IND vs AUS 3rd T20I: ಭಾರತ-ಆಸ್ಟ್ರೇಲಿಯಾ ತೃತೀಯ ಟಿ20 ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿದೆ

India vs Australia: ಹೈದರಾಬಾದ್​ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ತೃತೀಯ ಟಿ20 ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.

TV9 Web
| Updated By: Vinay Bhat

Updated on: Sep 26, 2022 | 11:22 AM

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ತೃತೀಯ ಟಿ20 ಪಂದ್ಯದಲ್ಲಿ ಭಾರತ (India vs Australia) ರೋಚಕ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.

1 / 8
ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಸ್ಫೋಟಕ ಆಟ ಹಾಗೂ ವಿರಾಟ್ ಕೊಹ್ಲಿಯ (Virat Kohli) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿರ್ಣಾಯಕ ಕದನದಲ್ಲಿ ಟೀಮ್ ಇಂಡಿಯಾ 6 ವಿಕೆಟ್​ಗಳ ಜಯ ಕಂಡು 2-1 ಅಂತರದಿಂದ ಟಿ20 ಸರಣಿ ಬಾಚಿಕೊಂಡಿದೆ.

2 / 8
ಈ ಗೆಲುವಿನೊಂದಿಗೆ ಭಾರತ ಪರ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ರೋಹಿತ್ 32 ಪಂದ್ಯಗಳಲ್ಲಿ ಗೆದ್ದು ಜಂಟಿ ಸ್ಥಾನ ಹಂಚಿಕೊಂಡಿದ್ದರು.

3 / 8
ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 186 ರನ್​ಗಳ ಸವಾಲಿನ ಮೊತ್ತ ಗಳಿಸಿತ್ತು. ಮರೂನ್​ ಗ್ರೀನ್​​ 21 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​ ಸಮೇತ 52 ರನ್​ ಚಚ್ಚಿದರು. ಟಿಮ್​ ಡೇವಿಡ್​ 54 ರನ್​ ಗಳಿಸಿದರು.

4 / 8
ಭಾರತ ಆರಂಭದಲ್ಲೇ ಕೆಎಲ್ ರಾಹುಲ್, ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಆದರೆ, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ 104 ರನ್‌ಗಳ ಜೊತೆಯಾಟ ಆಡಿದ್ದು ತಂಡದ ಗೆಲುವಿಗೆ ನೆರವಾಯಿತು.

5 / 8
ಸೂರ್ಯಕುಮಾರ್​ ಆಸ್ಟ್ರೇಲಿಯಾ ಬೌಲರ್​ಗಳ ಬೆಂಡೆತ್ತಿದರು. 5 ಬೌಂಡರಿ, 5 ಸಿಕ್ಸರ್​ ಸಮೇತ 69 ರನ್​ ಗಳಿಸಿದರು.

6 / 8
ಕೊಹ್ಲಿ ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟ್​ ಬೀಸಿ 33 ನೇ ಅರ್ಧಶತಕ ಸಿಡಿಸಿದರು. 4 ಸಿಕ್ಸರ್​, 3 ಬೌಂಡರಿ ಸಮೇತ 63 ರನ್​ ಗಳಿಸಿದರು.

7 / 8
ಆದರೆ, ಈ ಪಂದ್ಯದಲ್ಲೂ ರೋಹಿತ್ ಪಡೆಯ ಬೌಲಿಂಗ್ ವಿಭಾಗ ಪರಿಣಾಮಕಾರಿ ಆಗಿ ಗೋಚರಿಸಲಿಲ್ಲ. ಸ್ಪಿನ್ನರ್​ಗಳು ತಮ್ಮ ಜವಾಬ್ದಾರಿ ನಿರ್ವಹಿಸಿದರೆ ವೇಗಿಗಳು ದುಬಾರಿ ಆದರು. ಜಸ್​ಪ್ರೀತ್ ಬುಮ್ರಾ ಕೂಡ 4 ಓವರ್​ಗೆ 50 ನೀಡಿದರು. ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತರು.

8 / 8
Follow us