AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?: ಇಲ್ಲಿದೆ ಸಂಪೂರ್ಣ ಮಾಹಿತಿ

India vs Nepal Asia Cup 2023: ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ನೇಪಾಳ ವಿರುದ್ಧ ಆಡಲಿದೆ. ಈ ಮ್ಯಾಚ್ ಸೆಪ್ಟೆಂಬರ್ 4 ಸೋಮವಾರದಂದು ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

Vinay Bhat
|

Updated on: Sep 03, 2023 | 7:30 AM

Share
ಏಷ್ಯಾಕಪ್ 2023 ರಲ್ಲಿ ಭಾರತದ ಅಭಿಯಾನ ಸರಿಯಾಗಿ ಆರಂಭವಾಗಿಲ್ಲ. ಶನಿವಾರ ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಇಂಡಿಯಾ- ಪಾಕಿಸ್ತಾನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಟೀಮ್ ಇಂಡಿಯಾದ ಬ್ಯಾಟಿಂಗ್ ಇನ್ನಿಂಗ್ಸ್​ಗೆ ಪಂದ್ಯ ಅಂತ್ಯಗೊಂಡಿತು. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿದೆ.

1 / 8
ಇದೀಗ ಭಾರತಕ್ಕೆ ಮುಂದಿನ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಗುಂಪು ಹಂತದಲ್ಲಿ ಕೊನೆಯ ಪಂದ್ಯ ಆಡಲಿರುವ ಟೀಮ್ ಇಂಡಿಯಾ ಸೂಪರ್ 4 ಹಂತಕ್ಕೆ ಏರಬೇಕಾದರೆ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಹಾಗಾದರೆ ರೋಹಿತ್ ಪಡೆಯ ಮುಂದಿನ ಯಾವಾಗ?, ಯಾರ ವಿರುದ್ಧ? ಎಂಬುದನ್ನು ನೋಡೋಣ.

2 / 8
ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ನೇಪಾಳ ವಿರುದ್ಧ ಆಡಲಿದೆ. ಈ ಮ್ಯಾಚ್ ಸೆಪ್ಟೆಂಬರ್ 4 ಸೋಮವಾರದಂದು ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

3 / 8
ಭಾರತ ಹಾಗೂ ಪಾಕಿಸ್ತಾನ ಪಂದ್ಯ ಮಳೆಯಿಂದ ರದ್ದಾಯಿತು. ಅದೇರೀತಿ ಸೆಪ್ಟೆಂಬರ್‌ 4 ರಂದು ನಡೆಯುವ ಭಾರತ ಮತ್ತು ನೇಪಾಳ ನಡುವಿನ ಪಂದ್ಯಕ್ಕೂ ವರುಣನ ಕಾಟ ಇರಲಿದೆ ಎಂದು ಹೇಳಲಾಗಿದೆ. ಪಂದ್ಯ ನಡೆಯುವ ಸಂದರ್ಭ ಶೇ. 76 ರಷ್ಟು ಮಳೆಯಾಗುವ ಸಾಧ್ಯತೆ ಇದೆಯಂತೆ.

4 / 8
ಹಾಗೊಂದು ವೇಳೆ ಭಾರತ ಹಾಗೂ ನೇಪಾಳ ನಡುವಣ ಪಂದ್ಯ ಕೂಡ ಮಳೆಯಿಂದ ರದ್ದಾದರೆ ಮತ್ತೆ ಒಂದೊಂದು ಅಂಕ ನೀಡಲಾಗುತ್ತಿದೆ. ಆದ ಭಾರತ ಒಟ್ಟು 2 ಪಾಯಿಂಟ್​ನೊಂದಿಗೆ ಸೂಪರ್ 4 ಹಂತಕ್ಕೆ ತೇರ್ಗಡೆ ಆಗುತ್ತದೆ. ಒಂದುವೇಳೆ ಟೀಮ್ ಇಂಡಿಯಾ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಮುಂದಿನ ಮ್ಯಾಚ್​ನಲ್ಲಿ ರೋಹಿತ್ ಪಡೆ ಗೆಲ್ಲಬೇಕು ಅಥವಾ ಪಂದ್ಯ ರದ್ದಾಗಬೇಕು.

5 / 8
ಪಾಕ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ಅಗ್ರ 4 ಬ್ಯಾಟರ್​ಗಳು ಬಂದ ಬೆನ್ನಲ್ಲೇ ಪೆವಿಲಿಯನ್ ಹಾದಿ ಹಿಡಿದರು. ನಾಯಕ ರೋಹಿತ್ ಶರ್ಮಾ 11, ಗಿಲ್ 10, ವಿರಾಟ್ ಕೊಹ್ಲಿ 4 ಹಾಗೂ ಶ್ರೇಯಸ್ ಅಯ್ಯರ್ 14 ರನ್​ಗೆ ಬ್ಯಾಟ್ ಕೆಳಗಿಟ್ಟರು.

6 / 8
ಆದರೆ, ಐದನೇ ವಿಕೆಟ್​ಗೆ ಜೊತೆಯಾದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಬೊಂಬಾಟ್ ಜೊತೆಯಾಟ ಆಡಿದರು. 66 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭ ಒಂದಾದ ಇವರಿಬ್ಬರು ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು. ಒಟ್ಟು 138 ರನ್​ಗಳ ಕಾಣಿಕೆ ನೀಡಿದರು. ಕಿಶನ್ 81 ಎಸೆತಗಳಲ್ಲಿ 9 ಫೋರ್ 2 ಸಿಕ್ಸರ್​ನೊಂದಿಗೆ 82 ರನ್ ಸಿಡಿಸಿದರು.

7 / 8
ಹಾರ್ದಿಕ್ 90 ಎಸೆತಗಳಲ್ಲಿ 7 ಫೋರ್, 1 ಸಿಕ್ಸರ್ ಬಾರಿಸಿ 87 ರನ್​ಗೆ ಔಟಾದರು. ಇವರಿಬ್ಬರ ನಿರ್ಗಮನದ ಬಳಿಕ ಭಾರತ ದಿಢೀರ್ ಕುಸಿತ ಕಂಡಿತು. ಜಡೇಜಾ 14, ಥಾಕೂರ್ 3, ಕುಲ್ದೀಪ್ 4, ಬುಮ್ರಾ 16 ರನ್​ ಗಳಿಸಿದರು. ಭಾರತ 48.5 ಓವರ್​ಗಳಲ್ಲಿ 266 ರನ್​ಗಳಿಗೆ ಆಲೌಟ್ ಆಯಿತು. ಪಾಕ್ ಪರ ಅಫ್ರಿದಿ 4, ನಸೀಂ ಹಾಗೂ ರೌಫ್ ತಲಾ 3 ವಿಕೆಟ್ ಪಡೆದರು.

8 / 8