AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG 5th Test: ಐದನೇ ಟೆಸ್ಟ್​ನ ಎರಡನೇ ದಿನದಾಟ ಆರಂಭ: ಬೃಹತ್ ಮುನ್ನಡೆಯತ್ತ ಭಾರತ ಚಿತ್ತ

India vs England 5th Test Day 2: ಭಾರತ ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿದೆ. 83 ರನ್​ಗಳ ಹಿನ್ನಡೆಯಲ್ಲಿದೆ. ರೋಹಿತ್ ಶರ್ಮಾ 52 ರನ್ ಹಾಗೂ ಶುಭ್​ಮನ್ ಗಿಲ್ 26 ರನ್ ಗಳಿಸಿ ಮೊದಲ ದಿನದಾಟ ಕೊನೆಗೊಳಿಸಿದ್ದರು. ಇದೀಗ ಎರಡನೇ ದಿನದಾಟ ಆರಂಭವಾಗಿದ್ದು, ಟೀಮ್ ಇಂಡಿಯಾ ಬೃಹತ್ ಮುನ್ನಡೆಯತ್ತ ಚಿತ್ತನೆಟ್ಟಿದೆ.

Vinay Bhat
|

Updated on:Mar 08, 2024 | 9:40 AM

Share
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನ ಮೊದಲ ದಿನದ ಆಟದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತು. ಇಂಗ್ಲೆಂಡ್ ಅನ್ನು 218 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಶುರುಮಾಡಿರುವ ಭಾರತ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿದೆ.

1 / 5
ಭಾರತ 83 ರನ್​ಗಳ ಹಿನ್ನಡೆಯಲ್ಲಿದೆ. ರೋಹಿತ್ ಶರ್ಮಾ 52 ರನ್ ಹಾಗೂ ಶುಭ್​ಮನ್ ಗಿಲ್ 26 ರನ್ ಗಳಿಸಿ ಮೊದಲ ದಿನದಾಟ ಕೊನೆಗೊಳಿಸಿದ್ದರು. ಇದೀಗ ಎರಡನೇ ದಿನದಾಟ ಆರಂಭವಾಗಿದ್ದು, ಟೀಮ್ ಇಂಡಿಯಾ ಬೃಹತ್ ಮುನ್ನಡೆಯತ್ತ ಚಿತ್ತನೆಟ್ಟಿದೆ. ಯಶಸ್ವಿ ಜೈಸ್ವಾಲ್ ಮೊದಲ ದಿನ57 ರನ್ ಗಳಿಸಿ ಔಟ್ ಆಗಿದ್ದರು.

2 / 5
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಕುಲ್ದೀಪ್ ಯಾದವ್ ಮತ್ತು ಆರ್ ಅಶ್ವಿನ್ ಸ್ಪಿನ್ ಜೋಡಿಯ ಮುಂದೆ ಮಂಡಿಯೂರಿತು. ಹೀಗಾಗಿ ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ 218 ರನ್‌ಗಳಿಗೆ ಕೊನೆಗೊಂಡಿತು. ಇಂಗ್ಲೆಂಡ್ ತನ್ನ ಕೊನೆಯ 7 ವಿಕೆಟ್‌ಗಳನ್ನು ಕೇವಲ 43 ರನ್‌ಗಳಿಗೆ ಕಳೆದುಕೊಂಡಿತು.

3 / 5
ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ನ ಆರಂಭ ಅದ್ಭುತವಾಗಿತ್ತು. ಬೆನ್ ಡಕೆಟ್ ಮತ್ತು ಝಾಕ್ ಕ್ರೌಲಿ ಇಬ್ಬರೂ 64 ರನ್‌ಗಳ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ ಬೆನ್ ಡಕೆಟ್ 27 ರನ್ ಗಳಿಸಿ ಔಟಾದರು. ನಂತರ ಒಲಿ ಪೋಪ್ ರೂಪದಲ್ಲಿ ಇಂಗ್ಲೆಂಡ್ ಮತ್ತೊಂದು ವಿಕೆಟ್ ಕಳೆದುಕೊಂಡಿತು. ಅರ್ಧಶತಕ ಸಿಡಿಸಿದ್ದ ಝಾಕ್ ಕ್ರೌಲಿ ವಿಕೆಟ್​ನೊಂದಿಗೆ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತ್ತು.

4 / 5
100ನೇ ಟೆಸ್ಟ್ ಪಂದ್ಯವನ್ನು ಆಡಿದ ಜಾನಿ ಬೈರ್ಸ್ಟೋವ್ 29, ಜೋ ರೂಟ್ 26, ಕ್ಯಾಪ್ಟನ್ ಬೆನ್ ಸ್ಟೋಕ್ಸ್ 0, ಟಾಮ್ ಹಾರ್ಟ್ಲಿ 6, ಮಾರ್ಕ್ ವುಡ್ 0, ಬೆನ್ ಫೋಕ್ಸ್ 24 ಮತ್ತು ಜೇಮ್ಸ್ ಆಂಡರ್ಸನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಶೋಯೆಬ್ ಬಶೀರ್ 11 ರನ್ ಗಳಿಸಿ ಅಜೇಯರಾಗಿ ಉಳಿದರು. ಕುಲ್ದೀಪ್ ಯಾದವ್ 5 ವಿಕೆಟ್ ಪಡೆದ ಸಾಧನೆ ಮಾಡಿದರೆ, ಅಶ್ವಿನ್ ಕೂಡ 4 ವಿಕೆಟ್ ಕಬಳಿಸಿದರು.

5 / 5

Published On - 9:37 am, Fri, 8 March 24

ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್

ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ

ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!

‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ

ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ

ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ: ವ್ಯಕ್ತಿಗೆ ಡಬಲ್​​ ಶಾಕ್​

ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು

ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ

ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ

ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​