AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ದುಬೈನಲ್ಲಿ ಮುಂಬೈ ಪ್ಲೇಯರ್ಸ್ ತಂಗಿರುವ ಹೋಟೆಲ್​ನ ಒಂದು ದಿನದ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಾ!

IPL 2021 Phase 2: ದುಬೈನಲ್ಲಿ ಮುಂಬೈ ತಂಡದ ಆಟಗಾರರು ಇಸ್ಲ್ಯಾಂಡ್​ನ ಪ್ರಸಿದ್ಧ ಸ್ಯಾಂಟ್ ರೆಜಿಸ್ ಸಾದಿಯತ್ ರೆಸಾರ್ಟ್​ನಲ್ಲಿ ಉಳಿದುಕೊಳ್ಳುತ್ತಿದ್ದಾರೆ. ದುಬೈನಲ್ಲಿ ದುಬಾರಿ ಹೋಟೆಲ್​ಗಳ ಪಟ್ಟಿಯಲ್ಲಿ ಇದುಕೂಡ ಒಂದಾಗಿದ್ದು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.

TV9 Web
| Edited By: |

Updated on: Aug 14, 2021 | 11:23 AM

Share
ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2021) 14ನೇ ಆವೃತ್ತಿಗೆ ಮತ್ತೆ ಚಾಲನೆ ಸಿಗುತ್ತಿದ್ದು, ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಅಕ್ಟೋಬರ್ 13ರ ವರೆಗೆ ಒಟ್ಟು 31 ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆಯಲಿವೆ.

1 / 10
ಇದರ ಸಲುವಾಗಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಯುಎಇಗೆ ತಲುಪಿದೆ. ಪ್ರಮುಖ ಆಟಗಾರ ಇಶಾನ್ ಕಿಶನ್ ಸಾಮಾಜಿಕ ಜಾಲತಾಣದ ಮೂಲಕ ತಂಡ ಯುಎಇ ತಲುಪಿರುವುದನ್ನು ಖಾತರಿಪಡಿಸಿದ್ದಾರೆ.

2 / 10
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ಅವರ ಕಳಪೆ ಫಾರ್ಮ್ ರೋಹಿತ್ ಶರ್ಮಾ ಅವರನ್ನು ಚಿಂತೆಗೀಡು ಮಾಡಿದೆ. ಮೊದಲ ಹಂತದಲ್ಲಿ ಹಾರ್ದಿಕ್ 6 ಪಂದ್ಯಗಳಲ್ಲಿ ಕೇವಲ 52 ರನ್ ಮಾತ್ರ ಗಳಿಸಿದ್ದರು. ಇನ್ನು ಬೌಲಿಂಗ್​ ಮಾಡಲು ಸಂಪೂರ್ಣ ಫಿಟ್ ಆಗಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರ ಆಲ್​ರೌಂಡರ್ ಪ್ರದರ್ಶನದ ಬಗ್ಗೆ ಮುಂಬೈ ಹೆಚ್ಚು ಚಿಂತಿತವಾಗಿದೆ. ಇನ್ನು ಮುಂಬೈ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಸ್ಪೋಟಕ ಇನಿಂಗ್ಸ್​ ಕೂಡ ಅತ್ಯಗತ್ಯ. ಹೀಗಾಗಿ ದ್ವಿತಿಯಾರ್ಧದಲ್ಲಿ ಹಾರ್ದಿಕ್ ಕಂಬ್ಯಾಕ್​ನ್ನು ಮುಂಬೈ ಇಂಡಿಯನ್ಸ್​ ನಿರೀಕ್ಷಿಸುತ್ತಿದೆ.

3 / 10
ದುಬೈನಲ್ಲಿ ಮುಂಬೈ ತಂಡದ ಆಟಗಾರರು ಇಸ್ಲ್ಯಾಂಡ್​ನ ಪ್ರಸಿದ್ಧ ಸ್ಯಾಂಟ್ ರೆಜಿಸ್ ಸಾದಿಯತ್ ರೆಸಾರ್ಟ್​ನಲ್ಲಿ ಉಳಿದುಕೊಳ್ಳುತ್ತಿದ್ದಾರೆ. ದುಬೈನಲ್ಲಿರುವ ದುಬಾರಿ ಹೋಟೆಲ್​ಗಳ ಪಟ್ಟಿಯಲ್ಲಿ ಇದುಕೂಡ ಒಂದಾಗಿದ್ದು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.

4 / 10
ಅಬುದಾಬಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 20 ನಿಮಿಷಗಳಲ್ಲಿ ಸ್ಯಾಂಟ್ ರೆಜಿಸ್ ಸಾದಿಯತ್ ರೆಸಾರ್ಟ್ ಇದ್ದು, ಮುಂಬೈ ಆಟಗಾರರು ವಿಮಾನ ನಿಲ್ದಾಣದಿಂದ ನೇರವಾಗಿ ಇಲ್ಲಿಗೆ ತಲುಪಿದ್ದಾರೆ.

5 / 10
ಒಟ್ಟು 8 ಮಹಡಿಗಳ ಈ ಹೋಟೆಲ್​ನಲ್ಲಿ 312 ಕೊಠಡಿಗಳಿವೆ. 64 ಸ್ಯೂಟ್ಸ್ ಮತ್ತು 14 ಮೀಟಿಂಗ್ ರೂಮ್ಗಳಿವೆಯಂತೆ. ಅಚ್ಚರಿ ಎಂದರೆ ಈ ಹೋಟೆಲ್​ನ ಒಂದು ದಿನದ ಬಾಡಿಗೆ ಭಾರತ ಪ್ರಕಾರ ಬರೋಬ್ಬರಿ 25,000 ರೂ.

6 / 10
ಮುಂಬೈ ಇಂಡಿಯನ್ಸ್ ಆಟಗಾರರಿರುವ ಸ್ಯಾಂಟ್ ರೆಜಿಸ್ ಸಾದಿಯತ್ ರೆಸಾರ್ಟ್​ನಲ್ಲಿ ಸ್ಪಾ, ದೊಡ್ಡದಾದ ಇಂಡೋರ್ ಲ್ಯಾಪ್ ಪೂಲ್, ಅಥ್ಲೆಟಿಕ್ ಕ್ಲಬ್, ಔಟ್​ಡೋರ್ ಪೂಲ್, ಪ್ರೈವೇಟ್ ಬೀಚ್ ಸೇರಿದಂತೆ ನಾನಾ ಸೌಲಭ್ಯವಿದೆ.

7 / 10
ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ತಂಗಿರುವ ಹೋಟೆಲ್.

8 / 10
 ಇಂಗ್ಲೆಂಡ್​ನಿಂದ ಯುಎಇಗೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರು 6 ದಿನಗಳ ಕಾಲ ಕ್ವಾರಂಟೈನ್​ನಲ್ಲಿದ್ದರು. ಅದರಂತೆ ರೋಹಿತ್ ಶರ್ಮಾ ಸೆಪ್ಟೆಂಬರ್ 18 ರಂದು ಕ್ವಾರಂಟೈನ್​ ಮುಗಿಸಿ ಹೊರಬಂದಿದ್ದರು. ಇತ್ತ 10 ದಿನಗಳಿಗೂ ಹೆಚ್ಚಿನ ದಿನ ಮೈದಾನದಿಂದ ಹೊರಗುಳಿದಿದ್ದ ಕಾರಣ ರೋಹಿತ್ ಶರ್ಮಾ ಸಂಪೂರ್ಣ ಅಭ್ಯಾಸ ಆರಂಭಿಸಿ ಕಣಕ್ಕಿಳಿಯಲು ಬಯಸಿದ್ದಾರೆ.

9 / 10
ಇನ್ನೂ ಐಪಿಎಲ್ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಗಸ್ಟ್ 13ರಂದು ಐಪಿಎಲ್​ಗಾಗಿ ಯುಎಇಗೆ ತೆರಳಿದೆ. ಯುಎಇಗೆ ತೆರಳುವುದಕ್ಕೂ ಮುನ್ನ ಎಲ್ಲಾ 8 ತಂಡಗಳ ಆಟಗಾರರು ಕೋವಿಡ್-19 ವ್ಯಾಕ್ಸಿನೇಶನ್ ಮುಗಿಸಿರಬೇಕು ಎಂದು ಬಿಸಿಸಿಐ ಖಡಕ್ ಆಗಿ ಸೂಚಿಸಿದೆ.

10 / 10