- Kannada News Photo gallery Cricket photos India lose an ODI series to New Zealand at home for the first time in 37 years
೩೭ ವರ್ಷಗಳ ಬಳಿಕ ಟೀಮ್ ಇಂಡಿಯಾದ ‘ಗರ್ವಭಂಗ’
India vs New Zealand: ಭಾರತ ತಂಡವು ತವರಿನಲ್ಲಿ ಒಮ್ಮೆಯೂ ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿ ಸೋತಿರಲಿಲ್ಲ. ಇದೀಗ ಬರೋಬ್ಬರಿ ಮೂವತ್ತೇಳು ವರ್ಷಗಳ ಭಾರತದ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ. ಈ ಮೂಲಕ ನ್ಯೂಝಿಲೆಂಡ್ ತಂಡ ಹೊಸ ಇತಿಹಾಸ ನಿರ್ಮಿಸಿದ್ದಾರೆ.
Updated on: Jan 19, 2026 | 7:54 AM

ಟೀಮ್ ಇಂಡಿಯಾದ 37 ವರ್ಷಗಳ ಗೆಲುವಿನ ನಾಗಾಲೋಟ ಕೊನೆಗೂ ಕೊನೆಗೊಂಡಿದೆ. ಅದು ಸಹ ಹೀನಾಯ ಸೋಲಿನೊಂದಿಗೆ. ಅಂದರೆ ಭಾರತ ತಂಡವು ಇದೇ ಮೊದಲ ಬಾರಿಗೆ ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ಏಕದಿನ ಸರಣಿ ಸೋತಿದೆ.

ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಸರಣಿ ಶುರುವಾಗಿದ್ದು 1988 ರಲ್ಲಿ. ಮೊದಲ ಸರಣಿಯಲ್ಲೇ ಟೀಮ್ ಇಂಡಿಯಾ ಕಿವೀಸ್ ಪಡೆಯನ್ನು 4-0 ಅಂತರದಿಂದ ಸೋಲಿಸಿದ್ದರು. ಇದಾದ ಬಳಿಕ ಭಾರತಕ್ಕೆ ಆಗಮಿಸಿದ ನ್ಯೂಝಿಲೆಂಡ್ 2-3 (1995) 2-3 (1999), 0-5 (2010), 2-3 (2016), 1-2 (2017), 0-3 (2023) ಅಂತರದಿಂದ ಸರಣಿಗಳನ್ನು ಸೋತಿದ್ದರು.

ಆದರೆ ಈ ಬಾರಿ ಬಲಿಷ್ಠ ಭಾರತ ತಂಡದ ಲೆಕ್ಕಾಚಾರಗಳನ್ನು ಪ್ರವಾಸಿ ತಂಡ ತಲೆಕೆಳಗಾಗಿಸಿದೆ. ಅಷ್ಟೇ ಅಲ್ಲದೆ 2 ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಚೊಚ್ಚಲ ಬಾರಿ ಏಕದಿನ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸರಣಿಯ ಮೊದಲ ಸರಣಿಯಲ್ಲಿ ಭಾರತ ತಂಡ 4 ವಿಕೆಟ್‌ಗಳ ಜಯ ಸಾಧಿಸಿತ್ತು. ಆದರೆ ರಾಜ್ಕೋಟ್ ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಭಾರತ ತಂಡಕ್ಕೆ 7 ವಿಕೆಟ್‌ಗಳ ಸೋಲುಣಿಸುವಲ್ಲಿ ನ್ಯೂಝಿಲೆಂಡ್ ತಂಡ ಯಶಸ್ವಿಯಾಗಿತ್ತು. ಇದೀಗ ಇಂದೋರ್ ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ 41 ರನ್ ಗಳಿಂದ ಟೀಮ್ ಇಂಡಿಯಾವನ್ನು ಬಗ್ಗು ಬಡಿದಿದೆ.

ಈ ಭರ್ಜರಿ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡವು 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಭಾರತದಲ್ಲಿ ಏಕದಿನ ಸರಣಿ ಗೆಲ್ಲುವ ಮೂರು ದಶಕಗಳ ಕನಸನ್ನು ಕೊನೆಗೂ ಕಿವೀಸ್ ಪಡೆ ಈಡೇರಿಸಿಕೊಂಡಿದೆ.
