IND vs SA: 6 ವರ್ಷಗಳಲ್ಲಿ ಬದಲಾದ ಟೀಂ ಇಂಡಿಯಾ; 9 ಆಟಗಾರರ ವೃತ್ತಿಜೀವನ ಅಂತ್ಯ

IND vs SA: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ನವೆಂಬರ್ 15 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ. ಭಾರತ 2-1 ಅಂತರದಲ್ಲಿ ಮುನ್ನಡೆಯಲ್ಲಿದೆ. 2018 ರ ನಂತರ ಭಾರತ ಮತ್ತೆ ಜೋಹಾನ್ಸ್‌ಬರ್ಗ್‌ನಲ್ಲಿ ಟಿ20 ಪಂದ್ಯ ಆಡುತ್ತಿದೆ. ಹಿಂದಿನ ಪಂದ್ಯದಲ್ಲಿ ಆಡಿದ ಭಾರತ ತಂಡದ 11 ಆಟಗಾರರಲ್ಲಿ 9 ಜನರ ಟಿ20 ವೃತ್ತಿಜೀವನ ಮುಗಿದಿದೆ.

ಪೃಥ್ವಿಶಂಕರ
|

Updated on: Nov 15, 2024 | 6:33 PM

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4 ಪಂದ್ಯಗಳ ಟಿ20 ಸರಣಿ ಇಂದು ಅಂದರೆ ನವೆಂಬರ್ 15 ರಂದು ಕೊನೆಗೊಳ್ಳಲಿದೆ. ಇಲ್ಲಿಯವರೆಗೆ 3 ಪಂದ್ಯಗಳು ನಡೆದಿದ್ದು, ಇದರಲ್ಲಿ 2 ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ 2-1 ರ ಮುನ್ನಡೆ ಸಾಧಿಸಿದೆ. ಇದೀಗ ಸರಣಿಯ ನಾಲ್ಕನೇ ಮತ್ತು ಕೊನೆಯ ಪಂದ್ಯ ನವೆಂಬರ್ 15 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ.

1 / 6
ಈ ಮೈದಾನದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕೊನೆಯ ಪಂದ್ಯ ಫೆಬ್ರವರಿ 2018 ರಲ್ಲಿ ನಡೆದಿತ್ತು. ಇದೀಗ ಭಾರತ ತಂಡ 6 ವರ್ಷಗಳ ಬಳಿಕ ಇದೇ ಮೈದಾನದಲ್ಲಿ ಟಿ20 ಪಂದ್ಯವನ್ನು ಆಡಲಿದೆ. ಈ 6 ವರ್ಷಗಳಲ್ಲಿ ಬಹುತೇಕ ಇಡೀ ಟೀಂ ಇಂಡಿಯಾ ಬದಲಾಗಿದೆ. ಕಳೆದ ಬಾರಿ ಇದೇ ಮೈದಾನದಲ್ಲಿ ಆಡಿದ 11 ಆಟಗಾರರ ಪೈಕಿ 9 ಆಟಗಾರರ ಟಿ20 ವೃತ್ತಿಜೀವನ ಬಹುತೇಕ ಮುಗಿದಿದೆ. ಕೆಲವರು ನಿವೃತ್ತರಾಗಿದ್ದರೆ, ಕೆಲವು ಆಟಗಾರರ ಪುನರಾಗಮನದ ಭರವಸೆ ಕೊನೆಗೊಂಡಿದೆ.

2 / 6
ಮೇಲೆ ಹೇಳಿದಂತೆ 6 ವರ್ಷಗಳ ನಂತರ ಭಾರತ ತಂಡ ಟಿ20 ಪಂದ್ಯ ಆಡಲು ಜೋಹಾನ್ಸ್‌ಬರ್ಗ್‌ಗೆ ಬಂದಿದೆ. 2018ರಲ್ಲಿ ಟೀಂ ಇಂಡಿಯಾ ಇಲ್ಲಿ ಆಡಿದ್ದಾಗ ವಿರಾಟ್ ಕೊಹ್ಲಿ ತಂಡದ ನಾಯಕರಾಗಿದ್ದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಸುರೇಶ್ ರೈನಾ 3 ಮತ್ತು ವಿರಾಟ್ ಕೊಹ್ಲಿ 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ್ದರು.

3 / 6
ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ, ಎಂಎಸ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡಿದ್ದರೆ, ಮತ್ತೊಂದೆಡೆ, ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕಟ್, ಜಸ್ಪ್ರೀತ್ ಬುಮ್ರಾ ಮತ್ತು ಯುಜ್ವೇಂದ್ರ ಚಾಹಲ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದರು. ಈ 11 ಆಟಗಾರರ ಪೈಕಿ 9 ಆಟಗಾರರ ಟಿ20 ವೃತ್ತಿಜೀವನ ಬಹುತೇಕ ಮುಗಿದಿದೆ. ಪಾಂಡ್ಯ ಮತ್ತು ಬುಮ್ರಾ ಮಾತ್ರ ಇನ್ನೂ ತಂಡದಲ್ಲಿ ಆಡುತ್ತಿದ್ದಾರೆ.

4 / 6
ಧೋನಿ, ರೈನಾ, ರೋಹಿತ್, ವಿರಾಟ್ ಮತ್ತು ಧವನ್ ಮಾತ್ರ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದರೆ, ಉಳಿದ ಆಟಗಾರರು ತಂಡಕ್ಕೆ ಮರಳುವ ಸಾಧ್ಯತೆ ಇಲ್ಲ. ತಂಡದ ಆಡಳಿತ ಮಂಡಳಿ ಯುವ ಮುಖಗಳಿಗೆ ನಿರಂತರವಾಗಿ ಅವಕಾಶಗಳನ್ನು ನೀಡುತ್ತಿದೆ. ಹೀಗಿರುವಾಗ ಮನೀಷ್, ಭುವನೇಶ್ವರ್, ಉನದ್ಕಟ್, ಚಾಹಲ್ ಟಿ20 ತಂಡಕ್ಕೆ ಮರಳುವ ಸಾಧ್ಯತೆ ಕಾಣುತ್ತಿಲ್ಲ.

5 / 6
ಇನ್ನು 2018ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 28 ರನ್‌ಗಳಿಂದ ಗೆದ್ದಿತ್ತು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ ಕೇವಲ 175 ರನ್ ಗಳಿಸಲಷ್ಟೇ ಶಕ್ತವಾಯಿತು.

6 / 6
Follow us