಿಂಗ್ಸ್ ಆಡುವಂತ್ತಾದರೆ, ಆಗ ಕೊಹ್ಲಿಗೆ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಮುರಿಯುವ ಅವಕಾಶವಿದೆ.

7 / 7
ತಮ್ಮ 29ನೇ ಟೆಸ್ಟ್ ಶತಕ ಪೂರ್ಣಗೊಳಿಸಿದ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದವರ ಪಟ್ಟಿಯಲ್ಲಿ ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಇದು ಕೊಹ್ಲಿ ಅವರ 25ನೇ ಟೆಸ್ಟ್ ಶತಕವಾಗಿದೆ.

Published On - 6:36 am, Sat, 22 July 23