ಟೀಮ್ ಇಂಡಿಯಾದ ಸಿಕ್ಸರ್ ಕಿಂಗ್ ಯಾರು ಎಂಬ ಪ್ರಶ್ನೆಗೆ ಥಟ್ಟನೆ ಬರುವ ಉತ್ತರ ಯುವರಾಜ್ ಸಿಂಗ್. ಆದರೆ ಅಂಕಿ ಅಂಶಗಳ ಮೊರೆ ಹೋದರೆ ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಕಾಣಸಿಗುತ್ತಾರೆ. ಇದೀಗ ಈ ಸಿಕ್ಸ್ಗಳ ಪಟ್ಟಿಗೆ ಮತ್ತಷ್ಟು ಸಿಕ್ಸರ್‌ಗಳನ್ನು ಸೇರಿಸಲು ಹಿಟ್ಮ್ಯಾನ್ ವೆಸ್ಟ್ ಇಂಡೀಸ್ನಲ್ಲಿದ್ದಾರೆ. ಅಂದರೆ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಆಡಲು ಕೆರಿಬಿಯನ್ ದ್ವೀಪಕ್ಕೆ ತಲುಪಿದ್ದಾರೆ. ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಮತ್ತು ಇತರ ಆಟಗಾರರು ಇದೀಗ ವಿಂಡೀಸ್ನಲ್ಲಿದ್ದಾರೆ. ಟಿ20 ಸರಣಿ ಆರಂಭವಾಗುವ ಮುನ್ನವೇ ರಿಷಬ್ ಪಂತ್ ಶೇರ್ ಮಾಡಿದ ಫೋಟೋವೊಂದು ಇದೀಗ ಎಲ್ಲರ ಗಮನ ಸೆಳೆದಿದೆ.