- Kannada News Photo gallery Cricket photos India vs England 5th Test Day 2 Play Started Rohit Sharma Shubman Gill on crease
IND vs ENG 5th Test: ಐದನೇ ಟೆಸ್ಟ್‌ನ ಎರಡನೇ ದಿನದಾಟ ಆರಂಭ: ಬೃಹತ್ ಮುನ್ನಡೆಯತ್ತ ಭಾರತ ಚಿತ್ತ
India vs England 5th Test Day 2: ಭಾರತ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿದೆ. 83 ರನ್‌ಗಳ ಹಿನ್ನಡೆಯಲ್ಲಿದೆ. ರೋಹಿತ್ ಶರ್ಮಾ 52 ರನ್ ಹಾಗೂ ಶುಭ್ಮನ್ ಗಿಲ್ 26 ರನ್ ಗಳಿಸಿ ಮೊದಲ ದಿನದಾಟ ಕೊನೆಗೊಳಿಸಿದ್ದರು. ಇದೀಗ ಎರಡನೇ ದಿನದಾಟ ಆರಂಭವಾಗಿದ್ದು, ಟೀಮ್ ಇಂಡಿಯಾ ಬೃಹತ್ ಮುನ್ನಡೆಯತ್ತ ಚಿತ್ತನೆಟ್ಟಿದೆ.
Updated on:Mar 08, 2024 | 9:40 AM

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನ ಮೊದಲ ದಿನದ ಆಟದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತು. ಇಂಗ್ಲೆಂಡ್ ಅನ್ನು 218 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಶುರುಮಾಡಿರುವ ಭಾರತ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿದೆ.

ಭಾರತ 83 ರನ್‌ಗಳ ಹಿನ್ನಡೆಯಲ್ಲಿದೆ. ರೋಹಿತ್ ಶರ್ಮಾ 52 ರನ್ ಹಾಗೂ ಶುಭ್ಮನ್ ಗಿಲ್ 26 ರನ್ ಗಳಿಸಿ ಮೊದಲ ದಿನದಾಟ ಕೊನೆಗೊಳಿಸಿದ್ದರು. ಇದೀಗ ಎರಡನೇ ದಿನದಾಟ ಆರಂಭವಾಗಿದ್ದು, ಟೀಮ್ ಇಂಡಿಯಾ ಬೃಹತ್ ಮುನ್ನಡೆಯತ್ತ ಚಿತ್ತನೆಟ್ಟಿದೆ. ಯಶಸ್ವಿ ಜೈಸ್ವಾಲ್ ಮೊದಲ ದಿನ57 ರನ್ ಗಳಿಸಿ ಔಟ್ ಆಗಿದ್ದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಕುಲ್ದೀಪ್ ಯಾದವ್ ಮತ್ತು ಆರ್ ಅಶ್ವಿನ್ ಸ್ಪಿನ್ ಜೋಡಿಯ ಮುಂದೆ ಮಂಡಿಯೂರಿತು. ಹೀಗಾಗಿ ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ 218 ರನ್‌ಗಳಿಗೆ ಕೊನೆಗೊಂಡಿತು. ಇಂಗ್ಲೆಂಡ್ ತನ್ನ ಕೊನೆಯ 7 ವಿಕೆಟ್‌ಗಳನ್ನು ಕೇವಲ 43 ರನ್‌ಗಳಿಗೆ ಕಳೆದುಕೊಂಡಿತು.

ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್‌ನ ಆರಂಭ ಅದ್ಭುತವಾಗಿತ್ತು. ಬೆನ್ ಡಕೆಟ್ ಮತ್ತು ಝಾಕ್ ಕ್ರೌಲಿ ಇಬ್ಬರೂ 64 ರನ್‌ಗಳ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ ಬೆನ್ ಡಕೆಟ್ 27 ರನ್ ಗಳಿಸಿ ಔಟಾದರು. ನಂತರ ಒಲಿ ಪೋಪ್ ರೂಪದಲ್ಲಿ ಇಂಗ್ಲೆಂಡ್ ಮತ್ತೊಂದು ವಿಕೆಟ್ ಕಳೆದುಕೊಂಡಿತು. ಅರ್ಧಶತಕ ಸಿಡಿಸಿದ್ದ ಝಾಕ್ ಕ್ರೌಲಿ ವಿಕೆಟ್ನೊಂದಿಗೆ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತ್ತು.

100ನೇ ಟೆಸ್ಟ್ ಪಂದ್ಯವನ್ನು ಆಡಿದ ಜಾನಿ ಬೈರ್ಸ್ಟೋವ್ 29, ಜೋ ರೂಟ್ 26, ಕ್ಯಾಪ್ಟನ್ ಬೆನ್ ಸ್ಟೋಕ್ಸ್ 0, ಟಾಮ್ ಹಾರ್ಟ್ಲಿ 6, ಮಾರ್ಕ್ ವುಡ್ 0, ಬೆನ್ ಫೋಕ್ಸ್ 24 ಮತ್ತು ಜೇಮ್ಸ್ ಆಂಡರ್ಸನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಶೋಯೆಬ್ ಬಶೀರ್ 11 ರನ್ ಗಳಿಸಿ ಅಜೇಯರಾಗಿ ಉಳಿದರು. ಕುಲ್ದೀಪ್ ಯಾದವ್ 5 ವಿಕೆಟ್ ಪಡೆದ ಸಾಧನೆ ಮಾಡಿದರೆ, ಅಶ್ವಿನ್ ಕೂಡ 4 ವಿಕೆಟ್ ಕಬಳಿಸಿದರು.
Published On - 9:37 am, Fri, 8 March 24




