IND vs AUS Test: ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಅನುಮಾನ: ಬಿಸಿಸಿಐಗೆ ಶುರುವಾಯಿತು ಹೊಸ ತಲೆನೋವು

India vs Australia Test: ಭಾರತ ಆಸ್ಟ್ರೇಲಿಯಾ ತೃತೀಯ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಮಾರ್ಚ್ 1 ರಿಂದ 5ರ ವರೆಗೆ ಧರ್ಮಶಾಲಾದಲ್ಲಿ ಈ ಟೆಸ್ಟ್ ಶುರುವಾಗುವುದು ಕಷ್ಟವಂತೆ.

TV9 Web
| Updated By: Vinay Bhat

Updated on:Feb 11, 2023 | 10:32 AM

ಭಾರತ ಕ್ರಿಕೆಟ್ ತಂಡ ಸದ್ಯ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ - ಗವಾಸ್ಕರ್ ಟ್ರೋಫಿಯ ಪ್ರಥಮ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ.

1 / 7
ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಒಟ್ಟು ನಾಲ್ಕು ಪಂದ್ಯಗಳು ನಡೆಯಲಿದೆ. ಮೊದಲ ಟೆಸ್ಟ್ ಬಳಿಕ ಎರಡನೇ ಪಂದ್ಯವನ್ನು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಬಳಿಕ ಮಾರ್ಚ್ 1 ರಿಂದ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್​ನಲ್ಲಿ ಮೂರನೇ ಟೆಸ್ಟ್ ಶುರುವಾಗಲಿದೆ.

2 / 7
ಆದರೆ, ಈ ತೃತೀಯ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಮಾರ್ಚ್ 1 ರಿಂದ 5ರ ವರೆಗೆ ಧರ್ಮಶಾಲಾದಲ್ಲಿ ಈ ಟೆಸ್ಟ್ ಶುರುವಾಗುವುದು ಕಷ್ಟವಂತೆ. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನ ಪಿಚ್ ಅನ್ನು ಇತ್ತೀಚೆಗಷ್ಟೆ ನವೀಕರಣಗೊಳಿಸಲಾಗಿತ್ತು. ಆದರೆ, ಪಿಚ್ ಸಂಪೂರ್ಣ ಸಜ್ಜಾದ ಕಾರಣ ಅಂತರರಾಷ್ಟ್ರೀಯ ಪಂದ್ಯ ಆಡಲು ಯೋಗ್ಯವಾಗಿಲ್ಲ ಎಂದು ಹೇಳಲಾಗಿದೆ.

3 / 7
ಬಿಸಿಸಿಐ ಪಿಚ್ ಪರಿಶೀಲನೆ ನಡೆಸುವ ವಿಶೇಷ ಅಧಿಕಾರಿಗಳನ್ನು ಹೊಂದಿದೆ. ಇವರು ಇನ್ನೆರಡು ದಿನಗಳಲ್ಲಿ ಧರ್ಮಶಾಲಗೆ ತೆರಳಿ ಪಿಚ್ ಅನ್ನು ತಪಾಸಣೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ಪಿಚ್ ಇನ್ನೂ ಸಂಪೂರ್ಣ ಸಿದ್ಧವಾಗಿಲ್ಲ ಎಂದಾದರೆ ಮೂರನೇ ಟೆಸ್ಟ್ ಸ್ಥಳಾಂತರಗೊಳ್ಳಲಿದೆ.

4 / 7
ಧರ್ಮಶಾಲ ಪಿಚ್ ಅನ್ನು ಇತ್ತೀಚೆಗಷ್ಟೆ ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗಿತ್ತು. ಆದರೆ, ನಿರಂತರ ಮಳೆ ಸುರಿಯುತ್ತಿರುವ ಕಾರಣ ಕಾಮಗಾರಿ ವಿಳಂಬವಾಗಿದೆ. ಎಲ್ಲಾದರು ಪಿಚ್ ಸಿದ್ಧವಾಗಿ ಇಂಡೋ-ಆಸೀಸ್ ತೃತೀಯ ಟೆಸ್ಟ್ ನಡೆದರೂ ಪಂದ್ಯಕ್ಕ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.

5 / 7
ಪಿಚ್ ಸರಿಪಡಿಸುವ ಕೆಲಸ ನಡೆಯುತ್ತಿರುವುದರಿಂದ ಇಲ್ಲಿ ರಣಜಿ ಸೇರಿದಂತೆ ಯಾವುದೇ ಪಂದ್ಯವನ್ನು ಆಯೋಜಿಸಿಲ್ಲ. ಧರ್ಮಶಾಲ ಬಿಟ್ಟರೆ ಭಾರತ-ಆಸ್ಟ್ರೇಲಿಯಾ ಪಂದ್ಯ ವಿಶಾಖಪಟ್ಟಣಂನ ವೈಜಾಗ್​ನಲ್ಲಿ ಆಯೋಜಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

6 / 7
ಧರ್ಮಶಾಲಾದಲ್ಲಿ 2017 ರಲ್ಲಿ ಕೊನೆಯ ಟೆಸ್ಟ್ ಪಂದ್ಯ ನಡೆದಿತ್ತು. ಭಾರತ- ಆಸ್ಟ್ರೇಲಿಯಾ ನಡುವೆ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್​ಗಳ ಜಯ ಸಾಧಿಸಿತ್ತು. ವಿರಾಟ್ ಕೊಹ್ಲಿಗೆ ಇಂಜುರಿ ಆಗಿದ್ದ ಕಾರಣ ಅಜಿಂಕ್ಯಾ ರಹಾನೆ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು. ಜಡೇಜಾ ಆಲ್ರೌಂಡರ್ ಪ್ರದರ್ಶನ ತೋರಿದ್ದರು.

7 / 7

Published On - 10:32 am, Sat, 11 February 23

Follow us