IND vs AUS: ಪರ್ತ್​ ಟೆಸ್ಟ್​ಗೆ ಶುಭ್​ಮನ್ ಗಿಲ್ ಲಭ್ಯ? ಶುಭ ಸುದ್ದಿ ನೀಡಿದ ಬೌಲಿಂಗ್ ಕೋಚ್

Shubman Gill Injury Update: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಶುಭ್​ಮನ್ ಗಿಲ್ ಅವರ ಗಾಯದ ಬಗ್ಗೆ ಬಿಗ್ ಅಪ್​ಡೇಟ್ ಹೊರಬಿದ್ದಿದೆ. ಅಭ್ಯಾಸದ ವೇಳೆ ಗಾಯಗೊಂಡಿದ್ದ ಗಿಲ್ ಅವರ ಆಟದ ಬಗ್ಗೆ ಅನಿಶ್ಚಿತತೆ ಇತ್ತು. ಆದರೆ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಅವರು ಗಿಲ್ ಮೊದಲ ಟೆಸ್ಟ್‌ನಲ್ಲಿ ಆಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೃಥ್ವಿಶಂಕರ
|

Updated on: Nov 20, 2024 | 5:27 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ನವೆಂಬರ್ 22 ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಈ ಟೆಸ್ಟ್ ಆರಂಭಕ್ಕೂ ಮುನ್ನ ಸ್ಟಾರ್ ಆಟಗಾರರ ಅಲಭ್ಯತೆ ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವಾಗಿದೆ. ನಾಯಕ ರೋಹಿತ್ ಶರ್ಮಾ ಮೊದಲ ಟೆಸ್ಟ್​ನಿಂದ ಹೊರಗುಳಿಯುವುದಾಗಿ ಮೊದಲೇ ಹೇಳಿದ್ದರು. ಆ ಬಳಿಕ ಅಭ್ಯಾಸದ ವೇಳೆ ಆಟಗಾರರು ಮಾಡಿಕೊಂಡ ಗಾಯ ತಂಡಕ್ಕೆ ಕೊಂಚ ಹಿನ್ನಡೆಯುಂಟು ಮಾಡಿತ್ತು.

1 / 8
ಅಭ್ಯಾಸದ ವೇಳೆ ಟೀಂ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರು ಇಂಜುರಿಗೆ ಒಳಗಾಗಿದ್ದರು. ಆದರೆ ಈ ನಾಲ್ವರಲ್ಲಿ ಮೂವರು ಆಟಗಾರರ ಗಾಯ ಅಷ್ಟು ಗಂಭೀರವಾಗಿಲ್ಲ ಎಂಬುದು ಅಭಿಮಾನಿಗಳಿಗೆ ನಿರಾಳ ತಂದಿತ್ತು. ಆದರೆ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಅವರ ಇಂಜುರಿ ಮಾತ್ರ ಕೊಂಚ ಗಂಭೀರವಾಗಿದ್ದು, ಅವರು ಮೊದಲ ಟೆಸ್ಡ್ ಆಡುವುದು ಅನುಮಾನ ಎಂದು ಹೇಳಲಾಗುತ್ತಿತ್ತು.

2 / 8
ಇದಕ್ಕೆ ಪೂರಕವಾಗಿ ಮೊದಲ ಟೆಸ್ಟ್​ಗೆ ಇಬ್ಬರು ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ಎಲ್ಲಾ ನಡೆಗಳಿಂದ ಶುಭ್​ಮನ್ ಗಿಲ್ ಮೊದಲ ಟೆಸ್ಟ್​ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಗಿಲ್ ಅವರ ಇಂಜುರಿಯ ಬಗ್ಗೆ ಮಾಹಿತಿ ನೀಡಿರುವ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್, ಮೊದಲ ಟೆಸ್ಟ್​ನಲ್ಲಿ ಗಿಲ್ ಆಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

3 / 8
ಪರ್ತ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಶುಬ್‌ಮನ್ ಗಿಲ್ ಅವರ ಗಾಯದ ಬಗ್ಗೆ ಮಾಹಿತಿ ನೀಡಿದ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್, ‘ ಗಿಲ್ ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದಾರೆ. ಹೀಗಾಗಿ ಅವರು ಮೊದಲ ಟೆಸ್ಟ್ ಆಡುವ ಬಗ್ಗೆ, ಟೆಸ್ಟ್ ಪಂದ್ಯದ ದಿನದಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಅಲ್ಲದೆ ಅಭ್ಯಾಸದ ವೇಳೆ ಗಿಲ್ ಉತ್ತಮವಾಗಿ ಆಡಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಅವರು ಮ್ಯಾಚ್​ಗೆ ಫಿಟ್ ಆಗಲಿ ಎಂದು ನಾವು ಪ್ರಾರ್ಥಿಸಬೇಕು ಎಂದಿದ್ದಾರೆ.

4 / 8
ವಾಸ್ತವವಾಗಿ ಗಿಲ್, ನವೆಂಬರ್ 16 ರಂದು ನಡೆದ ಅಭ್ಯಾಸ ಪಂದ್ಯದ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಆ ಗಾಯದಿಂದಾಗಿ ಗಿಲ್ ಪರ್ತ್ ಟೆಸ್ಟ್‌ನಲ್ಲಿ ಆಡುವ ಬಗ್ಗೆ ಸಸ್ಪೆನ್ಸ್ ಹುಟ್ಟಿಕೊಂಡಿತು. ಆದರೆ ಈಗ ಬೌಲಿಂಗ್ ಕೋಚ್ ಹೇಳಿಕೆಯ ನಂತರ ಅವರು ಆಡುವ ಭರವಸೆ ಮೂಡಿದೆ. ಗಿಲ್ ಗಾಯಗೊಳ್ಳುವುದಕ್ಕೂ ಮುನ್ನ ನಡೆದ ಇಂಟ್ರಾಸ್ಕ್ವಾಡ್ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ 28 ರನ್, ಎರಡನೇ ಇನ್ನಿಂಗ್ಸ್‌ನಲ್ಲಿ 42 ರನ್ ಗಳಿಸಿ ಅಜೇಯರಾಗಿ ಉಳಿದ್ದರು. ಹೀಗಾಗಿ ಮೊದಲ ಟೆಸ್ಟ್​ಗೆ ಅವರ ಲಭ್ಯತೆ ಭಾರತ ತಂಡಕ್ಕೆ ಬಲ ತುಂಬಲಿದೆ.

5 / 8
ಇದರ ಜೊತೆಗೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಗಿಲ್ ಅವರ ಲಭ್ಯತೆ ಟೀಂ ಇಂಡಿಯಾಕ್ಕೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಗಿಲ್‌ಗೆ ಈಗಾಗಲೇ ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವವೂ ಇದೆ. ಗಿಲ್ 2020-21ರಲ್ಲಿ ನಡೆದಿದ್ದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಈ ಆವೃತ್ತಿಯಲ್ಲಿ ಪ್ರದರ್ಶನವೂ ಉತ್ತಮವಾಗಿತ್ತು. ಹೀಗಾಗಿ ಟೀಂ ಇಂಡಿಯಾ ಆ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿತ್ತು.

6 / 8
ಟೀಂ ಇಂಡಿಯಾ ಪರ ಟೆಸ್ಟ್‌ನಲ್ಲಿ 3ನೇ ಸ್ಥಾನದಲ್ಲಿ ಆಡುತ್ತಿರುವ ಗಿಲ್ ಇದುವರೆಗೆ ಆಡಿರುವ 14 ಪಂದ್ಯಗಳಲ್ಲಿ 42.09 ಸರಾಸರಿಯಲ್ಲಿ 926 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 3 ಅರ್ಧ ಶತಕಗಳು ಸೇರಿವೆ. ಒಂದು ವೇಳೆ ಗಿಲ್ ಮೊದಲ ಟೆಸ್ಟ್​ ವೇಳೆಗೆ ಚೇತರಿಸಿಕೊಳ್ಳದಿದ್ದರೆ ಅವರ ಸ್ಥಾನದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಹೀಗಾಗಿಯೇ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

7 / 8
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯು ನವೆಂಬರ್ 22 ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಪರ್ತ್‌ನಲ್ಲಿ ನಡೆಯಲ್ಲಿದೆ. ಅದರ ನಂತರ, ಎರಡನೇ ಟೆಸ್ಟ್ ಅಡಿಲೇಡ್‌ನಲ್ಲಿ, ಮೂರನೇ ಟೆಸ್ಟ್ ಬ್ರಿಸ್ಬೇನ್‌ನಲ್ಲಿ ಮತ್ತು ನಾಲ್ಕನೇ ಬಾಕ್ಸಿಂಗ್ ಡೇ ಟೆಸ್ಟ್ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಸರಣಿಯ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

8 / 8
Follow us
ಹಗಲೆಲ್ಲ ಬಸನಗೌಡ ಯತ್ನಾಳ್ ವಿಷಯದಲ್ಲಿ ಮಾತಾಡುವುದು ಇಷ್ಟವಿಲ್ಲ: ವಿಜಯೇಂದ್ರ

ನಿತೀಶ್ ರಿವರ್ಸ್ ರ್ಯಾಂಪ್ ಶಾಟ್ ಸಿಕ್ಸರ್​ಗೆ ಬೆಚ್ಚಿದ ಆಸೀಸ್

ಯತ್ನಾಳ್ ಲಿಂಗಾಯತರ ಕ್ಷಮಾಪಣೆ ಕೇಳಿ ಗೌರವ ಉಳಿಸಿಕೊಳ್ಳಲಿ: ಸ್ವಾಮೀಜಿ

ಆಕಾಶದಲ್ಲಿ ಹಾರಾಡಿದ ಸರ್ಕಾರಿ ಶಾಲೆ ಮಕ್ಕಳು: ವಿಮಾನದಲ್ಲಿ ಪ್ರವಾಸ

ಆನೇಕಲ್: ಗಂಗೊಂಡಹಳ್ಳಿಯಲ್ಲಿ ಜಮೀನಿಗೆ ನುಗ್ಗಿದ 8 ಕಾಡಾನೆಗಳ ಹಿಂಡು

ಮಾತಾಡಿದರೆ ಯತ್ನಾಳ್ ಸರಿಹೋಗುತ್ತಾರೆ, ಸಮಸ್ಯೆಯೇನೂ ಇಲ್ಲ: ಯಡಿಯೂರಪ್ಪ

ಅಂಬೇಡ್ಕರ್ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನವೆಂದು ಆಚರಣೆ

ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲಾಗದು: ಪ್ರಲ್ಹಾದ್ ಜೋಶಿ

ಬಣ ಬಡಿದಾಟ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ: ಅನ್ನದಾನಿ, ಶಾಸಕ

ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ