IND vs SA: ಕೊಹ್ಲಿ ದಾಖಲೆ ಪುಡಿಪುಡಿ; ಏಕದಿನ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ಶ್ರೇಯಸ್ ಅಯ್ಯರ್..!
TV9 Web | Updated By: ಪೃಥ್ವಿಶಂಕರ
Updated on:
Oct 07, 2022 | 2:58 PM
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಅರ್ಧಶತಕಕ್ಕೂ ಮುನ್ನ ಶ್ರೇಯಸ್, ವೆಸ್ಟ್ ಇಂಡೀಸ್ ವಿರುದ್ಧ ಕ್ರಮವಾಗಿ 80, 54, 63 ಮತ್ತು 44 ರನ್ ಗಳಿಸಿದ್ದರು. ಅವರು ಕಳೆದ ಐದು ಏಕದಿನ ಇನ್ನಿಂಗ್ಸ್‌ಗಳಲ್ಲಿ ಒಟ್ಟು 291 ರನ್ ಗಳಿಸಿದ್ದಾರೆ.
1 / 5
ಟೀಂ ಇಂಡಿಯಾ ರನ್ ಚೇಸ್ ಮಾಡುವಾಗಲೆಲ್ಲ ಅಯ್ಯರ್ ಅವರ ಸರಾಸರಿ ಉತ್ತಮವಾಗಿದೆ. ESPNcricinfo ವೆಬ್‌ಸೈಟ್‌ನ ವರದಿಯ ಪ್ರಕಾರ, ತಂಡ ಗುರಿಯನ್ನು ಬೆನ್ನಟ್ಟುವಾಗ ಅಯ್ಯರ್ ಅವರು 50 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿರುವುದು ಉಲ್ಲೇಖವಾಗಿದೆ.
2 / 5
ಅಯ್ಯರ್ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು, 135.14 ಸ್ಟ್ರೈಕ್ ರೇಟ್ನಲ್ಲಿ 37 ಎಸೆತಗಳನ್ನು ಎದುರಿಸಿ, ಎಂಟು ಬೌಂಡರಿ ಒಳಗೊಂಡಂತೆ 50 ರನ್ ಗಳಿಸಿದರು.
3 / 5
ಅಕ್ಟೋಬರ್ 9 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಅಯ್ಯರ್ ಅಜೇಯ 113 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 278 ರನ್‌ಗಳ ಬೆನ್ನತ್ತಿದ್ದು, ಅಯ್ಯರ್ ಅವರ ಇನ್ನಿಂಗ್ಸ್‌ನ ಆಧಾರದ ಮೇಲೆ ತಂಡಕ್ಕೆ ಜಯ ಒಲಿಯಿತು.
4 / 5
ಈ ಇನ್ನಿಂಗ್ಸ್ಗೂ ಮೊದಲು ಅಯ್ಯರ್ ಎರಡನೇ ಸ್ಥಾನದಲ್ಲಿದ್ದರು. ಈಗ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರನ್ನು ಹಿಂದಿಕ್ಕುವಲ್ಲಿ ಅಯ್ಯರ್ ಯಶಸ್ವಿಯಾಗಿದ್ದಾರೆ. ಈ ಇಬ್ಬರೂ ಆಟಗಾರರು ಮೊದಲ 28 ODI ಇನ್ನಿಂಗ್ಸ್‌ಗಳಲ್ಲಿ ತಲಾ10 ಅರ್ಧಶತಕಗಳನ್ನು ಬಾರಿಸಿದ್ದಾರೆ.
5 / 5
ಟಿ20 ವಿಶ್ವಕಪ್‌ಗೆ ಶ್ರೇಯಸ್ ಅಯ್ಯರ್ ತಂಡದಲ್ಲಿ ಆಯ್ಕೆಯಾಗದೇ ಇರಬಹುದು, ಆದರೆ ಏಕದಿನ ಕ್ರಿಕೆಟ್‌ನಲ್ಲಿ ಅವರು ಬ್ಯಾಟಿಂಗ್ ಅದ್ಭುತವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಅರ್ಧಶತಕಕ್ಕೂ ಮುನ್ನ ಅವರು ವೆಸ್ಟ್ ಇಂಡೀಸ್ ವಿರುದ್ಧ ಕ್ರಮವಾಗಿ 80, 54, 63 ಮತ್ತು 44 ರನ್ ಗಳಿಸಿದ್ದರು. ಅವರು ಕಳೆದ ಐದು ಏಕದಿನ ಇನ್ನಿಂಗ್ಸ್‌ಗಳಲ್ಲಿ ಒಟ್ಟು 291 ರನ್ ಗಳಿಸಿದ್ದಾರೆ.