
2026 ರ ಏಷ್ಯನ್ ಕ್ರೀಡಾಕೂಟದ ಕ್ರಿಕೆಟ್ ಫೈನಲ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾವನ್ನು 147 ರನ್‌ಗಳಿಂದ ಸೋಲಿಸಿತು. ಈ ವಿಜಯದೊಂದಿಗೆ ಭಾರತ ತಂಡಕ್ಕೆ ಚಿನ್ನದ ಪದಕವೂ ಲಭಿಸಿತು. ಈ ಬಾರಿಯ ಕ್ರೀಡಾಕೂಟದಲ್ಲಿ ಭಾರಕ್ಕೆ ಧಕ್ಕಿದ ಮೊದಲ ಚಿನ್ನದ ಪದಕವೂ ಇದಾಗಿದೆ(PC-BCCI Women x).
ಟೀಂ ಇಂಡಿಯಾದ ಈ ವಿಜಯದ ಬಳಿಕ ತಂಡದಲ್ಲಿ ಆಡಿದ್ದ ತಮಿಳುನಾಡಿನ ಮಧುರೈ ನಿವಾಸಿ ಜಿ ಕಮಲಿನಿ ಅವರಿಗೆ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ 75 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಈ ಅಮೋಘ ಗೆಲುವಿಗೆ ಭಾರತ ತಂಡವನ್ನು ಅಭಿನಂದಿಸಿದ ವಿಜಯ್, ಕಮಲಿನಿಯ ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ(PC-PTI).
ಕಮಲಿನಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ವಿಜಯ್, ‘ತಮಿಳುನಾಡು ಸರ್ಕಾರವು ಯಾವಾಗಲೂ ಪ್ರತಿಭಾನ್ವಿತ ಕ್ರೀಡಾಪಟುಗಳ ಹಿಂದೆ ದೃಢವಾಗಿ ನಿಲ್ಲುತ್ತದೆ. ಕಮಲಿನಿಯ ಯಶಸ್ಸು ರಾಜ್ಯದ ಯುವ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಹೊಸ ಸ್ಫೂರ್ತಿಯಾಗಲಿದೆ’ ಎಂದಿದ್ದಾರೆ(PC-PTI).
ಭಾರತ ಮಹಿಳಾ ತಂಡವು ಏಷ್ಯನ್ ಕ್ರೀಡಾಕೂಟದಲ್ಲಿ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದಿದೆ. ಇದಕ್ಕೂ ಮೊದಲು, 2022 ರ ಹ್ಯಾಂಗ್‌ಝೌ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಕ್ರಿಕೆಟ್‌ನಲ್ಲಿ ಚಿನ್ನದ ಪದಕ ಗೆದ್ದಿತ್ತು(PC-BCCI Women x).
ಇನ್ನು 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಜಪಾನ್ ವಿರುದ್ಧ 8 ವಿಕೆಟ್‌ಗಳ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿದ್ದ ಭಾರತ ನಂತರ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 114 ರನ್‌ಗಳಿಂದ ಸೋಲಿಸಿ ಫೈನಲ್ ತಲುಪಿತ್ತು(PC-BCCI Women x).