IPL 2021: Rcb ಅಭಿಮಾನಿಗಳಿಗೆ ಗುಡ್​ ನ್ಯೂಸ್: ಸ್ಟಾರ್ ಆಟಗಾರರು ಮೊದಲ ಪಂದ್ಯಕ್ಕೆ ಲಭ್ಯ

IPL 2021: ಯುಎಇನಲ್ಲಿ ಕೊರೋನಾ ಕ್ವಾರಂಟೈನ್​ ನಿಯಮ ಜಾರಿಯಲಿದ್ದು, ಹೀಗಾಗಿ ವಿದೇಶದಿಂದ ಬರುವ ಆಟಗಾರರು 6 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಬೇಕು.

1/5
ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧಕ್ಕೆ ಸೆಪ್ಟೆಂಬರ್ 19 ರಿಂದ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ. ಇನ್ನು ಸೆಪ್ಟೆಂಬರ್ 20 ರಂದು ಕೆಕೆಆರ್​ ವಿರುದ್ದದ ಪಂದ್ಯದ ಮೂಲಕ ಆರ್​ಸಿಬಿ ಅಭಿಯಾನವನ್ನು ಆರಂಭಿಸಲಿದೆ.

2/5
ಆದರೆ ಈ ಪಂದ್ಯಕ್ಕೆ  ದುಷ್ಮಂತ್ ಚಮೀರಾ ಹಾಗೂ ವನಿಂದು ಹಸರಂಗ ಲಭ್ಯರಿರಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಯುಎಇನಲ್ಲಿ ಕೊರೋನಾ ಕ್ವಾರಂಟೈನ್​ ನಿಯಮ ಜಾರಿಯಲಿದ್ದು, ಹೀಗಾಗಿ ವಿದೇಶದಿಂದ ಬರುವ ಆಟಗಾರರು 6 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಬೇಕು.

3/5

ಪ್ರಸ್ತುತ ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್​ಸಿಬಿ ಮೊದಲ ಪಂದ್ಯವನ್ನು ಸೆಪ್ಟೆಂಬರ್ 20 ರಂದು ಕೆಕೆಆರ್ ವಿರುದ್ದ ಆಡಲಿದೆ. ಇನ್ನು ಆರ್​ಸಿಬಿ 7 ಪಂದ್ಯಗಳು ಉಳಿದಿದ್ದು ಅದರಲ್ಲಿ 3 ರಲ್ಲಿ ಜಯ ಸಾಧಿಸಿದರೆ ಪ್ಲೇ ಆಫ್ ಪ್ರವೇಶಿಸಬಹುದು.

4/5
ಆದರೀಗ ಈ ಆಟಗಾರರಿಗೆ ಕೇವಲ 2 ದಿನಗಳ ಕ್ವಾರಂಟೈನ್ ಮಾತ್ರ ಇರಲಿದೆ ಎಂದು ತಿಳಿದು ಬಂದಿದೆ. ಬಯೋ ಬಬಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿ ಆಡಿದ್ದರಿಂದ ಈ ಆಟಗಾರರಿಗೆ ಕ್ವಾರಂಟೈನ್​ನಲ್ಲಿ ವಿನಾಯಿತಿ ಸಿಗಲಿದೆ. ಅದರಂತೆ ಎರಡು ದಿನಗಳ ಕಾಲ ಮಾತ್ರ ಕ್ವಾರಂಟೈನ್ ಇರಲಿದ್ದು, ಸೆಪ್ಟೆಂಬರ್ 17 ಅಥವಾ 18 ಕ್ಕೆ ತಂಡವನ್ನು ಕೂಡಿಕೊಳ್ಳಬಹುದು.

5/5
ಇದರೊಂದಿಗೆ ದುಷ್ಮಂತ್ ಚಮೀರಾ ಹಾಗೂ ವನಿಂದು ಹಸರಂಗ ಸೆಪ್ಟೆಂಬರ್ 20 ರಂದು ನಡೆಯಲಿರುವ ಕೆಕೆಆರ್​ ವಿರುದ್ದದ ಮೊದಲ ಪಂದ್ಯಕ್ಕೆ ಲಭ್ಯರಿರುವುದು ಬಹುತೇಕ ಖಚಿತ. ಇನ್ನು ಬಹುತೇಕ ಆರ್​ಸಿಬಿ ಆಟಗಾರರು ಯುಎಇಗೆ ಬಂದಿಳಿದಿದ್ದು, ಅದರಂತೆ ಮೊದಲ ಪಂದ್ಯದ ವೇಳೆ ಎಲ್ಲರೂ ಪ್ಲೇಯಿಂಗ್ ಇಲೆವೆನ್​ ಆಯ್ಕೆಗೆ ಲಭ್ಯರಿರಲಿದ್ದಾರೆ.

Click on your DTH Provider to Add TV9 Kannada