IND vs ENG 2nd Test: ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯದ ಪಿಚ್ ನಿಗೂಢ: ತಲೆಕೆಡಿಸಿಕೊಂಡ ರೋಹಿತ್-ದ್ರಾವಿಡ್

|

Updated on: Jan 30, 2024 | 10:09 AM

IND vs ENG 2nd Test Pitch Report: ವಿಶಾಖಪಟ್ಟಣಂನ ಡಾ ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂ ಈವರೆಗೆ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದೆ. ವಿಶಾಖಪಟ್ಟಣದ ಪಿಚ್‌ನಲ್ಲಿ ಬ್ಯಾಟ್ಸ್‌ಮನ್ ಅಥವಾ ಬೌಲರ್ ಯಾರು ಸಹಾಯ ಪಡೆಯುತ್ತಾರೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದು ರೋಹಿತ್-ದ್ರಾವಿಡ್​ಗೆ ತಲೆನೋವಾಗಿದೆ.

1 / 6
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋತ ನಂತರ, ಟೀಮ್ ಇಂಡಿಯಾ ಗೆಲುವಿನ ಮೂಲಕ ಕಮ್​ಬ್ಯಾಕ್ ಮಾಡುವುದರ ಮೇಲೆ ಮೇಲೆ ಕಣ್ಣಿಟ್ಟಿದೆ. ಎರಡನೇ ಟೆಸ್ಟ್ ಫೆಬ್ರವರಿ 2 ರಿಂದ ವೈಜಾಗ್‌ನ ಡಾ. ವೈಎಸ್ ರಾಜಶೇಖರ ರೆಡ್ಟಿ ಕ್ರೀಡಾಂಗಣದಲ್ಲಿ ನಡೆಯಲಿದೆ.

2 / 6
ಮೊದಲ ಟೆಸ್ಟ್‌ನಲ್ಲಿ ನಿಧಾನಗತಿಯ ಪಿಚ್‌ನಿಂದಾಗಿ ಭಾರತ ತಂಡ ಮತ್ತೊಮ್ಮೆ ಸೋಲನ್ನು ಎದುರಿಸಬೇಕಾಯಿತು. ಈ ಹಿಂದೆ ವಿಶ್ವಕಪ್‌ನಲ್ಲೂ ನಿಧಾನಗತಿಯ ಪಿಚ್‌ನಿಂದಾಗಿ ಟೀಮ್ ಇಂಡಿಯಾ ಪ್ರಶಸ್ತಿ ಕಳೆದುಕೊಂಡಿದ್ದು ಗೊತ್ತೇ ಇದೆ. ಇದೀಗ ಇಂಡೋ-ಇಂಗ್ಲೆಂಡ್ ಎರಡನೇ ಟೆಸ್ಟ್‌ಗಾಗಿ ವಿಶಾಖಪಟ್ಟಣಂನ ಪಿಚ್ ಕೂಡ ನಿಗೂಢವಾಗಿದೆ.

3 / 6
ವಿಶಾಖಪಟ್ಟಣಂನ ಡಾ ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂ ಈವರೆಗೆ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದೆ. ವಿಶಾಖಪಟ್ಟಣದ ಪಿಚ್‌ನಲ್ಲಿ ಬ್ಯಾಟ್ಸ್‌ಮನ್ ಅಥವಾ ಬೌಲರ್ ಯಾರು ಸಹಾಯ ಪಡೆಯುತ್ತಾರೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದು ರೋಹಿತ್-ದ್ರಾವಿಡ್​ಗೆ ತಲೆನೋವಾಗಿದೆ.

4 / 6
ನಿಧಾನಗತಿಯ ಪಿಚ್‌ಗಳಲ್ಲಿ ಹೈದರಾಬಾದ್ ಅಥವಾ ಅಹಮದಾಬಾದ್ ಆಗಿರಲಿ, ಭಾರತದ ಬ್ಯಾಟ್ಸ್‌ಮನ್‌ಗಳು ಕಷ್ಟಪಟ್ಟಿದ್ದಾರೆ. ಆದಾಗ್ಯೂ, ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ತಮ್ಮ ಹೊಸ ಬೇಸ್‌ಬಾಲ್ ವಿಧಾನದಲ್ಲಿ ಹೇಗೆ ಆಡುತ್ತಾರೆಂದು ಹೇಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡಕ್ಕೆ ಒಂದೇ ಒಂದು ಆಯ್ಕೆ ಸ್ಪಿನ್ ಮಾತ್ರ ಆಗಿದೆ.

5 / 6
ಪಂದ್ಯಕ್ಕೂ ಮುನ್ನ ವೈಜಾಗ್ ಪಿಚ್ ಊಹಿಸುವುದು ಕಷ್ಟ. ಇಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳು ನಡೆದಿವೆ. ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 478, ಎರಡನೇ ಇನಿಂಗ್ಸ್‌ನ ಸರಾಸರಿ 343, ಮೂರನೇ ಇನ್ನಿಂಗ್ಸ್‌ನ ಸರಾಸರಿ 263 ಮತ್ತು ನಾಲ್ಕನೇ ಇನಿಂಗ್ಸ್‌ನ ಸರಾಸರಿ 174 ಆಗಿದೆ.

6 / 6
ವಿಶಾಖಪಟ್ಟಣಂನ ಡಾ ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡೂ ಟೆಸ್ಟ್ ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಸಾಮಾನ್ಯವಾಗಿ ಇದು ಸ್ಪಾಟ್ ಪಿಚ್ ಆಗಿರಬಹುದು ಎಂದು ನಂಬಲಾಗಿದೆ. ಅದೇನೆ ಇದ್ದರೂ ಪಂದ್ಯ ಆರಂಭವಾಗದ ಬಳಿಕವಷ್ಟೆ ಸ್ಪಷ್ಟ ಚಿತ್ರಣ ಸಿಗಲಿದೆ.