
ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಟೀಮ್ ಇಂಡಿಯಾ ಏಕದಿನ ತಂಡಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನ ಕಾಯ್ದುಕೊಂಡಿದೆ. ಆದರೆ ಈ ಬಾರಿ ಹೆಚ್ಚಿನ ರೇಟಿಂಗ್ ಪಾಯಿಂಟ್ಗಳನ್ನು ಪಡೆದುಕೊಂಡಿದ್ದು, ಈ ಮೂಲಕ ಮೂರನೇ ಮತ್ತು ನಾಲ್ಕನೇ ಸ್ಥಾನಗಳ ಅಂತರವನ್ನು ಹೆಚ್ಚಿಸಿಕೊಂಡಿದೆ.

ಈ ಹಿಂದೆ ಇಂಗ್ಲೆಂಡ್ ವಿರುದ್ದ ಏಕದಿನ ಸರಣಿಯಲ್ಲಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ರ‍್ಯಾಂಕಿಂಗ್ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿತ್ತು. ಇದಾಗ್ಯೂ ವೆಸ್ಟ್ ಇಂಡೀಸ್ ಸರಣಿ ಫಲಿತಾಂಶದಿಂದ ಟೀಮ್ ಇಂಡಿಯಾ ಒಂದು ಸ್ಥಾನ ಕುಸಿಯುವ ಭೀತಿಯಲ್ಲಿತ್ತು. ಆದರೆ ಇದೀಗ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ.

ಸದ್ಯ ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿದ್ದರೆ, ಅತ್ತ 106 ಅಂಕಗಳನ್ನು ಹೊಂದಿದ್ದ ಪಾಕಿಸ್ತಾನ್ 4ನೇ ಸ್ಥಾನ ಅಲಂಕರಿಸಿದೆ. ಹಾಗಿದ್ರೆ ಏಕದಿನ ತಂಡಗಳ ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ನೋಡೋಣ...

10- ಅಫ್ಘಾನಿಸ್ತಾನ್ (69 ರೇಟಿಂಗ್)

9- ವೆಸ್ಟ್ ಇಂಡೀಸ್ (69 ರೇಟಿಂಗ್)

8- ಶ್ರೀಲಂಕಾ (92 ರೇಟಿಂಗ್)

7- ಬಾಂಗ್ಲಾದೇಶ (98 ರೇಟಿಂಗ್)

6- ಸೌತ್ ಆಫ್ರಿಕಾ (101 ರೇಟಿಂಗ್)

5- ಆಸ್ಟ್ರೇಲಿಯಾ (101 ರೇಟಿಂಗ್)

4- ಪಾಕಿಸ್ತಾನ್ (106 ರೇಟಿಂಗ್)

3- ಭಾರತ (110 ರೇಟಿಂಗ್)

2- ಇಂಗ್ಲೆಂಡ್ (119 ರೇಟಿಂಗ್)

1- ನ್ಯೂಜಿಲೆಂಡ್ (128 ರೇಟಿಂಗ್)