- Kannada News Photo gallery Cricket photos Indian Cricket Players Salary Full List Updated With All Inclusive
5,6,7,15 ಲಕ್ಷ; ವಿಶ್ವಕಪ್ ಗೆದ್ದರೇ ದುಪ್ಪಟ್ಟು! ಪ್ರತಿ ಪಂದ್ಯಕ್ಕೆ ಬಿಸಿಸಿಐ ನೀಡುವ ಸಂಬಳ ಎಷ್ಟು ಗೊತ್ತಾ?
BCCI: ಒಪ್ಪಂದಕ್ಕೆ ಒಳಪಡದ ಆಟಗಾರರು ಟೀಂ ಇಂಡಿಯಾ ಪರ ಪಂದ್ಯವನ್ನು ಆಡಿದರೆ ಅವರಿಗೂ ಸಹ ಒಪ್ಪಂದಕ್ಕೆ ಒಳಪಟ್ಟಿರುವ ಆಟಗಾರರಿಗೆ ನೀಡುವಷ್ಟೇ ಪಂದ್ಯ ಶುಲ್ಕವನ್ನು ಪಾವತಿಸಲಾಗುತ್ತದೆ.
Updated on:Mar 29, 2023 | 4:51 PM

ಕ್ರಿಕೆಟಿಗನಿಗೆ ಒಮ್ಮೆ ಟೀಂ ಇಂಡಿಯಾದ ಕದ ತೆರೆದರೆ ಸಾಕು. ಆತ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿಬಿಡುತ್ತಾನೆ. ಏಕೆಂದರೆ ದೇಶವನ್ನು ಪ್ರತಿನಿಧಿಸುವ ಆಟಗಾರನಿಗೆ ವಾರ್ಷಿಕ ಒಪ್ಪಂದದ ಹೊರತಾಗಿಯೂ ಬಿಸಿಸಿಐ ಪ್ರತಿ ಪಂದ್ಯಕ್ಕೂ ಲಕ್ಷ ಲಕ್ಷ ಸಂಬಳ ಎಣಿಸುತ್ತದೆ.

ಬಿಸಿಸಿಐ ಒಪ್ಪಂದಕ್ಕೊಳಪಡುವ ಆಟಗಾರನನ್ನು ನಾಲ್ಕು ವಿಭಾಗಗಳಿವೆ ವಿಂಗಡಿಸಲಾಗುತ್ತದೆ. ಇದರಲ್ಲಿ ಎ+ ವರ್ಗಕ್ಕೆ 7 ಕೋಟಿ, ಎ ವರ್ಗಕ್ಕೆ 5 ಕೋಟಿ, ಬಿ ವರ್ಗಕ್ಕೆ 3 ಕೋಟಿ ಮತ್ತು ಸಿ ವರ್ಗಕ್ಕೆ ಸೇರಿದ ಆಟಗಾರನಿಗೆ 1 ಕೋಟಿ ರೂ. ಸಂಭಾವನೆ ನೀಡಲಾಗುತ್ತದೆ.

ಒಪ್ಪಂದದ ಹೊರತಾಗಿ, ಆಟಗಾರರಿಗೆ ಪಂದ್ಯ ಶುಲ್ಕವನ್ನು ಸಹ ಪಾವತಿಸಲಾಗುತ್ತದೆ. ಒಪ್ಪಂದಕ್ಕೆ ಒಳಪಡದ ಆಟಗಾರರು ಟೀಂ ಇಂಡಿಯಾ ಪರ ಪಂದ್ಯವನ್ನು ಆಡಿದರೆ ಅವರಿಗೂ ಸಹ ಒಪ್ಪಂದಕ್ಕೆ ಒಳಪಟ್ಟಿರುವ ಆಟಗಾರರಿಗೆ ನೀಡುವಷ್ಟೇ ಪಂದ್ಯ ಶುಲ್ಕವನ್ನು ಪಾವತಿಸಲಾಗುತ್ತದೆ. ಇದರಡಿಯಲ್ಲಿ ಒಂದು ಟೆಸ್ಟ್‌ಗೆ 15 ಲಕ್ಷ, ಏಕದಿನಕ್ಕೆ 6 ಲಕ್ಷ ಮತ್ತು ಟಿ20ಗೆ 3 ಲಕ್ಷ ರೂ. ಪಂದ್ಯ ಶುಲ್ಕ ನೀಡಲಾಗುತ್ತದೆ.

ಇಷ್ಟೆ ಅಲ್ಲದೆ ಬಿಸಿಸಿಐ ಆಟಗಾರರಿಗೆ ಬೋನಸ್ ಕೂಡ ನೀಡುತ್ತದೆ. ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ದ್ವಿಶತಕ ಸಿಡಿಸಿದ ಆಟಗಾರರಿಗೆ 7 ಲಕ್ಷ ರೂ. ಏಕದಿನ ಹಾಗೂ ಟೆಸ್ಟ್‌ನಲ್ಲಿ ಶತಕ ಸಿಡಿಸುವ ಆಟಗಾರರಿಗೆ 5 ಲಕ್ಷ, ಟೆಸ್ಟ್‌ನಲ್ಲಿ 10 ವಿಕೆಟ್ ಪಡೆದ ಆಟಗಾರರಿಗೆ 7 ಲಕ್ಷ ರೂ. ಅಲ್ಲದೆ, ಏಕದಿನ ಮತ್ತು ಟೆಸ್ಟ್‌ನಲ್ಲಿ ಐವರು ಆಟಗಾರರನ್ನು ವಜಾ ಮಾಡಿದವರಿಗೆ 5 ಲಕ್ಷ ರೂ. ಬೋನಸ್ ನೀಡಲಾಗುತ್ತದೆ.

ಅಲ್ಲದೆ ಇಡೀ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನಿಗೂ ಬಿಸಿಸಿಐ ಬೋನಸ್ ನೀಡುತ್ತದೆ. ಇದರಡಿಯಲ್ಲಿ ತಂಡವು ದೊಡ್ಡ ಗೆಲುವು ಸಾಧಿಸಿದರೆ ಎಲ್ಲಾ ಆಟಗಾರರು ಹಣ ಪಡೆಯುತ್ತಾರೆ. ಅದರಲ್ಲೂ ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಮೂರು ಸ್ಥಾನ ಪಡೆದಿರುವ ತಂಡಗಳ ವಿರುದ್ಧ ಟೆಸ್ಟ್ ಪಂದ್ಯವನ್ನು ಗೆದ್ದರೆ ಪಂದ್ಯ ಶುಲ್ಕದಲ್ಲಿ ಶೇಕಡಾ 50 ರಷ್ಟು ಹೆಚ್ಚಳವಾಗುತ್ತದೆ. ಸರಣಿ ಗೆಲುವಿನ ಮೇಲೆ ಶೇಕಡಾ 100 ಶುಲ್ಕ ಹೆಚ್ಚಳವಾಗುತ್ತದೆ. ಹಾಗೆಯೇ ಏಕದಿನ ಅಥವಾ ಟಿ20 ವಿಶ್ವಕಪ್ ಗೆದ್ದರೆ ಶೇಕಡಾ 300 ರಷ್ಟು ವೇತನ ಹೆಚ್ಚಳವಾಗುತ್ತದೆ.
Published On - 4:51 pm, Wed, 29 March 23




