- Kannada News Photo gallery Cricket photos IPL 2021: Alex Hartley Backs Virat Kohli Led RCB to Win IPL 2021
IPL 2021: ಈ ಸಲ ಕಪ್ ನಮ್ದೆ ಎಂದ RCB ತಂಡದ ಬಿಗ್ ಫ್ಯಾನ್
IPL 2021 Phase 2: 2016 ರಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ಪರ ಪದಾರ್ಪಣೆ ಮಾಡಿದ್ದ ಎಡಗೈ ಬೌಲರ್ ಅಲೆಕ್ಸಾಂಡ್ರಾ 28 ಪಂದ್ಯಗಳನ್ನಾಡಿ 39 ವಿಕೆಟ್ ಪಡೆದಿದ್ದಾರೆ. ಹಾಗೆಯೇ 4 ಟಿ20 ಪಂದ್ಯಗಳಿಂದ 3 ವಿಕೆಟ್ ಕಬಳಿಸಿದ್ದಾರೆ.
Updated on: Sep 05, 2021 | 4:04 PM

ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧ ರಂಗೇರಲು ಇನ್ನು ವಾರಗಳು ಮಾತ್ರ ಉಳಿದಿವೆ. ಈಗಾಗಲೇ ಬಹುತೇಕ ತಂಡಗಳು ಯುಎಇನತ್ತ ಪ್ರಯಾಣ ಬೆಳೆಸಿ ಅಭ್ಯಾಸವನ್ನೂ ಆರಂಭಿಸಿದೆ. ಇದರ ಬೆನ್ನಲ್ಲೇ ಅಭಿಮಾನಿಗಳ ನಡುವೆ ಕೂಡ ಸೋಷಿಯಲ್ ಮೀಡಿಯಾ ಫೈಟ್ ಶುರುವಾಗಿದೆ. ಅತ್ತ ಆರ್ಸಿಬಿ ತಂಡದ ಅಪ್ಪಟ ಅಭಿಮಾನಿ ಇಂಗ್ಲೆಂಡ್ನ ಅಲೆಕ್ಸಾಂಡ್ರಾ ಹಾರ್ಟ್ಲೀ ಕೂಡ ರಂಗಕ್ಕೆ ಇಳಿದಿದ್ದಾರೆ. ಅದು ಕೂಡ ಈ ಸಲ ಕಪ್ ನಮ್ದೆ ಎನ್ನುವ ಮೂಲಕ ಎಂಬುದು ವಿಶೇಷ.

ಹೌದು, ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಹಾರ್ಟ್ಲೀ ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ತಂಡದ ದೊಡ್ಡ ಫ್ಯಾನ್. ಈ ಹಿಂದಿನಿಂದಲೂ ಆರ್ಸಿಬಿ ಪರ ಟ್ವೀಟ್ ಮಾಡುತ್ತಾ ಬಂದಿರುವ ಇಂಗ್ಲೆಂಡ್ ಆಟಗಾರ್ತಿ ಹಲವು ಬಾರಿ ಅಭಿಮಾನಿಗಳೊಂದಿಗೆ ಸೇರಿ ಆರ್ಸಿಬಿ ಹೇಟರ್ಸ್ಗೆ ಬಿಸಿ ಮುಟ್ಟಿಸಿದ್ದರು. ಇದೀಗ ಐಪಿಎಲ್ ದ್ವಿತಿಯಾರ್ಧವನ್ನು ಎದುರು ನೋಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಐಪಿಎಲ್ ಶುರುವಾಗುವನ್ನು ಕಾಯುತ್ತಿರುವುದಾಗಿ ತಿಳಿಸಿ ಅಲೆಕ್ಸಾಂಡ್ರಾ ಹಾರ್ಟ್ಲೀ, ಈ ಸಲ ಕಪ್ ನಮ್ದೆ ಎಂದು ಟ್ವಿಟಿಸಿದ್ದಾರೆ. ಈ ಟ್ವೀಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆರ್ಸಿಬಿಯ ಇಂಗ್ಲೆಂಡ್ ಅಭಿಮಾನಿಯ ಕಪ್ ನಮ್ದೆ ಟ್ವೀಟ್ಗೆ ರಾಯಲ್ ಫ್ಯಾನ್ಸ್ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಎಲ್ಲಾ ಅಭಿಮಾನಿಗಳಂತೆ ಸೋತರೂ, ಗೆದ್ದರೂ ಆರ್ಸಿಬಿ ಎನ್ನುವ ಅಲೆಕ್ಸಾಂಡ್ರಾ ಈ ಹಿಂದೆ ತಂಡವು ಹೀನಾಯವಾಗಿ ಸೋತರೂ, ನಾವು ಪುಟಿದೇಳಲಿದ್ದೇವೆ ಎಂಬಾರ್ಥದಲ್ಲಿ ಪೋಸ್ಟ್ ಮಾಡಿ ಆರ್ಸಿಬಿ ಫ್ಯಾನ್ಸ್ ಅನ್ನು ಸಮಾಧಾನ ಪಡಿಸಿದ್ದರು. ಇದೀಗ ದ್ವಿತಿಯಾರ್ಧದ ಆರಂಭಕ್ಕೂ ಮುನ್ನ ಅಲೆಕ್ಸಾಂಡ್ರಾ ರಂಗಕ್ಕೆ ಇಳಿದಿದ್ದಾರೆ. ಅದು ಕೂಡ ಈ ಸಲ ಕಪ್ ನಮ್ದೆ ಎನ್ನುವ ಮೂಲಕ ಎಂಬುದು ವಿಶೇಷ.

2016 ರಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ಪರ ಪದಾರ್ಪಣೆ ಮಾಡಿದ್ದ ಎಡಗೈ ಬೌಲರ್ ಅಲೆಕ್ಸಾಂಡ್ರಾ 28 ಪಂದ್ಯಗಳನ್ನಾಡಿ 39 ವಿಕೆಟ್ ಪಡೆದಿದ್ದಾರೆ. ಹಾಗೆಯೇ 4 ಟಿ20 ಪಂದ್ಯಗಳಿಂದ 3 ವಿಕೆಟ್ ಕಬಳಿಸಿದ್ದಾರೆ.




