IND vs ENG: 12 ಎಸೆತಗಳಲ್ಲಿ 13 ವರ್ಷಗಳ ಹಿಂದಿನ ದಾಖಲೆ ಸರಿಗಟ್ಟಿದ ಅಕ್ಷರ್ ಪಟೇಲ್

Updated on: Jul 14, 2026 | 9:19 PM

Akshar Patel's 4-Wicket Haul: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅಮೋಘ ಬೌಲಿಂಗ್ ಪ್ರದರ್ಶಿಸಿ 4 ಪ್ರಮುಖ ವಿಕೆಟ್ ಕಬಳಿಸಿದರು. ಕೇವಲ 12 ಎಸೆತಗಳಲ್ಲಿ 4 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್ ತಂಡವನ್ನು 258 ರನ್‌ಗಳಿಗೆ ಕಟ್ಟಿಹಾಕಿದರು. 41-50 ಓವರ್‌ಗಳಲ್ಲಿ 4 ವಿಕೆಟ್ ಪಡೆದ ಎರಡನೇ ಭಾರತೀಯ ಸ್ಪಿನ್ನರ್ ಎನಿಸಿ ರವೀಂದ್ರ ಜಡೇಜಾ ದಾಖಲೆ ಸಮಕ್ಕೆ ನಿಂತರು.

1 / 5
ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲಿಂಗ್ ಅದ್ಭುತವಾಗಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಅಮೋಘ ಆರಂಭ ಪಡೆದುಕೊಂಡರೂ ಅದಾದ ಬಳಿಕ ಟೀಂ ಇಂಡಿಯಾ ಬೌಲರ್​ಗಳು ನಿಯಮಿತ ಅಂತರದಲ್ಲಿ ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್‌ ಬ್ಯಾಟಿಂಗ್‌ ವಿಭಾಗವನ್ನು ಕಟ್ಟಿಹಾಕಿದರು(PC-BCCI X).

ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲಿಂಗ್ ಅದ್ಭುತವಾಗಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಅಮೋಘ ಆರಂಭ ಪಡೆದುಕೊಂಡರೂ ಅದಾದ ಬಳಿಕ ಟೀಂ ಇಂಡಿಯಾ ಬೌಲರ್​ಗಳು ನಿಯಮಿತ ಅಂತರದಲ್ಲಿ ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್‌ ಬ್ಯಾಟಿಂಗ್‌ ವಿಭಾಗವನ್ನು ಕಟ್ಟಿಹಾಕಿದರು(PC-BCCI X).

2 / 5

ಈ ಪಂದ್ಯದಲ್ಲಿ ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ತಮ್ಮ 10 ಓವರ್​ಗಳ ಖೋಟಾದಲ್ಲಿ ಪ್ರಮುಖ 4 ವಿಕೆಟ್​ಗಳನ್ನು ಕಬಳಿಸಿದರು. ಅದರಲ್ಲೂ ಶತಕದ ಜೊತೆಯಾಟ ನಡೆಸಿದ್ದ ಲಿಯಾಮ್ ಡಾಸನ್ ಮತ್ತು ಜೋ ರೂಟ್ ಅವರ ಜೊತೆಯಾಟವನ್ನು ಅಂತ್ಯಗೊಳಿಸುವಲ್ಲಿ ಅಕ್ಷರ್ ಯಶಸ್ವಿಯಾದರು(PC-BCCI X).

3 / 5

ಮೊದಲ ಏಕದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ 9.5 ಓವರ್‌ಗಳನ್ನು ಬೌಲ್ ಮಾಡಿ 62 ರನ್‌ಗಳನ್ನು ಬಿಟ್ಟುಕೊಟ್ಟು ನಾಲ್ವರು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಅದರಲ್ಲೂ ಪಂದ್ಯದ ಕೊನೆಯ ಓವರ್‌ಗಳಲ್ಲಿ ಮ್ಯಾಜಿಕ್ ಮಾಡಿದ ಅಕ್ಷರ್ ಪಟೇಲ್ ಕೊನೆಯ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆದರು(PC-BCCI X).

4 / 5

ಅಕ್ಷರ್ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಲಿಯಾಮ್ ಡಾಸನ್, ಜೋಫ್ರಾ ಆರ್ಚರ್, ಜೋಶ್ ಟಂಗ್ ಮತ್ತು ಆದಿಲ್ ರಶೀದ್ ಅವರನ್ನು ಔಟ್ ಮಾಡಿದರು. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಪಟೇಲ್ ಕೇವಲ 12 ಎಸೆತಗಳಲ್ಲಿ ಎಲ್ಲಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ಇಂಗ್ಲೆಂಡ್‌ನ ಇನ್ನಿಂಗ್ಸ್ ಅನ್ನು 258 ರನ್‌ಗಳಿಗೆ ಸೀಮಿತಗೊಳಿಸಿದರು(PC-BCCI X).

5 / 5

ಇದರೊಂದಿಗೆ, ಅಕ್ಷರ್ ಪಟೇಲ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 41 ಮತ್ತು 50 ನೇ ಓವರ್‌ಗಳ ನಡುವೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ ಎರಡನೇ ಭಾರತೀಯ ಸ್ಪಿನ್ನರ್ ಎನಿಸಿಕೊಂಡರು. ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ 13 ವರ್ಷಗಳ ಹಿಂದೆ 2013 ರಲ್ಲಿ ಈ ಸಾಧನೆ ಮಾಡಿದ್ದರು. ಜಡೇಜಾ 2013 ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಶ್ರೀಲಂಕಾ ವಿರುದ್ಧದ ಕೊನೆಯ ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು(PC-BCCI X).

Loading...
Unable to load recommendations.
Follow Us